Chaithra J Achar: ಬೋಲ್ಡ್ ಫೋಟೋ ಶೂಟ್‌ನಲ್ಲಿ ಮಿಂಚಿದ ಚೈತ್ರಾ ಆಚಾರ್;
ಕನ್ನಡದ ಸಿನಿಮಾದಲ್ಲಿ ನಟಿಸುವ ನಟಿ ಮಣಿಯರು ಅಷ್ಟಾಗಿ ಗ್ಲಾಮರಸ್ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಳ್ಳುವುದು ತೀರಾ ವಿರಳ. ಅಂತಹದರಲ್ಲಿ ನಟಿ, ಹಾಗೆಯೇ ಗಾಯಕಿ ಆಗಿರುವ ಚೈತ್ರಾ ಜೆ ಆಚಾರ್ ಇವರು ಬಾಲಿವುಡ್ ಹೀರೋಯಿನ್‌ಗಿಂತ ನಾನೇನು ಕಡಿಮೆ ಇಲ್ಲ ಎನ್ನುವ ಹಾಗೆ ಬಟ್ಟೆ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋ ನೋಡಿದ ಚೈತ್ರಾ ಜೆ ಆಚಾರ್ ಅಭಿಮಾನಿಗಳು ಮಾತ್ರ ಶಾಕ್ ಆಗಿದ್ದಾರೆ.
ಇದೀಗ ಚೈತ್ರಾ ಜೆ ಆಚಾರ್ ಸಖತ್ ಬೋಲ್ಡ್ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುತ್ತಿರುತ್ತಾರೆ. ಚೈತ್ರಾ ಜೆ ಆಚಾರ್ ತಮ್ಮ ನಟನೆ ಜೊತೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಒಮ್ಮೆ ಹಾಡುತ್ತಾ ಜನರನ್ನು ಮೋಡಿ ಮಾಡಿದರೆ, ಇನ್ನೊಂದು ಕಡೆ ನಟನೆಯಿಂದ ಗಮನ ಸೆಳೆದಿದ್ದಾರೆ. ಹಾಗೆಯೇ ಇವರು ಸಖತ್ ಬೋಲ್ಡ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡು ನೆಟ್ಟಿಗರ ನಿದ್ದೆ ಕದ್ದಿದ್ದಾರೆ.

ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಇವರು ಭಾಗಿ ಆದಾಗಲೂ ಸಖತ್ ಬೋಲ್ಡ್ ಆಗಿರುವ ಡ್ರೆಸ್‌ಗಳನ್ನು ತೊಟ್ಟು ಮಿಂಚುತ್ತಿರುತ್ತಾರೆ. 'ಮಹಿರಾ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಚೈತ್ರಾ ಜೆ ಆಚಾರ್ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಒಳ್ಳೊಳ್ಳೆಯ ಆಫರ್‌ಗಳು ಚೈತ್ರಾಗೆ ಬರಲು ಶುರು ಆಯ್ತು. 'ತಲೆ ದಂಡ', 'ಗಿಲ್ಕಿ', 'ಅದೃಶ್ಯ' ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ 'ಟೋಬಿ' ಮತ್ತು 'ಸಪ್ತಸಾಗರದಾಚೆ ಎಲ್ಲೋ' ಈ ಎರಡು ಸಿನಿಮಾಗಳು ಚೈತ್ರಾ ಆಚಾರ್‌ಗೆ ಬಹಳಷ್ಟು ಹೆಸರು ತಂದುಕೊಟ್ಟಿರುವುದಂತು ಸತ್ಯ.
ಚೈತ್ರಾ ಫೋಟೋ ನೋಡಿ ಅಭಿಮಾನಿಗಳು ಫಿದಾ
'ಟೋಬಿ'ಯಲ್ಲಿ ಚೈತ್ರಾ ಆಚಾರ್ ನಟನೆಯನ್ನು ನೋಡಿ ಇಷ್ಟು ಚೆನ್ನಾಗಿ ನಟಿಸುತ್ತಾರಾ? ಎಂದು ನಿಬ್ಬೆರಗಾಗಿದ್ದೂ ಇದೆ. ಚೈತ್ರಾ ನಟನೆಗೆ ಫಿಲಂ ಫೇರ್ ಅವಾರ್ಡ್‌ಗಳನ್ನೂ ಪಡೆದುಕೊಂಡಿದ್ದಾರೆ. ಹಾಗೆಯೇ ಮೊದಲೇ ಹೇಳಿದ ಹಾಗೆ ಚೈತ್ರಾ ಅವರು ಉತ್ತಮ ಗಾಯಕಿಯು ಹೌದು. 'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಎನ್ನುವ ಹಾಡು ಹಾಡಿ ಎಲ್ಲರ ಮನಸನ್ನು ಈಕೆ ಗೆದ್ದಿದ್ದರು.
ಬಾಲಿವುಡ್ ರೇಂಜ್ ನಲ್ಲಿ ಫೋಟೋ ಶೂಟ್
ಇನ್ನೂ ಚೈತ್ರಾ ಆಚಾರ್ ಸಖತ್ ಆಗಿ ನಟನೆ ಮಾಡುತ್ತಾರೆ. ಹಾಡು ಕೂಡ ಹಾಡುತ್ತಾರೆ. ಹಾಗೆಯೇ ಸಖತ್ ಸ್ಟೈಲಿಶ್ ಆಗಿರುವ ಫೋಟೋಶೂಟ್ ಮಾಡಿಸಿಕೊಂಡು ಫ್ಯಾಷನ್ ಐಕಾನ್ ಅಂತಲೂ ಅನಿಸಿಕೊಳ್ಳುತ್ತಾರೆ. ಕೆಂಪು ಮತ್ತು ಪೀಚ್ ಬಣ್ಣದ ಮಾಡರ್ನ್ ಡ್ರೆಸ್ ಧರಿಸಿದ್ದು, ಬ್ಯಾಕ್ ಲೆಸ್ ಮತ್ತು ಡೀಪ್ ನೆಕ್ ಡ್ರೆಸಲ್ಲಿ ಚೈತ್ರಾ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಇನ್ನೂ ಚೈತ್ರಾ ಹಲವು ಬಾರಿ ಹೀಗೆಯೇ ಮಾಡರ್ನ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಕೆಟ್ಟದಾಗಿ ಕಾಮೆಂಟ್ ಬಂದಿತ್ತು.


Click it and Unblock the Notifications











