'ಪೈಲ್ವಾನ್' ಸಿನಿಮಾದ ನಂತರ ಮತ್ತೆ ಬಾಕ್ಸರ್ ಆದ ಕಿಚ್ಚ ಸುದೀಪ್
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಇದರ ಜೊತೆಗೆ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಈಗಾಗಲೆ ಅನೂಫ್ ಭಂಡಾರಿ ಮತ್ತು ಸುದೀಪ್ ಸಿನಿಮಾಗೆ ಭರ್ಜರಿ ತಯಾರಿ ನಡೆಯುತ್ತಿದೆ.
ಇದರ ಜೊತೆಗೆ ಪೈಲ್ವಾನ್-2 ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿದೆ. ಆದ್ರೆ ಆಗಲೆ ಸುದೀಪ್ ಮತ್ತೆ ಬಾಕ್ಸರ್ ಆಗಿ ಮಿಂಚಿದ್ದಾರೆ. ಹೌದು. ಕಿಚ್ಚ ಮತ್ತೆ ಬಾಕ್ಸ್ ಆಗಿದ್ದು ಸಿನಿಮಾದಲ್ಲಿ ಅಲ್ಲ. ಬದಲಿಗೆ ಬಿಗ್ ಬಾಸ್ ಗಾಗಿ. ಬಿಗ್ ಬಾಸ್ ಸೀಸನ್ 7 ಸಮೀಪಿಸುತ್ತಿದೆ. ಈಗಾಗಲೆ ಬಿಗ್ ಬಾಸ್ ಮೊದಲ ಪ್ರೋಮೋ ರಿಲೀಸ್ ಆಗಿದೆ. ಇದರ ಬೆನ್ನಲ್ಲೆ ಎರಡನೇ ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಬಿಗ್ ಬಾಸ್ ಎರಡನೆ ಪ್ರೋಮೋದಲ್ಲಿ ಕಿಚ್ಚ ಬಾಕ್ಸರ್ ಆಗಿದ್ದಾರೆ. ವಿಭಿನ್ನವಾದ ಪ್ರೋಮೋದಲ್ಲಿ ಕಿಚ್ಚ ತರಹೇವಾರಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಎಲ್ಲಿ ಹೋದ್ರು ಎಲ್ಲರು ಕೇಳುವ ಪ್ರಶ್ನೆ ಬಿಗ್ ಬಗ್ಗೆಯೆ. ಈ ಸಾರಿ ಮನೆಯಲ್ಲಿ ಬರಿ ಸೆಲೆಬ್ರಿಟಿಗಳಂತೆ, ಸೀರಿಯಲ್ ನವರು ಎಷ್ಟು, ಸಿನಿಮಾದವರೆಷ್ಟು, ರಾಜಕೀಯದವರೆಷ್ಟು, ಕಾಮನ್ ಮ್ಯಾನ್ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತಲ್ಲವಾ, ಹೀಗೆ ಬಿಗ್ ಬಾಸ್ ಬಗ್ಗೆ ಎಲ್ಲರು ಪ್ರಶ್ನೆ ಕೇಳಿ ಕೇಳಿ ಸುದೀಪ್ ಗೆ ಕೋಪ ತರಿಸುವ ಪ್ರೋಮೋ ಈಗಾಗಲೆ ವೈರಲ್ ಆಗಿದೆ.

ಈ ಬಾರಿಯ ಬಿಗ್ ಬಾಸ್ ಮುಂದಿನ ತಿಂಗಳಿಂದ ಪ್ರಾರಂಭವಾಗಲಿದೆ. ಈಗಗಾಲೆ ಬಿಗ್ ಬಾಸ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಇರಲಿದ್ದಾರೆ. ಈಗಾಗಲೆ ಒಂದಿಷ್ಟು ಸೆಲೆಬ್ರಿಟಿಗಳ ಹೆಸರು ವೈರಲ್ ಆಗಿದೆ. ಆದ್ರೆ ಸ್ಪರ್ಧಿಗಳ ಬಗ್ಗೆ ಇನ್ನು ಯಾವುದು ಅಧಿಕೃತ ಮಾಹಿತಿ ರಿವೀಲ್ ಆಗಿಲ್ಲ.


Click it and Unblock the Notifications