'ಮನ್ಮಥ'ನಾಗಿದ್ದಕ್ಕೆ 20 ದಿನ ಆಸ್ಪತ್ರೆಯಲ್ಲಿದ್ದ ನಟ ಜಗ್ಗೇಶ್.!

By Harshitha

ನವರಸ ನಾಯಕ ಎಂಬ ಬಿರುದಿಗೆ ತಕ್ಕಂತೆ ನಟ ಜಗ್ಗೇಶ್ ಇಲ್ಲಿಯವರೆಗೂ ಭಿನ್ನ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಮೇಜಿನ ಹಂಗು ತೊರೆದು 'ಮನ್ಮಥ' ಎಂಬ ಸಿನಿಮಾದಲ್ಲಿ ಜಗ್ಗೇಶ್ ಕುರೂಪಿಯಾಗಿ ಕಾಣಿಸಿಕೊಂಡಿದ್ದರು.

ತಮಿಳಿನ ರೀಮೇಕ್ ಆಗಿದ್ದ 'ಮನ್ಮಥ' ಕನ್ನಡದಲ್ಲಿಯೂ ಯಶಸ್ವಿ ಆಯ್ತು. ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ 'ಮನ್ಮಥ' ಪ್ರೇಕ್ಷಕರ ಮನಸ್ಸು ಗೆದ್ದು ಬಿಟ್ಟ.

ರಾಜ್ಯದ ಮೂಲೆ ಮೂಲೆಯಲ್ಲೂ 'ಮನ್ಮಥ' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತು. ರಾಜೇಶ್ ಫರ್ನಾಂಡಿಸ್ ನಿರ್ದೇಶನದ ಗುರ್ಲಿನ್ ಛೋಪ್ರಾ, ಪೂಜಾ ಗಾಂಧಿ, ಕೋಮಲ್ ಅಭಿನಯದ 'ಮನ್ಮಥ' ಚಿತ್ರ ಜಗ್ಗೇಶ್ ಮೊಗದಲ್ಲಿ ಮಂದಹಾಸ ಮೂಡಿಸಿದ್ದು ನಿಜ. ಹಾಗೇ, 'ಮನ್ಮಥ'ನಿಂದಾಗಿ ಜಗ್ಗೇಶ್ 20 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೂ ಅಷ್ಟೇ ಸತ್ಯ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ....

ಅಷ್ಟಾವಕ್ರ

ಅಷ್ಟಾವಕ್ರ

ಗೂನು ಬೆನ್ನು, ಉಬ್ಬಲ್ಲು, ಸೊಟ್ಟ ಕಾಲು.. ಒಟ್ಟಾರೆ ಅಷ್ಟಾವಕ್ರನ ರೂಪದಲ್ಲಿ 'ಮನ್ಮಥ' ಸಿನಿಮಾದಲ್ಲಿ ನಟ ಜಗ್ಗೇಶ್ ಕಾಣಿಸಿಕೊಂಡಿದ್ದರು. ತಿಂಗಳಾನುಗಟ್ಟಲೆ ನಡೆದ 'ಮನ್ಮಥ' ಚಿತ್ರೀಕರಣದಲ್ಲಿ ಕುರೂಪಿಯಾಗಿ ಕಾಣಿಸಿಕೊಳ್ಳಲು ಹೋಗಿ ಜಗ್ಗೇಶ್ ಆರೋಗ್ಯಕ್ಕೆ ಆಪತ್ತು ಎದುರಾಗಿತ್ತು. ಅಂದು 'ಮನ್ಮಥ' ಚಿತ್ರೀಕರಣದಲ್ಲಿ ಆದ ಘಟನೆಯನ್ನ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್'ನಲ್ಲಿ ನಟ ಜಗ್ಗೇಶ್ ಮೆಲುಕು ಹಾಕಿದರು.

ಅವಾರ್ಡ್ ಬರಬೇಕಿತ್ತು.!

ಅವಾರ್ಡ್ ಬರಬೇಕಿತ್ತು.!

''ಮನ್ಮಥ' ಸಿನಿಮಾ ರೀಮೇಕ್ ಆಗದೇ ಹೋಗಿದ್ದರೆ, ನನಗೆ ಅವಾರ್ಡ್ ಬರ್ತಿತ್ತು. ಯಾಕಂದ್ರೆ, ನಾನು ತುಂಬಾ ಶ್ರಮ ವಹಿಸಿ ಮಾಡಿದ ಸಿನಿಮಾ ಅದು'' ಅಂತಾರೆ ನಟ ಜಗ್ಗೇಶ್

ಕಾಲೇ ಬರಲಿಲ್ಲ.!

ಕಾಲೇ ಬರಲಿಲ್ಲ.!

''ಸೊಟ್ಟ ಕಾಲಿನಿಂದ ನಡೆಯುತ್ತಿದ್ದರಿಂದ, ಇಪ್ಪತ್ತು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಕಾಲಲ್ಲಿ ಸಿಕ್ಕಾಪಟ್ಟೆ ಪ್ರಾಬ್ಲಂ ಆಗೋಯ್ತು. ನನಗೆ ಕಾಲೇ ಬರಲಿಲ್ಲ. ಆಮೇಲೆ ಆಸ್ಪತ್ರೆಯಲ್ಲಿ 60 ಕೆ.ಜಿ ಟ್ರಾಕ್ಷನ್ ಹಾಕಿದ್ದರು'' - ಜಗ್ಗೇಶ್, ನಟ

ಡೇಂಜರಸ್ ಪಾತ್ರ

ಡೇಂಜರಸ್ ಪಾತ್ರ

''ಟ್ರಾಕ್ಷನ್ ಹಾಕಿ ಇಪ್ಪತ್ತು ದಿನ ಆಸ್ಪತ್ರೆಯಲ್ಲಿ ಮಲಗಿಸಿದ್ದರು. ಇಂಥ ಪಾತ್ರಗಳು ಮಾಡಬಾರದು ಅಂತ ಅವತ್ತಿಂದ ನಿರ್ಧಾರ ಮಾಡಿದೆ. ಇವೆಲ್ಲ ನೋಡಲು ಚೆಂದ. ಆದ್ರೆ, ಮಾಡಲು ತುಂಬಾ ಡೇಂಜರಸ್. ಹಾಕಿದ ಶ್ರಮಕ್ಕೆ ತಕ್ಕ ಮೆಚ್ಚುಗೆ ಸಿಕ್ಕರೆ, ಖುಷಿ ಆಗುತ್ತೆ. ನನಗೆ ಖುಷಿ ಅಂದ್ರೆ, ಅವತ್ತಿನ ದಿನಕ್ಕೆ ಆ ಸಿನಿಮಾ ಅತಿ ಹೆಚ್ಚು ಕಲೆಕ್ಷನ್ ಮಾಡಿತ್ತು'' - ಜಗ್ಗೇಶ್, ನಟ

More from Filmibeat

English summary
Kannada Actor Jaggesh speaks about Kannada Movie Manmatha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X