ನಟ ಸಿದ್ದು ಮೂಲಿಮನಿ ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?

By ಪ್ರಿಯಾ ದೊರೆ

ನಟ ಸಿದ್ದು ಮೂಲಿಮನಿ ಅವರ ನಟನೆಯ 'ಅಜ್ಞಾತವಾಸಿ' ಸಿನಿಮಾ 'ರಿಲೀಸ್‌ ಆಗಿದೆ. ಇದೇ ಖುಷಿಯ ಸಂದರ್ಭದಲ್ಲಿ ಸಿದ್ದು ಮೂಲಿ ಮನಿ ಅವರು ತಮ್ಮ ಸಂಭಾವನೆ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಬಣ್ಣದ ಲೋಕದಲ್ಲಿರುವವರ ಸಂಬಳ ಯಾರಿಗೂ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಅಷ್ಟಿರಬಹುದು, ಇಷ್ಟಿರಬಹುದು ಎಂದಷ್ಟೇ ಗೆಸ್‌ ಮಾಡಬಹುದು. ದೊಡ್ಡ ದೊಡ್ಡ ಸ್ಟಾರ್‌ಗಳ ಪೇಮೆಂಟ್‌ ಬಗ್ಗೆ ಮಾತ್ರವೇ ಆಗಾಗ ಸುದ್ದಿಯಾಗುತ್ತಿರುತ್ತದೆ.

ಇದೀಗ ನಟ ಸಿದ್ದು ಮೂಲಿಮನಿ ಅವರು ತಮಗೆ ದಿನಕ್ಕೆ ಎಷ್ಟು ಸಂಬಳ ಸಿಗುತ್ತದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

Kannada Actor Siddu moolimani remuneration revealed

ವ್ಯಕ್ತಿಯೊಬ್ಬ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿರುವ ಸಿದ್ದು ಮೂಲಿಮನಿ ಅವರು ಜೀರೋದಿಂದ ಇಂದು ಒಳ್ಳೆಯ ಸಂಪಾದನೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ರಿವೀಲ್ ಆಯ್ತು ಸಂಬಳ

ಸಿದ್ದು ಮೂಲಿಮನಿ ಅವರು ದಿನಕ್ಕೆ 35 ಸಾವಿರ ರೂಪಾಯಿಯವರೆಗೂ ಸಂಬಳ ಪಡೆದಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಆಫಿಶಿಯಲ್ ಬ್ರೋಕ್ ಬ್ರದರ್ಸ್ ಎಂಬ ಚಾನೆಲ್‌ನಲ್ಲಿ ಸಿದ್ದು ಮೂಲಿಮನಿಯವರು ಮಾತನಾಡಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಿಮ್ಮ ಸಂಬಳ ಎಷ್ಟು ಎಂದು ಕೇಳಿದ್ದಕ್ಕೆ ದಿನಕ್ಕೆ ಮುವತ್ತೈದು ಸಾವಿರದವರೆಗೂ ಸಂಪಾದನೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳಿ ನೀವು ಆಕ್ಟರ್ ಆಗಲು ಏನೆಲ್ಲಾ ಮಾಡಿದ್ದೀರಾ ಎಂದಿದ್ದಕ್ಕೆ ಬಹಳ ಕಷ್ಟ ಪಡಬೇಕಾಯ್ತು ಜೀರೋದಿಂದ ಶುರು ಮಾಡಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಆಕ್ಟರ್ ಆಗಲು ಏನು ಮಾಡಬೇಕು ಎಂದಿದ್ದಕ್ಕೆ ಒಂದಷ್ಟು ಸ್ಕಿಲ್ಸ್ ಗಳನ್ನು ಹೊಂದಿರಬೇಕು. ಅಲ್ಲದೇ ಸಕ್ಸೀಡ್ ಆಗುವವರೆಗೂ ಮರಳಿ ಮರಳಿ ಪ್ರಯತ್ನಿಸಬೇಕು ಎಂದು ಕೂಡ ತಿಳಿಸಿದ್ದಾರೆ.

ಸಿದ್ದು ನಟನೆಯ ಹಾದಿ

ನಟ ಸಿದ್ದು ಮೂಲಿಮನಿ ಕಳೆದ ಹಲವು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಚಿಕ್ಕವರಿದ್ದಾಗಿನಿಂದಲೂ ನಟಿಸಬೇಕು ಎಂದು ಕನಸು ಕಾಣುತ್ತಿದ್ದರು. 2015ರಲ್ಲಿ 'ರಂಗಿತರಂಗ' ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ', 'ಟೋರ ಟೋರ', 'ಲಂಬೋದರ', 'ರಾಜರಥ', 'ವಿಕ್ರಾಂತ್ ರೋಣ', 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ', 'ಧರಣಿ ಮಂಡಳ ಮಧ್ಯದೊಳಗೆ', 'ಅಭಿರಾಮ ಚಂದ್ರ', 'ಓಮಿನಿ', 'ಹ್ಯಾಪಿ ಬರ್ತ್ಡೇ ಟು ಮಿ', 'ಧಮಾಕ' ಚಿತ್ರಗಳಲ್ಲಿ ನಟಿಸಿದ್ದಾರೆ.

ಪತ್ನಿಯೂ ನಟಿ

ಇನ್ನು ನಟ ಸಿದ್ದು ಮೂಲಿಮನಿ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ. 'ಅನುರಾಗ ಸಂಗಮ', 'ಒಂದೂರಲ್ಲಿ ರಾಜರಾಣಿ', 'ಕೃಷ್ಣ ತುಳಸಿ', 'ಪಾರು' ಸೀರಿಯಲ್‌ಗಳಲ್ಲಿ ಸಿದ್ದು ಅವರು ನಟಿಸಿದ್ದಾರೆ. ಇದಲ್ಲದೇ ಡ್ಯಾನ್ಸ್ ಶೋ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. ಕಿರುತೆರೆಯಲ್ಲೇ ನಟಿ ಪ್ರಿಯಾ ಜೆ ಆಚಾರ್ ಅವರನ್ನು ಪ್ರೀತಿಸಿ ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ಸದ್ಯ ಪ್ರಿಯಾ ಅವರು 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇದಕ್ಕೂ ಮುನ್ನ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಧಿತಿ ಪಾತ್ರದಿಂದ ಫೇಮಸ್ ಆಗಿದ್ದಾರೆ. ಸದ್ಯ ಪ್ರಿಯಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರೆ, ಸಿದ್ದು ಅವರು ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೊಸ ಸಿನಿಮಾ ತೆರೆಗೆ

ಈ ವಾರ ನಟ ಸಿದ್ದು ಮೂಲಿಮನಿ ಅವರು ವಿಶೇಷ ಪಾತ್ರದಲ್ಲಿ ನಟಿಸಿರುವ ಚಿತ್ರ 'ಅಜ್ಞಾತವಾಸಿ' ತೆರೆಕಂಡಿದೆ. ಇದು ಒಂದು ಕೊಲೆಯ ಸುತ್ತ ನಡೆಯುವ ಕಥೆ. ರಂಗಾಯಣ ರಘು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೆ, ಸಿದ್ದು ಮೂಲಿಮನಿ ಹಾಗೂ ಪಾವನ ಗೌಡ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Actor Siddu moolimani revealed his paycheck in an recent interview;
Read more about: serial actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X