ಕನ್ನಡ ಕಿರುತೆರೆಗೆ ಕಾಲಿಟ್ಟ ಹ್ಯಾಂಡ್ಸಮ್ ಹೀರೋ ರಘು ಮುಖರ್ಜಿ
ಮೂಲತಃ ಬೆಂಗಾಲಿ ಆದರೂ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಘು ಮುಖರ್ಜಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಪ್ಯಾರಿಸ್ ಪ್ರಣಯ' ಚಿತ್ರದ ಮೂಲಕ ಕರ್ನಾಟಕದ ಮನೆ ಮನಗಳಲ್ಲಿ ಜನಪ್ರಿಯರಾದರು.
'ಸವಾರಿ', 'ದಂಡುಪಾಳ್ಯ', 'ಸೂಪರ್ ರಂಗ' ಸೇರಿದಂತೆ ಬೆರಳೆಣಿಕೆಯ ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಹ್ಯಾಂಡ್ಸಮ್ ಹೀರೋ ರಘು ಮುಖರ್ಜಿಗೆ ಫ್ಯಾನ್ ಫಾಲೋವಿಂಗ್ ಮಾತ್ರ ಸ್ವಲ್ಪ ಜಾಸ್ತಿನೇ ಇದೆ. [ಕನ್ನಡ ಕಿರುತೆರೆಯಲ್ಲಿ 'ಸ್ವಾತಿ ಮುತ್ತು' ಬೆಡಗಿ ಮೀನಾ!]
ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರುವ ರಘು ಮುಖರ್ಜಿ, ಇದೀಗ ಕನ್ನಡ ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮುಂದೆ ಓದಿ....

ಧಾರಾವಾಹಿ ಅಲ್ಲ!
ಕನ್ನಡ ಕಿರುತೆರೆ ಅಂದ ಕೂಡಲೆ, ರಘು ಮುಖರ್ಜಿ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ಅಂದುಕೊಳ್ಳಬೇಡಿ. ಬದಲಾಗಿ ರಿಯಾಲಿಟಿ ಶೋನ ಸಾರಥ್ಯ ವಹಿಸಿಕೊಂಡಿದ್ದಾರೆ. [ಕಿರುತೆರೆಗೆ 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಗ್ರ್ಯಾಂಡ್ ಎಂಟ್ರಿ]

ಯಾವುದು ಆ ರಿಯಾಲಿಟಿ ಶೋ?
'ಆಕ್ಷನ್ ಸ್ಟಾರ್' ಎಂಬ ರಿಯಾಲಿಟಿ ಶೋಗೆ ಮಿಸ್ಟರ್ ಇಂಡಿಯಾ ಹಾಗೂ ಮಿಸ್ಟರ್ ಇಂಟರ್ ನ್ಯಾಷನಲ್ ಖ್ಯಾತಿಯ ರಘು ಮುಖರ್ಜಿ ಸಾರಥ್ಯ ವಹಿಸಿಕೊಂಡಿದ್ದಾರೆ. ಹೆಣ್ಮಕ್ಕಳೇ ಸ್ಟ್ರಾಂಗ್ ಎನ್ನುವ ಈ ಸ್ಟಂಟ್ ರಿಯಾಲಿಟಿ ಶೋ ನಲ್ಲಿ ರಘು ಮುಖರ್ಜಿ ನಿರೂಪಣೆ ಮಾಡಲಿದ್ದಾರೆ.

ಯಾವ ವಾಹಿನಿಯಲ್ಲಿ?
ಹೊಸ ಹೊಸ ರಿಯಾಲಿಟಿ ಶೋ ನೀಡುತ್ತಾ ಬಂದಿರುವ ಸುವರ್ಣ ವಾಹಿನಿಯಲ್ಲಿ 'ಆಕ್ಷನ್ ಸ್ಟಾರ್' ಪ್ರಸಾರವಾಗಲಿದೆ.

'ಆಕ್ಷನ್ ಸ್ಟಾರ್' ವಿಶೇಷ...
'ಆಕ್ಷನ್ ಸ್ಟಾರ್' ರಿಯಾಲಿಟಿ ಶೋ ಪ್ರಮುಖ ಆಕರ್ಷಣೆ ಸಾಹಸ (ಆಕ್ಷನ್). ಸಾಹಸ ಅಂದಕೂಡಲೆ ಇದು ಪುರುಷರಿಗೆ ಮಾತ್ರ ಸೀಮಿತ ಎನ್ನುವ ಹಾಗಿಲ್ಲ. ಸ್ತ್ರೀಯರು ಕೂಡ ಪುರುಷರ ಸಮಾನವಾಗಿ ಸಾಹಸಮಯ ಕಾರ್ಯಗಳನ್ನು ಮಾಡಬಲ್ಲರು ಎಂಬುದನ್ನು ಕರ್ನಾಟಕಕ್ಕೆ ಪರಿಚಯಿಸುವ ಆಶಯ ಸುವರ್ಣ ವಾಹಿನಿಯದ್ದು.

10 ಬಲಿಷ್ಠ ಯುವತಿಯರು
ಕರ್ನಾಟಕದ 10 ಬಲಿಷ್ಠ ಯುವತಿಯರಿಗೆ ಈ 'ಆಕ್ಷನ್ ಸ್ಟಾರ್' ವೇದಿಕೆ ಸಜ್ಜಾಗಿದೆ. ಅವರವರ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಬಿಂಬಿಸುವುದು ಈ ಶೋನ ಮುಖ್ಯ ಉದ್ದೇಶ. ಸ್ಪರ್ಧಿಗಳ ಸಾಮರ್ಥ್ಯ ಮತ್ತು ವೀಕ್ಷಕರು ನೀಡುವ ಮತಗಳ ಅನುಸಾರ ಎಲಿಮಿನೇಷನ್ ಮಾಡಲಾಗುತ್ತದೆ.

ಪ್ರಸಾರ ಯಾವಾಗ?
ಯುವ ಸಾಹಸಿಯರ ಸ್ಟಂಟ್ ರಿಯಾಲಿಟಿ ಶೋ 'ಆಕ್ಷನ್ ಸ್ಟಾರ್' ಮಾರ್ಚ್ 19 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











