ಅಜ್ಜಿಯ ಜೊತೆ ಭೂಮಿ ಶೆಟ್ಟಿ ಟೆಂಪಲ್ ರನ್, ಕೋಪ ಮಾಡಿಕೊಂಡ ಕನ್ನಡಿಗರು...!

By ಪೂರ್ವ

ಕನ್ನಡದಲ್ಲಿ ಅಭಿನಯ ಮಾಡಿ ಬೇರೆ ಭಾಷೆಗಳಲ್ಲಿ ಅಭಿನಯಿಸಿ ತನ್ನದೇ ಆದ ಛಾಪನ್ನು ಮೂಡಿಸಿದವರು ಭೂಮಿ ಶೆಟ್ಟಿ. ಕಿನ್ನರಿ ಧಾರಾವಾಹಿಯ ಮೂಲಕ ಎಲ್ಲರ ಮನಸನ್ನು ಗೆದ್ದ ಕನ್ನಡತಿ. ಕುಂದಾಪುರ ಕನ್ನಡ ಮಾತನಾಡುತ್ತಾ ಎಲ್ಲರನ್ನೂ ರಂಜಿಸುತ್ತಿದ್ದ ಚೆಲುವೆ ಇದೀಗ ಅಜ್ಜಿಯ ಜೊತೆ ಒಂದು ದಿನದ ಪ್ರವಾಸ ಮಾಡಿದ್ದಾರೆ. ದೇವಾಲಯಕ್ಕೆ ತೆರಳಿದ್ದಾರೆ. ನನ್ನ ಸೂಪರ್ ಹಿರೋಯಿನ್ ಅಜ್ಜಿ ಎಂದು ಈ ವೇಳೆ ಭೂಮಿ ಶೆಟ್ಟಿ ಹೇಳಿಕೊಂಡಿದ್ದಾರೆ. ಭೂಮಿ ಶೆಟ್ಟಿ ಬಿಗ್ ಬಾಸ್ ಗೆ ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದರು

ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ತನ್ನ ಮನೆಯ ಮಗಳ ಹಾಗೆಯೇ ಎಲ್ಲರ ಮನಸನ್ನು ಗೆದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಆಗಿದ್ದಾರೆ. ಭೂಮಿ ಶೆಟ್ಟಿ ಮಾತಿಗೆ ಹಾಗೆಯೆ ಅವರು ನಡೆದುಕೊಳ್ಳುವ ರೀತಿಗೆ ಭೂಮಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಅಜ್ಜಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಮೂಕಾಂಬಿಕಾ ದೇವರ ದರ್ಶನ ಮಾಡಿದ್ದಾರೆ

kannada actres bhumi shetty temple run

ಹಾಗೆಯೇ ಕಾರಿನಲ್ಲಿ ಲಾಂಗ್ ಡ್ರೈವ್ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಖುಷಿಯಿಂದ ಭಕ್ತಿಗೀತೆಗಳನ್ನು ಹಾಡಿಕೊಂಡು ಎಲ್ಲರನ್ನೂ ರಂಜಿಸುತ್ತಿದ್ದರು. ಇದೇ ಸಮಯದಲ್ಲಿ ಭೂಮಿ ಶೆಟ್ಟಿ ಅಜ್ಜಿ ಸೀರೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಹಸಿರು ಬಣ್ಣದ ಸೀರೆಯುಟ್ಟು, ಪಿಂಕ್ ಬಣ್ಣದ ಬ್ಲೌಸ್ ತೊಟ್ಟು ಬಹಳ ಮುದ್ದಾಗಿ ಕಾಣಿಸುತ್ತಿದ್ದರು. ಕೊಲ್ಲೂರು ಮೂಕಾಂಬಿಕಾ ದೇವರ ದರ್ಶನ ಪಡೆದ ಭೂಮಿ ಶೆಟ್ಟಿ ಹಾಗೆಯೇ ಆಕೆಯ ಅಜ್ಜಿ ಕುಟುಂಬಸ್ಥರು ಪುನೀತರಾದರು. ಭೂಮಿ ಶೆಟ್ಟಿ ಅವರ ಅಜ್ಜಿ ಗೆ ದೇವರ ಮೇಲೆ ಅತಿಯಾದ ಭಕ್ತಿ ಎಂದು ಹೇಳಿದರೆ ತಪ್ಪಾಗದು ದಾರಿಯುದ್ದಕ್ಕೂ ಬಹಳ ಮುದ್ದಾದ ಮಾತುಗಳನ್ನು ಆಡುತ್ತಿದ್ದರು.

ಅಜ್ಜಿಯ ಮುಗ್ಧತೆಗೆ ಬೆರಗಾದ ನೆಟ್ಟಿಗರು

ಅಜ್ಜಿಯ ಮುದ್ದಿನ ಮೊಮ್ಮಗಳಾದ ಭೂಮಿ ಶೆಟ್ಟಿ ಕೊನೆಗೂ ಅಜ್ಜಿಯನ್ನು ದೇವಾಲಯಕ್ಕೆ ಕರೆದುಕೊಂಡು ಬಂದಿದ್ದಾರೆ. ಇನ್ನು ಭೂಮಿ ಶೆಟ್ಟಿ ಅಜ್ಜಿ ಜೊತೆಗಿನ ಜರ್ನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಭೂಮಿ ಶೆಟ್ಟಿಯವರು ಇಂಗ್ಲಿಷ್ ನಲ್ಲಿ ಮಾತನಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಭೂಮಿ ಶೆಟ್ಟಿ ಅವರೇ ನಿಮಗೆ ಕನ್ನಡ ಬರುವುದಿಲ್ಲವೇ? ಇನ್ನು ಕೆಲವರು ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನಿಮ್ಮ ಅಜ್ಜಿಯನ್ನು ಸೇಫ್ ಆಗಿ ಮನೆಗೆ ಕರೆದುಕೊಂಡು ಹೋಗಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ವೀಡಿಯೋದಲ್ಲಿ ಇಂಗ್ಲಿಷ್ ನಲ್ಲಿ ಬ್ಯಾಕ್ ರೌಂಡ್ ವಾಯ್ಸ್ ಇದೆ ಆ ಕಾರಣಕ್ಕೆ ಅನೇಕ ಜನ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಭೂಮಿ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡ ಅಭಿಮಾನಿಗಳು

ಕನ್ನಡದ ನೆಲದಲ್ಲಿ ಇದ್ದು ಕನ್ನಡ ಮಾತನಾಡದೆ ಇಂಗ್ಲಿಷ್ ನಲ್ಲಿ ಮಾತನಾಡಿರುವುದು ಮಾತ್ರ ಅಭಿಮಾನಿಗಳ ಮನಸ್ಸಿಗೆ ಬಹಳ ಬೇಸರ ತಂದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕೆಲವರು ಭೂಮಿ ಶೆಟ್ಟಿಯ ವಿಡಿಯೋ ಗೆ ಲೈಕ್ ಮಾಡಿದ್ದಾರೆ.ಬಹುತೇಕರು ಭೂಮಿ ಶೆಟ್ಟಿಯ ಇಂಗ್ಲೀಷ್ ವ್ಯಾಮೋಹ ಕಂಡು ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ತರೇಹವಾರಿ ಅಭಿಪ್ರಾಯಗಳ ಮೂಲಕ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X