ಜಾಹ್ನವಿ ರೀಲ್ಸ್ ನೋಡಿ ಬೆಕ್ಕಸ ಬೆರಗಾದ ಅಭಿಮಾನಿಗಳು,ಅಬ್ಬಬ್ಬಾ ಏನ್ ಡ್ಯಾನ್ಸ್ ರೀ ಎಂದ ಫ್ಯಾನ್ಸ್..!
ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಎಲ್ಲರ ಮನಸನ್ನು ಗೆದ್ದ ಜಾಹ್ನವಿ ಇದೀಗ ಸಿನಿಮಾದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಕಲರ್ಸ್ ಕನ್ನಡದಲ್ಲಿ ಸವಿರುಚಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದರು. ಆದರೆ ಸದ್ಯದ ಮಟ್ಟಿಗೆ ಆ ಕಾರ್ಯಮದ ನಿರೂಪಣೆಯಿಂದ ಜಾಹ್ನವಿ ಹೊರ ಬಂದಿದ್ದಾರೆ. ಸದ್ಯ ಮಾಡರ್ನ್ ಲುಕ್‌ನಲ್ಲಿ ಮಿಂಚುತ್ತಿರುವ ಜಾಹ್ನವಿ ನೋಡಿದ ಅನೇಕರು ಖುಷಿ ಪಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ನಮಗೆ ಮೊದಲಿದ್ದ ಜಾಹ್ನವಿ ಬಹಳ ಇಷ್ಟ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇಂಥಾ ಜಾಹ್ನವಿ ಇದೀಗ ರೀಲ್ಸ್ ಮಾಡುವ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದಾರೆ. ಸಖತ್ ಟ್ರೆಂಡಿಂಗ್‌ನಲ್ಲಿರುವ ರೀಲ್ಸ್ ಗೆ ಮಸ್ತ್ ಹೆಜ್ಜೆಯನ್ನು ಹಾಕಿದ್ದಾರೆ. ಜಾಹ್ನವಿ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಅನೇಕರು ಬೆಕ್ಕಸ ಬೆರಗಾಗಿದ್ದಾರೆ. ಎಷ್ಟು ಚೆನ್ನಾಗಿ ನೀವು ಡ್ಯಾನ್ಸ್ ಮಾಡ್ತೀರಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ಧಾರೆ. ಲೈಕ್ ಬಟನ್ ಒತ್ತುತ್ತಿದ್ದಾರೆ.

ಜಾಹ್ನವಿ ಇದೀಗ ಮುಂಚೆಗಿಂತಲು ಬಹಳ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದುಕೊಂಡ ಜಾಹ್ನವಿ ಇದೀಗ ತನ್ನ ಮಗನ ಜೊತೆ ಜೀವನ ಸಾಗಿಸುತ್ತಿದ್ದಾರೆ. ಒಬ್ಬಂಟಿಯಾಗಿ ಇದ್ದುಕೊಂಡೇ ತಾನು ಏನಾದರು ಸಾಧನೆ ಮಾಡಬೇಕು ಎನ್ನುವ ಕನಸನ್ನು ಹೊತ್ತುಕೊಂಡು ಬಂದ ಬೆಡಗಿ ಈಕೆ. ಈಗಾಗಲೇ ಸಿನಿಮಾಗಳ ಆಫರ್ ಜಾಹ್ನವಿ ಗೆ ಬರುತ್ತಿದೆ. ಈಗಾಗಲೇ ಒಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ತನ್ನ ಮಗನ ಜೊತೆ ಭಾಗವಹಿಸಿದ್ದರು.
ಸಿನಿಮಾದಲ್ಲಿ ನಟನೆ ಮಾಡುತ್ತಿರುವ ನಟಿ
ಅದಾದ ಬಳಿಕ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಕೊಂಚ ಮಟ್ಟಿಗೆ ಡಲ್ ಆಗಿ ಸ್ಪರ್ಧಿಸಿದ್ದರು. ಆದಾದ ಬಳಿಕ ಉತ್ತಮವಾಗಿ ತನ್ನನ್ನು ತಾನು ನಟನೆಯಲ್ಲಿ ತೊಡಗಿಸಿಕೊಂಡು ಎರಡನೇ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು. ಅದಾದ ಬಳಿಕ ಇದೀಗ ಅಧಿಪತ್ರ ಸಿನಿಮಾದಲ್ಲಿ ಜಾಹ್ನವಿ ನಟನೆ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟನಾಗಿ ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ. ಕೆ.ಆರ್ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರ ಇದಾಗಿದ್ದು ಬಹಳಷ್ಟು ಮಂದಿ ಕಾತರದಿಂದ ಕಾಯುತ್ತಿದ್ದಾರೆ.
ಅಧಿಪತ್ರ ಚಿತ್ರದ ನಿರೀಕ್ಷೆಯಲ್ಲಿ ಅಭಿಮಾನಿಗಳು
ಚಿತ್ರೀಕರಣವನ್ನು ಮಂಗಳೂರು ಹಾಗೆಯೇ ಉಡುಪಿ ಭಾಗದಲ್ಲಿ ಮಾಡಲಾಗಿದ್ದು ಅಧಿಪತ್ರ ಚಿತ್ರದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಮಾಡರ್ನ್ ಹಾಗೂ ಟ್ರೀಡಿಶನಲ್ ಲುಕ್ ನಲ್ಲಿ ಜಾಹ್ನವಿ ಬಹಳಷ್ಟು ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಇವರಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ/ ನಿರೂಪಕಿ ಆಗಾಗ ಫೋಟೋ ಮತ್ತು ರೀಲ್ ಅಪ್ಲೋಡ್ ಮಾಡುತ್ತಾ ಇರುತ್ತಾರೆ.


Click it and Unblock the Notifications











