Just In
Don't Miss!
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್ 2021: ಸಂಪೂರ್ಣ ವೇಳಾಪಟ್ಟಿ, ಪಂದ್ಯದ ಸ್ಥಳ ಹಾಗೂ ತಂಡ
- News
ಕೊರೊನಾ ಲಸಿಕೆ ಪಡೆದ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್
- Automobiles
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬೇಬಿಮೂನ್ ಎಂದರೇನು? ಇದು ಏಕೆ ಒಳ್ಳೆಯದು?
- Finance
ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಚಂದ್ರ ಚಕೋರಿ' ಸಿನಿಮಾಗೆ ಮುರಳಿ ಆಯ್ಕೆಯ ಹಿಂದಿದೆ ರೋಚಕ ಸಂಗತಿ
'ಚಂದ್ರ ಚಕೋರಿ' ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಸುಮಾರು 500 ದಿನಗಳ ಯಶಸ್ವಿ ಪ್ರದರ್ಶನ ಕಂಡಿದ್ದ ಸಿನಿಮಾ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮೊದಲ ಸಿನಿಮಾ. ಚೊಚ್ಚಲ ಸಿನಿಮಾದಲ್ಲಿಯೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದರು ಶ್ರೀಮುರಳಿ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಬಾಗಿಯಾಗಿದ್ದ ಶ್ರೀಮುರಳಿ ತನ್ನ ಜೀವನದ ರೋಚಕ ಸನ್ನಿವೇಶಗಳನ್ನು ಮೆಲಕುಹಾಕಿದ್ದಾರೆ. ಇದರ ಜೊತೆಗೆ ಚಂದ್ರ ಚಕೋರಿ ಚಿತ್ರದ ಅಚ್ಚರಿಕರ ವಿಶಷಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ.
ಶ್ರೀಮುರಳಿ ಎಪಿಸೋಡ್ ಗೆ ಮುಂಚೆಯೇ ಸದ್ದು ಮಾಡ್ತಿರುವ ಈ ಹುಡುಗಿ ಯಾರು?
ಮುಂಬೈಯಿಂದ ಅಭಿನಯ ತರಬೇತಿ ಪಡೆದು ಬಂದ ತಕ್ಷಣ 'ಚಂದ್ರ ಚಕೋರಿ' ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ರು ಮುರಳಿ. ಆದ್ರೆ ಶ್ರೀಮುರಳಿ ಆ ಚಿತ್ರಕ್ಕೆ ಸೂಕ್ತವಲ್ಲ ಅವರನ್ನು ಬದಲಾಯಿಸಿ ಎಂದು ಅನೇಕರು ಹೇಳಿದ್ರಂತೆ. ಅನೇಕರ ಅಸಮಾಧಾನದ ನಡುವೆ 'ಚಂದ್ರ ಚಕೋರಿ' ಸಿನಿಮಾ ಆಗಿ ನಂತರ ಸೂಪರ್ ಹಿಟ್ ಆಗಿ ದಾಖಲೆ ಮಾಡಿದ ಸಿನಿಮಾವಾಗಿದೆ. ಮುಂದೆ ಓದಿ..

ಅಣ್ಣನ ಸಿನಿಮಾ ಎಂದು ಕತೆ ಕೇಳಿದ್ದ ಶ್ರೀಮುರಳಿ
ನಿರ್ದೇಶಕ ಎಸ್ ನಾರಾಯಣ್ 'ಚಂದ್ರ ಚಕೋರಿ' ಸಿನಿಮಾದ ನಿರ್ದೇಶಕರು. ಈ ಸಿನಿಮಾದಲ್ಲಿ ಶ್ರೀಮುರಳಿ ಅವರೆ ಮಾಡಬೇಕು ಎನ್ನುವುದು ಅವರ ಆಸೆ. ಅದರಂತೆ ಶ್ರೀಮುರಳಿ ಅವರ ಅಣ್ಣ ವಿಜಯ್ ರಾಘವೇಂದ್ರ ತಂದೆ ಚಿನ್ನೆಗೌಡ್ರು ಎಸ್ ನಾರಾಯಣ್ ಮನೆಗೆ ಹೋಗಿ ಸಿನಿಮಾ ಕತೆ ಕೇಳಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಣ್ಣ ವಿಜಯ್ ರಾಘವೇಂದ್ರ ಅವರ ಸಿನಿಮಾ ಕತೆ ಕೇಳುತ್ತಿದ್ದೇನೆ ಅಂತ ಅಂದುಕೊಂಡಿದ್ದ ಮುರಳಿಗೆ ಚಿತ್ರಕ್ಕೆ ನೀನೆ ನಾಯಕ ಎಂದು ಎಸ್ ನಾರಾಯಣ್ ಹೇಳಿದ ಮಾತು ಕೇಳಿ ಶಾಕ್ ಆಗಿದ್ರಂತೆ. ಆ ನಂತರ ಶ್ರೀಮುರಳಿ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ರು.
ಅಪಘಾತದ ಬಳಿಕ ಎಂಪಿ ಆದ ಶಶಿ ಕುಮಾರ್, ಟಿಕೆಟ್ ಸಿಕ್ಕಿದ್ದೆ ಅಚ್ಚರಿ.!

ಹೀರೋ ಮ್ಯಾಚ್ ಆಗ್ತಿಲ್ಲ ಬದಲಾಯಿಸಿ
ಶ್ರೀಮುರಳಿ 'ಚಂದ್ರ ಚಕೋರಿ' ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿ ಚಿತ್ರೀಕರಣ ಕೂಡ ಪ್ರಾರಂಭವಾಯಿತು. ಅದ್ಧೂರಿ ಮುಹೂರ್ತದೊಂದಿಗೆ 'ಚಂದ್ರ ಚಕೋರಿ' ಚಿತ್ರೀಕರಣ ಶುರುವಾಗಿತ್ತು. 12 ದಿನಗಳು ಚಿತ್ರೀಕರಣ ಕೂಡ ಮುಗಿದು ಹೋಗಿತು. ಆ ನಂತರ ಎಲ್ಲರು ಈ ಚಿತ್ರಕ್ಕೆ ಹೀರೋ ಮ್ಯಾಚ್ ಆಗ್ತಿಲ್ಲ ಬದಲಾಯಿಸಿ ಎಂದು ಎಸ್ ನಾರಾಯಣ್ ಅವರನ್ನು ತುಂಬಾ ಒತ್ತಾಯ ಮಾಡಿದ್ರಂತೆ. ಮುರಳಿ ತಂದೆಯ ದೊಡ್ಡ ಆಸೆ ಈ ಸಿನಿಮಾ ಆಗಿತ್ತು. ನಾರಾಯಣ್ ಅವರ ಒತ್ತಾಯದ ಮೇರೆಗೆ ಈ ಸಿನಿಮಾದಲ್ಲಿ ಮುರಳಿ ನಾಯಕನಾಗಿ ಮುಂದುವರೆದರಂತೆ. ಆ ನಂತರ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ಹೊರಹೊಮ್ಮಿತ್ತು.

ಕಮಲ್ ಹಾಸನ್ ರೇಂಜ್ ಗೆ ಅಭಿನಯ
ಶ್ರೀಮುರಳಿ ಮೊದಲ ಸಿನಿಮಾದಲ್ಲಿ ಅದ್ಭುತವಾದ ಅಭಿನಯ ನೀಡಿದ್ರು. ಮುರಳಿ ಅಭಿನಯ ಕಂಡು ಖ್ಯಾತ ಸಂಗೀತ ನಿರ್ದೇಶಕ ಎಸ್ ಎ ರಾಜ್ ಕುಮಾರ್ ಯಾರು ಈ ಹುಡುಗ ಇಷ್ಟು ಅಧ್ಬುತವಾಗಿ ಅಭಿನಯಿಸಿದ್ದಾರೆ. ಕಮಲ್ ಹಾಸನ್ ರೇಂಜ್ ಗೆ ಅಭಿನಯ ಮಾಡಿದ್ದಾರೆ ಎಂದು ಹಾಡಿಹೊಗಳಿದ್ದರಂತೆ. ಅಷ್ಟೆಯಲ್ಲ ಮುರಳಿ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬರಬೇಕು ಎಂದು ಹೇಳಿದ್ರಂತೆ. ಈ ಸಿನಿಮಾವನ್ನು ಇಷ್ಟಪಟ್ಟಿದ್ರಂತೆ ಎಸ್ ಎ ರಾಜ್ ಕುಮಾರ್.

ಸಿನಿಮಾ ನೋಡಿ ಮೆಚ್ಚಿದ್ದ ರವಿಚಂದ್ರನ್
ಕ್ರೇಜಿ ಸ್ಟಾಕ್ ರವಿಚಂದ್ರನ್ ಸಹ ಸಿನಿಮಾ ನೋಡಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ರಂತೆ. ಸಿನಿಮಾ ರಿಲೀಸ್ ಗೂ ಮೊದಲ ರವಿಚಂದ್ರನ್ ಅವರಿಗೆ ಸಿನಿಮಾ ತೋರಿಸುತ್ತಿರಲಿಲ್ಲವಂತೆ. ಕಾರಣ ಸಿನಿಮಾ ಹೇಗೆ ಮೂಡಿ ಬಂದರು ಅವರನ್ನು ಮೆಚ್ಚಿಸಲು ಸಾಧ್ಯವಾಗುತ್ತಿರ್ಲಿಲ್ಲವಂತೆ. ಹಾಗಾಗಿ ಹೆಚ್ಚಾಗಿ ಯಾವ ನಿರ್ಮಾಪಕರು, ನಿರ್ದೇಶಕರು ರವಿಚಂದ್ರನ್ ಅವರಿಗೆ ಸಿನಿಮಾ ತೋರಿಸುತ್ತಿರಲಿಲ್ಲವಂತೆ. ಆದ್ರೆ 'ಚಂದ್ರ ಚಕೋರಿ' ಸಿನಿಮಾ ನೋಡಿ ಭಾರಿ ಇಷ್ಟಪಟ್ಟಿದ್ರಂತೆ. ಈ ಸಿನಿಮಾದಲ್ಲಿ ತಪ್ಪು ಕಂಡುಹಿಡಿಯಲು ಏನು ಇಲ್ಲ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅಂತ ರವಿಮಾಮ ಕೂಡ ಹೇಳಿದ್ರಂತೆ.

'ಬಂಗಾರದ ಮನುಷ್ಯ' ನಂತರ 'ಚಂದ್ರ ಚಕೋರಿ'
ಬೆಳಗಾಂನ ಪ್ರಕಾಶ್ ಚಿತ್ರಮಂದಿರದಲ್ಲಿ ಕೊನೆಯವರೆಗೂ ನಾಲ್ಕು ಆಟಗಳು ಹೌಸ್ ಫುಲ್ ಪ್ರದರ್ಶನ ಕಂಡ ಸಿನಿಮಾ. ಬರೋಬ್ಬರಿ 500 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಿನಿಮಾ 'ಚಂದ್ರ ಚಕೋರಿ'. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ 'ಬಂಗಾರದ ಮನುಷ್ಯ' ಚಿತ್ರದ ನಂತರ ದಾಖಲೆ ಮಾಡಿದ ಕನ್ನಡ ಸಿನಿಮಾ 'ಚಂದ್ರ ಚಕೋರಿ'. ಈ ಚಿತ್ರದ ನಾಯಕ ಶ್ರೀಮುರಳಿ, ನಿರ್ದೇಶಕ ಎಸ್ ನಾರಾಯಣ್ ನಿರ್ದೇಶಕ ಎನ್ನುವುದು ಹೆಮ್ಮೆಯ ವಿಚಾರ.

ಸುಮಾರು ಎರಡು ವರ್ಷ ಚಿತ್ರೀಕರಣ
ಈ ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳು ಚಿತ್ರೀಕರಣಮಾಡಿದ್ದಾರಂತೆ. 2001ರಲ್ಲಿ ಪ್ರಾರಂಭವಾದ 'ಚಂದ್ರ ಚಕೋರಿ' 2003ರಲ್ಲಿ ರಿಲೀಸ್ ಆದ ಸಿನಿಮಾ. ಮುರಳಿ ಮೊದಲ ಸಿನಿಮಾ, ಅದ್ಧೂರಿಯಾಗಿ ಮೂಡಿ ಬರಬೇಕೆನ್ನುವ ಜವಬ್ದಾರಿ ನಿರ್ದೇಶಕ ಎಸ್ ನಾರಾಯಣ ಅವರಮೇಲಿತ್ತು. ಅದರಂತೆ ಈ ಸಿನಿಮಾವನ್ನು ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಅಕೇನ ದಿನಗಳ ಕಾಲ ಚಿತ್ರೀಕರಣ ಮಾಡಿ ಯಶಸ್ವಿಯಾಗಿದ್ದಾರೆ ಶ್ರೀಮುರಳಿ.

ಚಿತ್ರದ ನಾಯಕಿ ಪ್ರೀಯಾ ಪೇರಿರಾ
'ಚಂದ್ರ ಚಕೋರಿ' ಚಿತ್ರದಲ್ಲಿ ನಯಕಿಯಾಗಿ ಮಿಂಚಿದ್ದ ಸುಂದರಿ ಮುಂಬೈ ಮೂಲಕ ಪ್ರೀಯಾ ಪೇರಿರಾ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು ಪ್ರೀಯಾ. ಇದೆ ಅವರ ಮೊದಲ ಮತ್ತು ಕೊನೆಯ ಸಿನಿಮಾವಾಗಿದೆ. 'ಚಂದ್ರ ಚಕೋರಿ' ಸಿನಿಮಾ ಸಮಯದಲ್ಲಿ ಇಬ್ಬರು ಹೊಸಬರು. ಚಿತ್ರದಲ್ಲಿ ಪ್ರೀಯಾ ಅದ್ಭುತವಾಗಿ ಅಭಿನಯಿಸಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ನಿರ್ಮಾಣ
ಸದ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿರುವ ಎಚ್ ಡಿ ಕುಮಾರ ಸ್ವಾಮಿ ಅವರು 'ಚಂದ್ರ ಚಕೋರಿ' ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕುಮಾರಸ್ವಾಮಿ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಸಿನಿಮಾವಾಗಿತ್ತು. ಚಿತ್ರಕ್ಕೆ ಎಸ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ.