For Quick Alerts
  ALLOW NOTIFICATIONS  
  For Daily Alerts

  ಶಂಕರ್ ನಾಗ್, ಶಿವಣ್ಣಗೆ ನಟ ಶ್ರೀಮುರಳಿ ಕೊಟ್ಟ ಬಿರುದು ಏನು.?

  By Harshitha
  |

  ಶಂಕರ್ ನಾಗ್... ಕನ್ನಡ ಚಿತ್ರರಂಗದ ವೇಗಧೂತ. 'ಆಟೋ ರಾಜ', 'ಸಿಬಿಐ ಶಂಕರ್', 'ಎಸ್.ಪಿ.ಸಾಂಗ್ಲಿಯಾನ', 'ಸೀತಾರಾಮು' ಸೇರಿದಂತೆ ಅನೇಕ ಸೂಪರ್ ಡ್ಯೂಪರ್ ಹಿಟ್ ಗಳನ್ನು ಕೊಟ್ಟ 'ಕರಾಟೆ ಕಿಂಗ್'. ಶಂಕರ್ ನಾಗ್ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ಅತ್ಯದ್ಭುತ ಕಥೆಗಾರ ಮಾತ್ರ ಅಲ್ಲ. ಅಪರೂಪದ ವ್ಯಕ್ತಿ ಕೂಡ. ಅಂದಿನ ಕಾಲಕ್ಕೆ ಮೆಟ್ರೋ ಪ್ರಾಜೆಕ್ಟ್, ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಿಸುವ ಐಡಿಯಾ ಮಾಡಿದ್ದ ಕ್ರಿಯಾಶೀಲ ವ್ಯಕ್ತಿ.

  ಇನ್ನೂ ಶಿವರಾಜ್ ಕುಮಾರ್... 'ಮನಮೆಚ್ಚಿದ ಹುಡುಗಿ'ಯ ಮನ ಕದಿಯಲು ಮುದ್ದು ಮುಖದ ಹುಡುಗನಾಗಿ 'ಆನಂದ'ದಿಂದ ಬಂದು ಕನ್ನಡಿಗರ ಮನಗೆದ್ದ ಕರುನಾಡ ಚಕ್ರವರ್ತಿ.

  ಈ ಇಬ್ಬರು ನಟರಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಒಂದು ಬಿರುದು ಕೊಟ್ಟಿದ್ದಾರೆ. ಏನಪ್ಪಾ ಆ ಬಿರುದು ಅಂತ ಯೋಚನೆ ಮಾಡ್ತಿದ್ರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶ್ರೀಮುರಳಿ

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶ್ರೀಮುರಳಿ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೂರನೇ ಸೆಗ್ಮೆಂಟ್ ನಲ್ಲಿ ಶ್ರೀಮುರಳಿಗೆ ಶಿವಣ್ಣ ಒಂದು ಪ್ರಶ್ನೆ ಕೇಳಿದರು.

  ಮದುವೆ ಆಗಿ ಮನೆಯಲ್ಲಿರುವ ನಟಿ ಮಾನ್ಯಗೆ ಶ್ರೀಮುರಳಿ ಕಳುಹಿಸಿದ ಮೆಸೇಜ್ ಇದೇನಾ?ಮದುವೆ ಆಗಿ ಮನೆಯಲ್ಲಿರುವ ನಟಿ ಮಾನ್ಯಗೆ ಶ್ರೀಮುರಳಿ ಕಳುಹಿಸಿದ ಮೆಸೇಜ್ ಇದೇನಾ?

  ಏನು ಆ ಪ್ರಶ್ನೆ.?

  ಏನು ಆ ಪ್ರಶ್ನೆ.?

  ''ಇವರುಗಳಿಗೆ ನೀವು ಸೂಕ್ತವಾದ ಬಿರುದು ಕೊಡಬೇಕು'' ಅಂತ ಕೆಲವು ನಟರ ಹೆಸರಗಳನ್ನು ಶಿವಣ್ಣ ಹೇಳಿದರು. ಅದಕ್ಕೆ ಶ್ರೀಮುರಳಿ ಕೊಟ್ಟ ಉತ್ತರ ಹೀಗಿತ್ತು.

  ಬೆಲೆ ಕಟ್ಟಲಾಗದ ಆಸ್ತಿ ಡಾ.ರಾಜ್

  ಬೆಲೆ ಕಟ್ಟಲಾಗದ ಆಸ್ತಿ ಡಾ.ರಾಜ್

  ಡಾ.ರಾಜ್ ಕುಮಾರ್ ಗೆ 'ಬೆಲೆ ಕಟ್ಟಲಾಗದ ಆಸ್ತಿ' ಎಂದು ಬಿರುದು ಕೊಟ್ಟ ಶ್ರೀಮುರಳಿ, ಅಮಿತಾಬ್ ಬಚ್ಚನ್ ಗೆ 'ಒನ್ ಆಫ್ ದಿ ಲೆಜೆಂಡ್ಸ್' ಎಂದರು. ಇನ್ನೂ, ಕನಸಿನ ರಾಣಿ ಮಾಲಾಶ್ರೀಗೆ 'ಎವರ್ ಗ್ರೀನ್ ಕ್ವೀನ್' ಪಟ್ಟ ಕೊಟ್ಟರು ನಟ ಶ್ರೀಮುರಳಿ.

  'ಟ್ಯಾಲೆಂಟ್' ಶಂಕರ್ ನಾಗ್

  'ಟ್ಯಾಲೆಂಟ್' ಶಂಕರ್ ನಾಗ್

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಗೆ 'ಒನ್ ಆಫ್ ದಿ ಹ್ಯಾಂಡ್ಸಮ್ ಹೀರೋ' ಎಂದು ಕರೆದ ಶ್ರೀಮುರಳಿ, ಕರಾಟೆ ಕಿಂಗ್ ಶಂಕರ್ ನಾಗ್ ರನ್ನ 'ದಿ ಟ್ಯಾಲೆಂಟ್' ಎಂದು ವ್ಯಾಖ್ಯಾನಿಸಿದರು. ಇನ್ನೂ ಶಿವಣ್ಣ ರನ್ನ 'ಹ್ಯಾಂಡ್ಸಮ್' ಎಂದು ಕರೆದರು ರೋರಿಂಗ್ ಸ್ಟಾರ್ ಶ್ರೀಮುರಳಿ.

  English summary
  Kannada Actor Srimurali calls Shankar Nag as 'The Talent' in 'No.1 Yari with Shivanna' show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X