ಸ್ನೇಹಿತನ ಗರ್ಲ್ ಫ್ರೆಂಡ್ ಮೇಲೆ ಪ್ರೇಮ್ ಗೆ ಕ್ರಶ್ ಆಗಿತ್ತಂತೆ.!
ಶೀರ್ಷಿಕೆ ಓದಿದ ಕೂಡಲೆ ಬಾಯಿ ಮೇಲೆ ಬೆರಳಿಡಬೇಡಿ. ನಾವು ಹೇಳಲು ಹೊರಟಿರುವುದು, ಲವ್ಲಿ ಸ್ಟಾರ್ ಪ್ರೇಮ್ ಸ್ಕೂಲ್ ನಲ್ಲಿದ್ದಾಗಿನ 'ಕ್ರಶ್' ಕಥೆ.
ಏಳನೇ ತರಗತಿಯಲ್ಲಿ ಓದುತ್ತಿರುವಾಗ, ಕಲಾವತಿ ಎಂಬ ತಮ್ಮ ಸಹಪಾಠಿಯ ಮೇಲೆ ಪ್ರೇಮ್ ಗೆ ಕ್ರಶ್ ಆಗಿತ್ತಂತೆ. ವಿಚಿತ್ರ ಅಂದ್ರೆ, ಕಲಾವತಿಯನ್ನ ಪ್ರೇಮ್ ಫ್ರೆಂಡ್ ಕೂಡ ಇಷ್ಟ ಪಡುತ್ತಿದ್ದರಂತೆ.
ಈ ವಿಚಾರವನ್ನ ಲವ್ಲಿ ಸ್ಟಾರ್ ಪ್ರೇಮ್ ಬಾಯ್ಬಿಟ್ಟಿದ್ದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಪ್ರೇಮ್ ಹಾಗೂ ರವಿಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಮೊದಲ ಸೆಗ್ಮೆಂಟ್ (ಸತ್ಯನಾ.. ಧೈರ್ಯನಾ..) ನಲ್ಲಿ 'ಸತ್ಯ'ವನ್ನ ಹೇಳಲು ಪ್ರೇಮ್ ಆಯ್ಕೆ ಮಾಡಿಕೊಂಡರು. ಆಗ, ''ನಿಮ್ಮ ಸ್ನೇಹಿತನ ಗರ್ಲ್ ಫ್ರೆಂಡ್ ಮೇಲೆ ನಿಮಗೆ ಕ್ರಶ್ ಆಗಿತ್ತಾ.?'' ಎಂದು ಶಿವಣ್ಣ ಪ್ರಶ್ನಿಸಿದರು.
ಅದಕ್ಕೆ ''ಹೌದು'' ಎನ್ನುತ್ತಾ, ''ಸ್ಕೂಲ್ ನಲ್ಲಿ ನನ್ನ ಫ್ರೆಂಡ್, ಒಬ್ಬ ಹುಡುಗಿಯನ್ನ ಇಷ್ಟ ಪಡುತ್ತಿದ್ದ. ಆ ಹುಡುಗಿ ಕಂಡ್ರೆ ನನಗೂ ಇಷ್ಟ ಇತ್ತು. ಅವನು ನನ್ನ ಕೈಯಲ್ಲಿ ಲವ್ ಲೆಟರ್ ಬರೆಯಿಸುತ್ತಿದ್ದ. ಆಕೆಯ ಹೆಸರು ಕಲಾವತಿ'' ಎಂದು ಪ್ರೇಮ್ ಹೇಳಿದರು.


Click it and Unblock the Notifications











