ಹುಚ್ಚ ವೆಂಕಟ್ ಗೆ ಸಹಾಯದ ಅವಶ್ಯಕತೆ ಇದೆ: ಸುದೀಪ್

Recommended Video

ಬಿಗ್ ಬಾಸ್ ಬಗ್ಗೆ ಮೊದಲೆ ಗೊತ್ತಾದ್ರೆ ನನ್ನ ಮೇಲೆ ಅನುಮಾನ ಪಡ್ತಾರೆ | FILMIBEAT KANNADA

ನಟ, ನಿರ್ದೇಶಕ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಹುಚ್ಚ ವೆಂಕಟ್ ಗೆ ಸಹಾಯದ ಅವಶ್ಯಕತೆ ಇದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಸೀಸನ್-7 ವಿಚಾರವಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಸುದೀಪ್ ಹುಚ್ಚ ವೆಂಕಟ್ ಬಗ್ಗೆ ಮಾತನಾಡಿದ್ದಾರೆ.

"ಬಿಗ್ ಬಾಸ್ ನಿಂದ ನೀವೇನಾದ್ರು ಕಲಿತೀರಿ ಅಂದ್ರೆ ಅದೂ ನಿಮಗೆ ಬಿಟ್ಟಿದ್ದು. ಹುಚ್ಚ ವೆಂಕಟ್ ಗೆ ಸಹಾಯದ ಅವಶ್ಯಕತೆ ಇದೆ ಅನಿಸುತ್ತೆ. ಹುಚ್ಚ ವೆಂಕಟ್ ಕೆಟ್ಟ ವ್ಯಕ್ತಿ ಅಂತು ಅಲ್ಲ. ಮಾತಲ್ಲಿ ವರಟುತನ ವಿದೆ, ಆದ್ರೆ ಅನಾವಶ್ಯಕವಾಗಿ ಮಾತನಾಡುವವರಲ್ಲ. ಏನೋ ಹೆಳಲು ಇಷ್ಟಪಡುತ್ತಾರೆ ಆದ್ರೆ ಅವರು ಹೇಳುವ ರೀತಿ ತಪ್ಪಿರ ಬಹುದು" ಎಂದು ಹೇಳಿದ್ದಾರೆ.

"ತಪ್ಪು ತುಂಬ ಜನರಲ್ಲಿ ಇದೆ. ಕೆಲವು ಸರಿ ಒಬ್ಬ ವ್ಯಕ್ತಿ ಒಳ್ಳೆಯವನಾಗಲು ಎಷ್ಟು ಜನ ಕಾರಣ ಆಗ್ತಾರೋ, ಕೆಟ್ಟವನಾಗಲು ಅನೇಕರು ಕಾರಣ ಆಗಿರುತ್ತಾರೆ, ಅವರಿಗೆ ಸಹಾಯದ ಅವಶ್ಯಕತೆ ಇದೆ. ಜೀವನದಲ್ಲಿ ನಾವು ಅಂದುಕೊಂಡಿದ್ದು ಏನು ನಡೆದಿಲ್ಲ ಅಂದಾಗ, ಕೆಲವು ನೋವುಗಳು ಏನೇನೊ ಮಾಡಿಸುತ್ತ ಇರುತ್ತೆ. ನಾವೆಲ್ಲ ಕುಳಿತುಕೊಂಡು ಸರಿ ಇಲ್ಲ ಎನ್ನುವುದು ಸುಲಭ. ಆದ್ರೆ ಅವರ ಮನಸ್ಥಿತಿ ಹೇಗಿರುತ್ತೆ ಎನ್ನುವುದು ಗೊತ್ತಿಲ್ಲ" ಎಂದು ಹುಚ್ಚ ವೆಂಕಟ್ ಬಗ್ಗೆ ಹೇಳಿದ್ದಾರೆ.

Kannada Actor Sudeep Speak About Huccha Venkat

ಬಿಗ್ ಬಾಸ್ ಸೀಸನ್-7 ಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳು 13 ರಿಂದ ಬಿಗ್ ಬಾಸ್ ಪ್ರಾರಂಭವಾಗಲಿದೆ. ನಟ ಮತ್ತು ನಿರ್ದೇಶಕ ಹುಚ್ಚ ವೆಂಕಟ್ ಕೂಡ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದರು. ಬಿಗ್ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಬಂದ ನಂತರ ಹುಚ್ಚ ವೆಂಕಟ್ ಕೆಲವು ದಿನಗಳು ಸುದ್ದಿಯಲ್ಲಿದ್ದರು. ಆ ನಂತರ ಸೈಲೆಂಟ್ ಆಗಿದ್ದ ವೆಂಕಟ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹುಚ್ಚ ವೆಂಕಟ್ ಅತಿರೇಕದ ಹುಚ್ಚಾಟ, ರಂಪಾಟ ನೋಡಿ ಅನೇಕರು ನಡುರಸ್ತೆಯಲ್ಲೆ ಹಿಡಿದು ಹೊಡೆಯುತ್ತಿದ್ದರೆ, ಇನ್ನು ಕೆಲವರು ಹಣದ ಸಹಾಯ ಮಾಡುತ್ತಿದ್ದಾರೆ. ಆತನನ್ನು ಹುಚ್ಚ ವೆಂಕಟ್ ಎಂದು ಕರೆಯಬೇಡಿ, ವೆಂಕಟ್ ಆಗಿಯೆ ಬಿಟ್ಟುಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ರೀಗ ಸುದೀಪ್ ಕೂಡ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

More from Filmibeat

English summary
Kannada actor Sudeep speak about previous Bigg Boss contestant Huccha Venkat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X