ಜಗಜ್ಯೋತಿ ಬಸವಣ್ಣ ಬಗ್ಗೆ ಹೆಮ್ಮೆ ಪಟ್ಟ ಪುನೀತ್ ರಾಜ್ ಕುಮಾರ್
ಧಾರ್ಮಿಕ ಮುಖಂಡ, ಸಮಾಜ ಸುಧಾರಕ, ವಚನಗಳ ಮೂಲಕ ವಿಚಾರ ಕ್ರಾಂತಿಗೆ ಅಡಿಪಾಯ ಹಾಕಿದ ಜಗಜ್ಯೋತಿ ಬಸವೇಶ್ವರ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಮ್ಮೆ ಪಟ್ಟಿದ್ದಾರೆ.
''ನಾನು ಇತ್ತೀಚೆಗೆ ಲಂಡನ್ ಗೆ ಹೋಗಿದ್ದಾಗ, ಅಲ್ಲಿನ ಥೇಮ್ಸ್ ನದಿ ಪಕ್ಕದಲ್ಲಿರುವ ಬಸವಣ್ಣನವರ ಪುತ್ಥಳಿ ಪಕ್ಕದಲ್ಲಿ ನಿಂತುಕೊಂಡು ತುಂಬಾ ಹೆಮ್ಮೆಯಿಂದ ಸಂತೋಷದಿಂದ ಫೋಟೋ ತೆಗೆಸಿಕೊಂಡೆ'' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಅದು 'ಕನ್ನಡದ ಕೋಟ್ಯಧಿಪತಿ' ವೇದಿಕೆ ಮೇಲೆ.
'ಕನ್ನಡದ ಕೋಟ್ಯಧಿಪತಿ-4' ಮುಕ್ತಾಯದ ಹಂತ ತಲುಪಿದೆ. ಈ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವೀಕೆಂಡ್ ನಲ್ಲಿ ಬೆಳಗಾವಿ ಮೂಲದ ನಿವೇದಿತಾ ಸ್ಪರ್ಧಿಯಾಗಿ ಭಾಗವಹಿಸಿದರು. ನಿವೇದಿತಾ ಧರಿಸಿದ್ದ ವಿಭೂತಿ ನೋಡುತ್ತಿದ್ದಂತೆಯೇ, ''ಬಹಳ ಖುಷಿ ಆಯ್ತು'' ಎಂದ ಪುನೀತ್ ರಾಜ್ ಕುಮಾರ್, ಬಳಿಕ ಬಸವಣ್ಣನವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

''ಹೊರಗಿನ (ವಿದೇಶ) ಜನ ಬಸವಣ್ಣ ಬಗ್ಗೆ ಎಷ್ಟೊಂದು ಓದಿ ತಿಳಿದುಕೊಂಡಿದ್ದಾರೆ. ಅದಕ್ಕೆ ಅವರ ಊರಿನಲ್ಲಿ ಬಸವಣ್ಣನ ಪುತ್ಥಳಿ ಇಟ್ಟುಕೊಂಡು ಗೌರವಿಸಿದ್ದಾರೆ. ನಾವೆಲ್ಲರೂ ಕನ್ನಡಿಗರಾಗಿ ಹೆಮ್ಮೆ ಪಡಬೇಕು'' ಅಂತ ಪುನೀತ್ ರಾಜ್ ಕುಮಾರ್ ಹೇಳಿದರು.
''ನಾನು ಅವರ (ಬಸವಣ್ಣ) ಬಗ್ಗೆ ತುಂಬಾ ಓದಿ ತಿಳಿದುಕೊಳ್ಳಬೇಕು ಅಂದ್ರೆ ಯಾವ ಪುಸ್ತಕ ಸಜೆಸ್ಟ್ ಮಾಡ್ತೀರಾ.?'' ಅಂತ ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಕೇಳಿದರು. ಅದಕ್ಕೆ ನಿವೇದಿತಾ, ''ವಚನ ಸಾಹಿತ್ಯವನ್ನೇ ಅಭ್ಯಾಸ ಮಾಡಬೇಕು. ಅವರ ಜೀವನದ ಸಾರವನ್ನೇ ಅದರಲ್ಲಿ ಬರೆದಿದ್ದಾರೆ'' ಎಂದರು.
ಅಂದ್ಹಾಗೆ, ನಿವೇದಿತಾ ಅವರ ತಂದೆ-ತಾಯಿ ಇಬ್ಬರೂ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕುಟುಂಬದಲ್ಲಿ ಉಂಟಾಗಿರುವ ಕಷ್ಟಗಳನ್ನು ನಿವಾರಿಸಲು ನಿವೇದಿತಾ 'ಕನ್ನಡದ ಕೋಟ್ಯಧಿಪತಿ' ವೇದಿಕೆಗೆ ಬಂದರು. ಆದ್ರೆ, ನಲವತ್ತು ಸಾವಿರವನ್ನು ಮಾತ್ರ ಪಡೆಯುವಲ್ಲಿ ಅವರು ಯಶಸ್ವಿಯಾದರು.


Click it and Unblock the Notifications











