»   » ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು

ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು

Posted By:
Subscribe to Filmibeat Kannada

ಪ್ರತೀ ವಾರ ಖಾಸಗಿ ಚಾನಲ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸೀಟ್ ನಲ್ಲಿ ಕೂರುವ ಸೆಲೆಬ್ರಿಟಿಗಳು ತಮ್ಮ ಬದುಕನ್ನು ಮತ್ತೊಮ್ಮೆ ಹಿಂತಿರುಗಿ ನೋಡುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ.

ಇನ್ನು ಸೆಲೆಬ್ರಿಟಿಗಳ ನೆಚ್ಚಿನ ಅಭಿಮಾನಿಗಳಂತೂ ಈ ಶೋ ಮೂಲಕ ತಮ್ಮ ನೆಚ್ಚಿನ ನಟ-ನಟಿಯರ ಬದುಕಿನ ಅಪರೂಪದ ಕ್ಷಣಗಳನ್ನು, ಅವರು ಮಾಡಿದ ಸಾಧನೆಯನ್ನು ಮತ್ತು ಅವರು ಬೆಳೆದು ಬಂದ ದಾರಿಯನ್ನು ತಿಳಿದುಕೊಳ್ಳುವ ಕುತೂಹಲವನ್ನು ಇಟ್ಟುಕೊಂಡಿರುತ್ತಾರೆ.[ಜನವರಿ 29 ರಂದು 'ವಿರಾಟ್' ದರ್ಶನ ಗ್ಯಾರೆಂಟಿ!]

ಅಂದಹಾಗೆ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವೀಕೆಂಡ್ ಗೆ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಮಿಸುತ್ತಿದ್ದಾರೆ.

ತುಂಬಾ ಜನರ ಅಪೇಕ್ಷೆಯ ಮೇರೆಗೆ ಈ ವೀಕೆಂಡ್ ನ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು ಆಗಮಿಸಿ ತಮ್ಮ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.[ದರ್ಶನ್ ತುಂಬಾ ಒಳ್ಳೆ ಹುಡುಗ ಅಂತ ಊರೆಲ್ಲಾ ಹೇಳ್ತಾರೆ]

ನಟ ದರ್ಶನ್ ಅವರ ಜೊತೆ ಅವರ ತಾಯಿ ಮೀನಾ ತೂಗುದೀಪ್ ಶ್ರೀನಿವಾಸ್, ಮತ್ತು ದರ್ಶನ್ ಅವರ ಗೆಳೆಯರು ಕೂಡ ಆಗಮಿಸಿದ್ದು, ಅವರ ಎಲ್ಲಾ ಸಿಹಿ-ಕಹಿ ನೆನಪುಗಳಿಗೆ ಜೊತೆಯಾಗಿದ್ದಾರೆ.ಹೆಚ್ಚಿನ ವಿವರಗಳನ್ನು ಓದಲು ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ ಮಾಡುತ್ತಾ ಹೋಗಿ....

ರಿಯಾಲಿಟಿ ಶೋ ಗೆ ಬರಲ್ಲ ಅಂದಿದ್ರು

'ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮುಂಬರುವ ಶೋಗಳಲ್ಲಿ ನಟ ದರ್ಶನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗೆ ದರ್ಶನ್ ಅವರು ಸರಣಿ ಟ್ವಿಟ್ಟರ್ ಮೂಲಕ ಉತ್ತರಿಸಿ 'ನಾನು ರಿಯಾಲಿಟಿ ಶೋ'ಗಳಲ್ಲಿ ಬಾಗವಹಿಸುವುದಿಲ್ಲ ಎಂದಿದ್ದರು.[ರಿಯಾಲಿಟಿ ಶೋ ಬಗ್ಗೆ ದರ್ಶನ್ ಬಿಚ್ಚಿಟ್ಟ ಟ್ವೀಟ್ ಮಾತು]

ರೈತರ ಸರಣಿ ಆತ್ಮಹತ್ಯೆಗೆ ನೊಂದು ನೋ ಎಂದಿದ್ದರು

ರೈತರ ಸರಣಿ ಆತ್ಮಹತ್ಯೆಯಿಂದ ನೊಂದ ನಟ ದರ್ಶನ್ ಅವರು ಯಾವುದೇ ರಿಯಾಲಿಟಿ ಶೋ ಇರಲಿ, ಆದರೆ ಅದರಿಂದ 1 ಲಕ್ಷ ರೂಪಾಯಿ ರೈತರ ಕುಟುಂಬಕ್ಕೆ ಪರಿಹಾರ ನೀಡಿದರೆ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ಧ ಎಂದು ಈ ಮೊದಲು ದರ್ಶನ್ ನುಡಿದಿದ್ದರು.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ರಿಯಲ್ ಹೀರೋ' ಅನ್ನೋದು ಇದಕ್ಕೆ!]

ಮನರಂಜನೆ ನೀಡಿದರೂ, ಸಮಾಜಕ್ಕೆ ಒಳ್ಳೆಯದು ಮಾಡುವುದು ಕರ್ತವ್ಯ

'ಮಜಾ ಟಾಕೀಸ್' ನಲ್ಲಿ ಭಾಗವಹಿಸಿದರೂ, ಅಲ್ಲಿ ಮನರಂಜನೆ ನೀಡಿದರೂ ಕೂಡ ಸಮಾಜಕ್ಕೆ ಒಳ್ಳೆಯದು ಮಾಡುವುದು ನನ್ನ ಆದ್ಯ ಕರ್ತವ್ಯ ಹಾಗೂ ನನ್ನ ದಾನ ದರ್ಮದ ನಿಬಂಧನೆಗಳಿಗೆ ಯಾವುದೇ ಚಾನಲ್ ಒಪ್ಪಿದಲ್ಲಿ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ಧ ಎಂದು ದರ್ಶನ್ ಈ ಮೊದಲು ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದರು.

ಜೀ ಕನ್ನಡ ತಂಡದಿಂದ ದರ್ಶನ್ ಗೆ ಆಹ್ವಾನ

ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಜೀ ಕನ್ನಡ ತಂಡ ಆಹ್ವಾನಿಸಿದಾಗ ದರ್ಶನ್ ಅವರು ಬಹಳ ಸಂತಸದಿಂದಲೇ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನನಗೆ ಬಹಳ ಇಷ್ಟ ನಾನು ಯಾವಾಗಲೂ ನೋಡುತ್ತಿರುತ್ತೇನೆ ಎಂದು ತಿಳಿಸಿದ್ದಾರೆ.(ಚಿತ್ರ ಕೃಪೆ: ಫೇಸ್ ಬುಕ್)

ಅಂತೂ ಇಂತೂ ದರ್ಶನ್ ಬಂದ್ರು

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪಕ್ಕಾ ಎಂಬುದನ್ನು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ನಕ್ಕು ನಕ್ಕು ಸುಸ್ತಾದ ದರ್ಶನ್

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ದರ್ಶನ್ ಅವರು ಈ ಕಾರ್ಯಕ್ರಮವನ್ನು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ ಅನ್ನೋದಕ್ಕೆ ಅವರ ತುಂಬು ನಗುವೇ ಸಾಕ್ಷಿ. ನಟ ದರ್ಶನ್ ಅವರು ಇವರೆಗೂ ಅಷ್ಟು ನಕ್ಕಿರಲಿಲ್ಲವೇನು ಅಷ್ಟು ನಕ್ಕು ರಮೇಶ್ ಅವರ ಜೊತೆ ಈ ವೀಕೆಂಡ್ ಕಾರ್ಯಕ್ರಮ ಎಂಜಾಯ್ ಮಾಡಿದ್ದಾರೆ.

Entire Karnataka had been waiting to see #ChallengingStarDarshan on #WeekendwithRamesh. Watch out for All the Fun n Excitement Next Weekend✌ Most Awaited Episode of #WeekendWithRamesh

Posted by D Company Fans Association - R on Sunday, January 24, 2016

ಪ್ರೋಮೋ ನೋಡಿ...

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ವೇದಿಕೆಯಲ್ಲಿ ದರ್ಶನ್ ಮತ್ತು ರಮೇಶ್ ಅರವಿಂದ್ ಅವರ ಜುಗಲ್ ಬಂದಿ ನೋಡಲು ಈ ಪ್ರೋಮೋ ನೋಡಿ...

English summary
Kannada Actor Challenging Star Darshan recently attended the 'Weekend with Ramesh - 2' and shared his experiences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada