ಬೋಲ್ಡ್ ಲುಕ್ ನಲ್ಲಿ ಮಿಂಚಿದ ಜಾಹ್ನವಿ, ಏನ್ ಮೇಡಂ ಹೊಸ ಸಿನಿಮಾ ಒಪ್ಕೊಂಡ್ರಾ ಎಂದ ಫ್ಯಾನ್ಸ್
ಅಧಿಪತ್ರ ಸಿನಿಮಾದಲ್ಲಿ ಬಹಳ ಬ್ಯುಸಿಯಾಗಿರುವ ನಟಿ ಜಾಹ್ನವಿ ಕಾರ್ತಿಕ್. ಆ ಸಿನಿಮಾದಲ್ಲಿ ಪತ್ರಕರ್ತೆಯಾಗಿ ಅಭಿನಯ ಮಾಡಿರುವುದು ಎಲ್ಲರಿಗೂ ಬಹಳ ಖುಷಿಯನ್ನು ನೀಡಿರುವ ಸಂಗತಿ. ಜಾಹ್ನವಿ ನಿಜ ಜೀವನದಲ್ಲಿ ಕೂಡ ಪತ್ರಕರ್ತೆ ಆಗಿದ್ದವರು. ಹಲವು ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸವನ್ನ ಮಾಡಿದ್ದಾರೆ ಜಾಹ್ನವಿ. ಇದೀಗ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಬಹಳಷ್ಟು ಖುಷಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಧಿಪತ್ರ ಸಿನಿಮಾ ರಿಲೀಸ್ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಎದೆಯೆತ್ತರಕ್ಕೆ ಮಗನಿದ್ದರು ಜಾಹ್ನವಿ ಸೌಂದರ್ಯ ಇಮ್ಮಡಿಯಾಗಿದೆಯೇ ಹೊರತು ಕುಂದಿಲ್ಲ.
ಜಾಹ್ನವಿ ನಿರೂಪಕಿ ಇದ್ದಾಗಲೇ ಸಾಕಷ್ಟು ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತಿತ್ತು . ಆದರೆ ಮನೆಯಲ್ಲಿ ಯಾರು ಒಪ್ಪದ ಕಾರಣ ಜಾಹ್ನವಿ ಕೂಡ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಆದರೆ ಮೊದಲಿಗೆ ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಜಾಹ್ನವಿ ಹಾಗೂ ಆಕೆಯ ಮಗ ಇಬ್ಬರೂ ಸ್ಟೇಜ್ ನಲ್ಲಿ ಸಖತ್ ಪರ್ಫಾರ್ಮೆನ್ಸ್ ಕೊಟ್ಟಿದ್ದರು. ಆ ವೇದಿಕೆಯಿಂದ ಜಾಹ್ನವಿ ಬದುಕೇ ಬಹಳ ಚೇಂಜ್ ಆಗಿ ಬಿಡುತ್ತದೆ ಎಂದು ಹೇಳಿದರೆ ತಪ್ಪಾಗದು. ಗಿಚ್ಚಿ ಗಿಲಿಗಿಲಿಯಲ್ಲಿ ಅವಕಾಶ ಸಿಕ್ಕಾಗ ಫ್ಯಾಮಿಲಿಯಲ್ಲಿ ಬಹಳಷ್ಟು ತೊಂದರೆಗಳು ಎದುರಾದವು.

ಜಾಹ್ನವಿ ಗೆ ತನ್ನ ಗಂಡನಿಂದಲೇ ಬೇರೆ ಆಗುವ ಸವಾಲು ಎದುರಾಯಿತು. ತನ್ನ ಮಗನ ಜೊತೆ ಜಾಹ್ನವಿ ಬದುಕಲು ನಿರ್ಧಾರ ಮಾಡುತ್ತಾರೆ. ಗಂಡನ ಜೊತೆ ವಿಚ್ಛೇದನ ಮಾಡಿಕೊಂಡ ಜಾಹ್ನವಿ ಬಹಳ ದುಃಖದಿಂದ ದೂರ ನಡೆಯುತ್ತಾರೆ. ಸಾಕಷ್ಟು ವರುಷದ ಸಂಬಂಧ ಕಡಿದು ಹೋಗುವುದು ಅಷ್ಟು ಸುಲಭದ ಮಾತಲ್ಲ. ಅಂತಹದರಲ್ಲಿ ಜಾಹ್ನವಿ ಗೆ ಆಕೆಯ ದಾಂಪತ್ಯ ಜೀವನವನ್ನು ಸರಿದೂಗಿಸಿಕೊಂಡು ಹೋಗಲು ಅಸಾಧ್ಯವಾಯಿತು. ಹಾಗೆಯೇ ಜಾಹ್ನವಿ ಗೆ ಉತ್ತಮವಾದ ಅವಕಾಶಗಳು ಬರತೊಡಗಿತು. ಆದರೆ ಇದೀಗ ಜಾಹ್ನವಿ ಅವರು ಸ್ವತಂತ್ರ ಹಕ್ಕಿಯ ಹಾಗೆ ಹಾರಡುತ್ತಿದ್ದಾರೆ. ತಾನು ಒಬ್ಬಳೆ ಎನು ಬೇಕಾದರೂ ಸಾಧಿಸಬಲ್ಲೇ ಎಂದು ಅನೇಕ ಬಾರಿ ಜಾಹ್ನವಿ ಹೇಳಿಕೊಂಡಿದ್ದಾರೆ.
ತುಂಡುಡುಗೆಯಲ್ಲಿ ಮಿಂಚಿದ ನಟಿ
ಜಾಹ್ನವಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ತುಂಡುಡುಗೆಯಲ್ಲಿ ಮಿಂಚುತ್ತಿದ್ದಾರೆ. ಇದರಿಂದ ಬಹಳಷ್ಟು ಜನರಿಗೆ ಜಾಹ್ನವಿ ಎಂದರೆ ಕೋಪ. ಅನೇಕ ಜಾಹ್ನವಿ ಅಭಿಮಾನಿಗಳು ಮುನಿಸಿಕೊಂಡು ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಲು ನೀನು ವಿಚ್ಛೇದನ ತೆಗೆದುಕೊಂಡಿದ್ದಾ ಎನ್ನುವ ಪ್ರಶ್ನೆಯನ್ನು ಜಾಹ್ನವಿಗೆ ಮಾಡಿದ್ದಾರೆ. ಆದರೆ ಜಾಹ್ನವಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡ ಹಾಗೆ ಕಾಣುವುದಿಲ್ಲ. ಇನ್ನು ಇದೀಗ ಜಾಹ್ನವಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರಿಗೆ ಬಹಳಷ್ಟು ಖುಷಿಯಾಗುತ್ತಿದೆ.
ಜಾಹ್ನವಿ ನೋಟಕ್ಕೆ ಅಭಿಮಾನಿಗಳು ಫಿದಾ
ಈ ಫೋಟೋ ಜಾಹ್ನವಿ ಅವರ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಲ್ಲ ಬದಲಾಗಿ ಅರ್ಚನಾ ಎನ್ನುವವರೂ ಜಾಹ್ನವಿ ಅವರನ್ನು ಬಹಳ ಸ್ಟೈಲಿಷ್ ಆಗಿ ರೆಡಿ ಮಾಡಿದ್ದಾರೆ. ಜಾಹ್ನವಿ ನೋಟಕ್ಕೆ ಬಹಳಷ್ಟು ಜನ ಫಿದಾ ಆಗಿದ್ದಾರೆ ಹಾಗೆಯೇ ಸಾಕಷ್ಟು ಲೈಕ್ ಹಾಗೆಯೇ ಕಾಮೆಂಟ್ ಕೂಡ ಬರುತ್ತಿದೆ. ಅನೇಕರು ಜಾಹ್ನವಿ ಇನ್ನೊಂದು ಸಿನಿಮಾ ಫೋಟೋ ಶೂಟ್ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಹ್ನವಿ ಮಾತು ಎಲ್ಲರಿಗೂ ಬಹಳ ಇಷ್ಟ . ಜೀವನದಲ್ಲಿ ಸ್ಟ್ರಗಲ್ ಮಾಡಿ ಪಟ್ಟು ಬಿಡದೆ ತನ್ನ ಇಷ್ಟದಂತೆ ಬದುಕುತ್ತಿರುವ ಛಲಗಾತಿ ಎಂದು ಹೇಳಿದರೆ ತಪ್ಪಾಗದು.
ಅಧಿಪತ್ರ ಸಿನಿಮಾದ ಮೂಲಕ ನಾಯಕಿಯಾಗಿ ಬಡ್ತಿ
ಮೊನ್ನೆಯಷ್ಟೇ ಜಾಹ್ನವಿ ಅಭಿನಯದ ಚೊಚ್ಚಲ ಚಿತ್ರ ಅಧಿಪತ್ರ ಬಿಡುಗಡೆಯಾಗಿದೆ. ಜಾಹ್ನವಿ ಅಭಿನಯಕ್ಕೆ ಮೆಚ್ಚುಗೆ ಕೂಡ ಸಿಕ್ತಿದೆ. ಇನ್ನು ಇದುವರೆಗೂ ಮುಂದಿನ ಸಿನಿಮಾದ ಬಗ್ಗೆ ಎಲ್ಲಿಯೂ ಜಾಹ್ನವಿ ಹೇಳಿಕೊಂಡಿಲ್ಲ. ಆದರೆ ನಿರೂಪಕಿಯಾಗಿ ಯಾವತ್ತೂ ಕೂಡ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ಎನ್ನುವ ಮಾತುಗಳನ್ನು ಹೇಳುತ್ತಲೇ ಬಂದಿರುವ ಜಾಹ್ನವಿ ಮುಂದೆ ಕನ್ನಡ ಚಿತ್ರರಂಗದ ಬ್ಯುಸಿ ನಟಿ ಆದರೆ ಅಚ್ಚರಿ ಇಲ್ಲ.


Click it and Unblock the Notifications











