Raghu Gowda: ತೆಲುಗು ಕಿರುತೆರೆಯಲ್ಲಿ ಉತ್ತಮ ನವನಾಯಕ ಪ್ರಶಸ್ತಿ ಗೆದ್ದ ಕನ್ನಡದ ನಟ ರಘು ಗೌಡ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಾಯಕ ಸಾಕೇತ್ ರಾಜ್ ಗುರು ಪಾತ್ರದಲ್ಲಿ ರಘು ಗೌಡ ನಟಿಸಿದ್ದರು. ಅದೇ ನಟ ಈಗ ರಘು ಗೌಡ ಇದೀಗ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ' ಧಾರಾವಾಹಿಯಲ್ಲಿ ನಾಯಕ ಮಿತ್ರ ಆಗಿ ನಟಿಸುತ್ತಿರುವ ರಘು ಗೌಡ ಪರಭಾಷೆಯ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಅಲ್ಲಿನ ವೀಕ್ಷಕರನ್ನು ಮೋಡಿ ಮಾಡುತ್ತಿದ್ದಾರೆ.

ಈ ಬಾರಿಯ ಜೀ ತೆಲುಗು ಕುಟುಂಬಂ ಅವಾರ್ಡ್ಸ್ ನಲ್ಲಿ 'ಉತ್ತಮ ನವನಾಯಕ' ಪ್ರಶಸ್ತಿಯನ್ನು ರಘು ಗೌಡ ಪಡೆದುಕೊಂಡಿದ್ದಾರೆ. ಸಂತಸದ ವಿಚಾರವೆಂದರೆ 'ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ' ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿ ಜೀ ಕನ್ನಡ ವಾಹಿನಿಯಲ್ಲಿ 'ಸೌಭಾಗ್ಯವತಿ' ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಆ ಮೂಲಕ ಕನ್ನಡ ಕಿರುತೆರೆಯಲ್ಲಿ ಮೋಡಿ ರಘು ಗೌಡ ಮಾಡುತ್ತಿದ್ದಾರೆ.
ರವಿ ಗರಣಿ ನಿರ್ದೇಶನದಡಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ನಾಯಕ ರಂಗೇಗೌಡ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ರಘು ಗೌಡ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆದರು.

ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀವನಚೈತ್ರ' ಧಾರಾವಾಹಿಯಲ್ಲಿ ನಾಯಕ ಆಗಿ ಅಭಿನಯಿಸಿದ್ದ ರಘು ಗೌಡ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೇವಯಾನಿ' ಧಾರಾವಾಹಿಯಲ್ಲಿ ನಾಯಕ ಶ್ರೀವತ್ಸನ ಪಾತ್ರಕ್ಕೆ ಜೀವ ತುಂಬಿದ್ದರು. 'ದೇವಯಾನಿ' ಧಾರಾವಾಹಿಯ ನಂತರ 'ನಮ್ಮನೆ ಯುವರಾಣಿ' ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸಿದ ರಘು ಗೌಡ ನಂತರ ಕಾಣಿಸಿಕೊಂಡಿದ್ದು ಪರಭಾಷೆಯ ಕಿರುತೆರೆಯಲ್ಲಿ.
'ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ' ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ರಘು ಗೌಡ ಅವರು ವೆಬ್ ಸಿರೀಸ್ ನಲ್ಲಿಯೂ ನಟಿಸಿದ್ದಾರೆ. 'ಸೂಪರ್ ಕಪಲ್' ಎನ್ನುವ ವೆಬ್ ಸಿರೀಸ್‌ನಲ್ಲಿ ರಘು ಗೌಡ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ತೇಜಸ್ವಿನಿ ಗೌಡ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.


Click it and Unblock the Notifications











