Megha shetty: ಸಿಂಪಲ್ ಲುಕ್‌ನಲ್ಲಿ ಮೇಘಾ ಶೆಟ್ಟಿ: ಸಿಂಪಲ್ ಆಗಿದ್ರೆ ದೇವತೆ ಎಂದ ಫ್ಯಾನ್ಸ್!
ಮೇಘಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಎಂದರೆ ತಪ್ಪಾಗದು. ಮೇಘಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿ ಸಕ್ಕತ್ ಸದ್ದು ಮಾಡುತ್ತಿರುತ್ತಾರೆ . ಮೇಘಾ ಶೆಟ್ಟಿ ಫೋಟೋ ನೋಡಿದ ಅಭಿಮಾನಿಗಳು ಲೈಕ್ ಹಾಗೂ ಕಾಮೆಂಟ್‌ಗಳನ್ನು ಮಾಡಿ ಬಹಳ ಖುಷಿ ಪಡುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಮೇಘಾ ಶೆಟ್ಟಿ. ಏನೇ ಡ್ರೆಸ್ ಹಾಕಿದರು ಸಖತ್ ಕ್ಯೂಟ್ ಆಗಿ ಕಾಣಿಸುತ್ತಾರೆ.
ಮೇಘಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಹಾಗೆಯೇ ಚೆನ್ನಾಗಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಇದೀಗ ಮೇಘಾ ಶೆಟ್ಟಿ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ನೋಡುಗರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಮೇಘಾ ಫುಲ್ ನೆಕ್ ಕುರ್ತಾ ಧರಿಸಿರುವುದನ್ನು ಕಾಣಬಹುದು. ಇದು ತುಂಬಾ ಸಿಂಪಲ್ ಆಗಿತ್ತು. ಹಾಗೆಯೇ ಮೇಘಾ ಶೆಟ್ಟಿ ಈ ಬಟ್ಟೆಯಲ್ಲಿ ನೋಡಲು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಕ್ರೀಮ್ ಕಲರ್ ಕುರ್ತಾ ಧರಿಸಿ ಮೇಘ ಶೆಟ್ಟಿ ಮುದ್ದಾಗಿ ಪೋಸ್ ಕೊಟ್ಟಿದ್ದು ಸುಮಾರು 10 ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೇಘಾ ಶೆಟ್ಟಿ ಸಖತ್ ಮಾಡರ್ನ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಟ್ರೆಡಿಷನಲ್ ಲುಕ್‌ನಲ್ಲಿ ಕಾಣೋದೇ ಅಪರೂಪ ಆಗಿದೆ.
ಮೇಘಾ ಶೆಟ್ಟಿ ಸಿಂಪಲ್ ಲುಕ್ ನೋಡಿ ಅಭಿಮಾನಿಗಳು ಫಿದಾ
ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಸೀರೆ ಬಿಟ್ಟರೆ ಚೂಡಿದಾರ , ಸಲ್ವಾರ್‌ನಲ್ಲಿ ನೋಡಿದ ಜನರಿಗೆ ಮೇಘಾ ಮಾಡರ್ನ್ ಡ್ರೆಸ್ ತೊಟ್ಟಾಗ ಕೊಂಚ ಬೇಸರ ಆಗುತ್ತದೆ. ಇನ್ನು ಸಿಂಪಲ್ ಡ್ರೆಸ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿಯನ್ನು ನೋಡಿದ ಅಭಿಮಾನಿಗಳು ನೀವೆಷ್ಟು ಸಿಂಪಲ್ ಎಂದು ಕಾಮೆಂಟ್ ಮಾಡುತ್ತಾ ಇದ್ದಾರೆ. ಇನ್ನು ಕೆಲವರು ಇಷ್ಟು ಸಿಂಪಲ್ ಡ್ರೆಸ್ ನಲ್ಲಿ ನೀವು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳತ್ತಾ ಇರುತ್ತಿರಾ ಎಂದು ಹೇಳಿದ್ದಾರೆ.

ನ್ಯೂಡ್ ಮೇಕಪ್ ಲುಕ್‌ನಲ್ಲಿ ಮೇಘಾ
ನಟಿ ಸಿಂಪಲ್ ಆಗಿದ್ದಂತಹ ಇಯರಿಂಗ್ಸ್ ಧರಿಸಿದ್ದರು. ನ್ಯೂಡ್ ಮೇಕಪ್ ಅವರ ಈ ಕುರ್ತಾಗೆ ಹೇಳಿ ಮಾಡಿಸಿದಂತಿತ್ತು. ಹಾಗೆಯೇ ಹಸಿರು ಬಣ್ಣದ ಬಿಂದಿಯನ್ನ ಹಣೆಗೆ ಇಟ್ಟಿದ್ದರು. ಇನ್ನು ಸಿಂಪಲ್ ಆಗಿ ಇದ್ದ ಹೇರ್ ಸ್ಟೈಲ್ ನೋಡಿದ ಜನರು ಮಾತ್ರ ಬಹಳ ಖುಷಿ ವ್ಯಕ್ತಪಡಿಸಿದರು. ಹಾಗೆಯೇ ಕೈಗಳಿಗೆ ಕಪ್ಪು ಬಣ್ಣದ ನೈಲ್ ಪಾಲಿಶ್ ಹಚ್ಚಿ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡು ಇದ್ದಾರೆ. ಇನ್ನು ಮೇಘಾ ಶೆಟ್ಟಿ ಬಟನ್ ಕೂರ್ತವನ್ನು ಹಾಕಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ನಟಿ
ಇವರನ್ನು ನೋಡಿದ ಅಭಿಮಾನಿಗಳು ಮೇಘಾ ಅವರೇ ನೀವು ಸುಂದರವಾಗಿ ಕಾಣಲು ನಿಮ್ಮ ನಗುವೆ ಕಾರಣ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿದ್ದಾರೆ ಹಾಗೆಯೇ 1.2 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಮೇಘಾ ಶೆಟ್ಟಿ ಫಾಲೋವರ್ಸ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸಾಲು ಸಾಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು ಸದ್ಯ ಗ್ರಾಮಯಣ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಹಾಗೆಯೇ ಪ್ರಜ್ವಲ್ ದೇವರಾಜ್ ಜೊತೆ ಕೂಡ ಮೇಘಾ ಅಭಿನಯ ಮಾಡಲಿದ್ದಾರೆ.


Click it and Unblock the Notifications











