ಕಿರುತೆರೆಯಿಂದ ಹಿರಿತೆರೆಗೆ ಹಾರಿದ ರಕ್ಷಿತ್ ಗೌಡ: ಸಿನಿಮಾಗೆ ಎಂಟ್ರಿ ಕೊಡಲಿರೊ 'ಪದ್ಮಾವತಿ' ನಟ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಕನ್ನಡತಿ'ಯೂ ಒಂದು. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷನ ಚಿಕ್ಕಮ್ಮನ ಮಗ ಆದಿಯಾಗಿ ನಟಿಸಿದ್ದ ರಕ್ಷಿತ್ ಗೌಡ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದೆ ಜಾಸ್ತಿ. ಸಿಕ್ಕಂತಹ ಪಾತ್ರಗಳಿಗೆ ಅತ್ಯದ್ಭುತವಾಗಿ ಜೀವ ತುಂಬುವ ರಕ್ಷಿತ್ ಗೌಡ ಇದೀಗ ನಟನಾಗಿ ಭಡ್ತಿ ಪಡೆದಿದ್ದಾರೆ. ಅದು ಕೂಡಾ ಸ್ಯಾಂಡಲ್‌ವುಡ್‌ನಲ್ಲಿ!

ಸ್ಟಾರ್ ಡೈರೆಕ್ಟರ್ ಎಂದೇ ಜನಪ್ರಿಯತೆ ಪಡೆದಿರುವ ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ ರಕ್ಷಿತ್ ಗೌಡ. ಈ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಕೂಡಾ ಮುಕ್ತಾಯಗೊಂಡಿದೆ. ಈಗಾಗಲೇ ಮಹೇಶ್ ಬಾಬು ಹಾಗೂ ರಕ್ಷಿತ್ ಅವರ ಕಾಂಬೀನೇಷನ್‌ನ ಈ ಸಿನಿಮಾದ ಅನೌನ್ಸ್‌ಮೆಂಟ್ ಕೂಡಾ ಚಿತ್ರತಂಡ ಮಾಡಿದ್ದು, ಮುಂದಿನ ವರ್ಷ ಜನವರಿಯಲ್ಲಿ ಶೂಟಿಂಗ್ ಶುರುವಾಗಲಿದೆ.

kannada-actor-rakshit-gowda

ಅಂದ ಹಾಗೇ ರಕ್ಷಿತ್ ಗೌಡ ನಟನಾ ಜರ್ನಿ ಆರಂಭವಾಗಿದ್ದು 'ಪದ್ಮಾವತಿ' ಧಾರಾವಾಹಿಯ ಮೂಲಕ. 'ಪದ್ಮಾವತಿ' ಧಾರಾವಾಹಿಯಲ್ಲಿ ವಿಕ್ರಮ್ ಪಾತ್ರಕ್ಕೆ ಜೀವ ತುಂಬಿದ್ದ ರಕ್ಷಿತ್ ಗೌಡ ನಟಿಸಿದ್ದು ಎರಡೇ ಧಾರಾವಾಹಿಗಳಲ್ಲಿ ಆದರೂ ತಮ್ಮ ಸಹಜ ನಟನೆಯ ಮೂಲಕ ಗುರುತಿಸಿಕೊಂಡ ಹ್ಯಾಂಡ್ ಸಮ್ ಹುಡುಗ.

ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ನಾಟಕದತ್ತ ಆಸಕ್ತಿ ಹೊಂದಿದ್ದ ರಕ್ಷಿತ್ ಗೌಡಗೆ ಸಿನಿಮಾ ನಿರ್ಮಾಣ ಮಾಡುವ ಬಯಕೆಯಿತ್ತು. ಡೈರೆಕ್ಟರ್ ಅಲೆಮಾರಿ ಸಂತು ಅವರ ಬಳಿ ತರಬೇತಿಗೆ ಸೇರಿದ ರಕ್ಷಿತ್ ಸಿನಿಮಾ ನಿರ್ಮಾಣದ ವಿಚಾರಗಳನ್ನು ಹಂತಹಂತವಾಗಿ ತಿಳಿದುಕೊಂಡರು. ಅಷ್ಟರಲ್ಲಾಗಲೇ ಕಿರುತೆರೆಗೆ ಕಾಲಿಡುವ ಸುವರ್ಣಾವಕಾಶ ರಕ್ಷಿತ್ ಗೌಡಗೆ ಒದಗಿತ್ತು. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ರಕ್ಷಿತ್ ಗೌಡ ನಟನೆಯ ಹೊರತಾಗಿ ಅತ್ಯದ್ಭುತ ಡ್ಯಾನ್ಸರ್ ಹೌದು.

kannada-actor-rakshit-gowda

ಮಾಸ್ಟರ್ ಜಗದೀಶ್ ಅವರಿಂದ ನೃತ್ಯದ ಪ್ರಕಾರಗಳಾದ ಹಿಪ್​​​​ ಅಪ್​​​​​​​​​​​​​, ಕಾಂಟೆಪ್ಪರರಿ, ಫ್ರೀ ಸ್ಟೈಲ್ ಮುಂತಾದವುಗಳನ್ನು ಕಲಿತಿದ್ದಾರೆ. ಹತ್ತು ಹಲವು ವೇದಿಕೆಗಳಲ್ಲಿ ಡ್ಯಾನ್ಸ್ ಮಾಡಿ ಸೈ ಎನಿಸಿಕೊಂಡಿರುವ ರಕ್ಷಿತ್ ಗೌಡ ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮದೇ ಆದ ಡ್ಯಾನ್ಸ್ ಕ್ಲಾಸ್ ಕೂಡಾ ಶುರು ಮಾಡಿರುವ ರಕ್ಷಿತ್ ಗೌಡ ಡ್ಯಾನ್ಸ್ ಕ್ಲಾಸಿನ ಜೊತೆಗೆ ಜುಂಬಾ, ಏರೋಬಿಕ್ಸ್, ಯೋಗ, ಮ್ಯೂಸಿಕ್ ಹಾಗೂ ನಟನೆಯನ್ನು ಕೂಡಾ ಕಲಿಸಿಕೊಡುತ್ತಾರೆ.

ಇಷ್ಟೆಲ್ಲ ತಯಾರಿ ಮಾಡಿಕೊಂಡು ರಕ್ಷಿತ್ ಗೌಡ ಇದೀಗ ಕಿರುತೆರೆಯಿಂದ ಹಿರಿತೆರೆಗೆ ಹಾರಲಿದ್ದು, ಸಿನಿಪ್ರಿಯರ ಪ್ರೀತಿಗೆ ಪಾತ್ರರಾಗುತ್ತಾರಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಮಾತ್ರವಲ್ಲ ಇದರ ಜೊತೆಗೆ ಅವರು ಮತ್ತೆ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರಾ ಎಂಬ ವಿಚಾರವೂ ಕೂಡಾ ಗೊತ್ತಾಗಬೇಕಿದೆ.

More from Filmibeat

English summary
Tv actor Rakshit Gowda who stepped into Sandalwood who got promoted from supporting role to actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X