ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಕಾವ್ಯಾಂಜಲಿ' ನಟ ದರ್ಶಕ್: ದರ್ಶಕ್ ದಂಪತಿಯ ಸೀಮಂತ ಸಂಭ್ರಮ ಹೇಗಿತ್ತು?

By ಅನಿತಾ ಬನಾರಿ

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯವಿರುವ ನಟ ದರ್ಶಕ್ ಹಾಗೂ ನಟಿ ಶಿಲ್ಪ ರವಿ ಅವರು ಇದೀಗ ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ಬಹಳ ಅದ್ದೂರಿಯಾಗಿ ಸೀಮಂತ ಸಂಭ್ರಮ ಆಚರಣೆಯನ್ನು ಆಚರಿಸಿಕೊಂಡ ಇವರು ಬಹಳಷ್ಟು ಫೋಟೋಗಳನ್ನು ಮಾಡಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದರ ಮೂಲಕ ತಾವು ಮಗುವಿನ ಆಗಮನದ ಕಾಯುವುಕೆಯಲ್ಲಿರುವುದನ್ನು ಪ್ರೇಕ್ಷಕರಿಗೆ, ಫಾಲೋವರ್ಸ್‌ಗೆ ಹೇಳಿದ್ದಾರೆ.

ಗುಲಾಬಿ ಬಣ್ಣದ ಬಾರ್ಡರ್‌ಗೆ ಕ್ರೀಮ್ ಮೈ ಬಣ್ಣದ ಸೀರೆ ಉಟ್ಟಿರುವ ನಟಿ ಶಿಲ್ಪ ರವಿ ಅವರು ಬಹಳ ಮುದ್ದಾಗಿ ಸೀಮಂತ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೆಯೇ ಗುಲಾಬಿ ಬಣ್ಣದ ಟೀ ಶರ್ಟ್‌ಗೆ ಕ್ರೀಮ್ ಬಣ್ಣದ ಪ್ಯಾಂಟ್ ಹಾಕಿ ನಟ ದರ್ಶಕ್ ಅವರು ಕೂಡ ಕಾಣಿಸಿಕೊಂಡಿದ್ದಾರೆ.

Kannada actors Darshak and Shilpa couple in baby shower

'ಪದ್ಮಾವತಿ', 'ಕಾವ್ಯಾಂಜಲಿ', 'ಬೆಟ್ಟದ ಹೂವು' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ ನಟ ದರ್ಶಕ್ ಇದೀಗ ಪರಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು 'ನಾಗಿಣಿ', 'ಅರುಂಧತಿ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ ಶಿಲ್ಪ ರವಿ ಅವರು ಮದುವೆ ನಂತರ ಧಾರಾವಾಹಿ ಹಾಗೂ ನಟನೆಯಿಂದ ದೂರವೇ ಉಳಿದಿದ್ದಾರೆ.

"ಪ್ರೇಮಮ್ ಸಿನಿಮಾದಲ್ಲಿ ಜಾರ್ಜ್ ಡೇವಿಡ್ ಅವರು ತಮ್ಮ ಮಲಾರ್ ಅನ್ನು ಪಡೆಯಲಿಲ್ಲ. ಆದರೆ ನಾನು ನನ್ನ ಜೀವನದಲ್ಲಿ ನನ್ನ ಮಲಾರ್ ಅನ್ನು ಪಡೆದಿದ್ದೇನೆ. ತನ್ನ ನಗುವಿನೊಂದಿಗೆ ಎಲ್ಲವನ್ನು ಹಿಡಿದಿಟ್ಟು, ನನ್ನ ಪೂರ್ಣಗೊಳಿಸಿರುವ ನನ್ನ ಹೆಂಡತಿಗೆ ಶುಭ ಹಾರೈಕೆಗಳು" ಎಂದು ತಮ್ಮ ಹೆಂಡತಿಯೊಂದಿಗಿನ ಸೀಮಂತದ ಫೋಟೋಗಳನ್ನು ಶೇರ್ ಮಾಡಿಕೊಂಡು ಪ್ರೀತಿಯಿಂದ ಬರೆದುಕೊಂಡಿದ್ದಾರೆ ನಟ ದರ್ಶಕ್.

Kannada actors Darshak and Shilpa couple in baby shower

ಇಬ್ಬರು ನಟರು ಬೇರೆ ಬೇರೆ ವಾಹಿನಿಯ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಒಂದು ಅವಾರ್ಡ್ ಫಂಕ್ಷನ್‌ನಲ್ಲಿ ಭೇಟಿಯಾಗಿ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿ ಒಂದು ವರ್ಷದ ನಂತರ ದರ್ಶಕ್ ಅವರೇ ಮೊದಲು ಶಿಲ್ಪಾರವಿ ಅವರ ಮುಂದೆ ಮದುವೆಯ ಪ್ರಸ್ತಾಪವಿಟ್ಟರಂತೆ.

ಗುರು ಹಿರಿಯರ ಆಶೀರ್ವಾದ ಮತ್ತು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 2020 ನವೆಂಬರ್ ನಲ್ಲಿ ಮದುವೆಯಾದ ಈ ಜೋಡಿ ಇದೀಗ ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ಸೀಮಂತಕ್ಕೆ ಅವರ ಕುಟುಂಬಸ್ಥರು ಹಾಗೂ ಆಪ್ತಮಿತ್ರರು ಸೇರಿದ್ದರು ಎಂಬ ಮಾಹಿತಿ ಬಂದಿದೆ.

More from Filmibeat

English summary
Darshak and Shilpa are expecting their first child
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X