Mokshitha Pai ; ಊಟಿಯಲ್ಲಿ ಮೋಕ್ಷಿತಾ ಪೈ ,ಪ್ರಕೃತಿಯ ಮಡಿಲಿನಲ್ಲಿ ಮುದ್ದು ಮೊಗದ ಚೆಲುವೆ..!
ಪಾರು ಧಾರವಾಹಿ ಮೂಲಕ ಖ್ಯಾತಿ ಪಡೆದ ಹಾಲ್ಗೆನ್ನೆ ಚೆಲುವೆ ಮೋಕ್ಷಿತಾ ಪೈ. ಪಾರು ಧಾರಾವಾಹಿ ಆದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮೋಕ್ಷಿತ ಸದ್ಯ ಹಲವಾರು ಸುಂದರವಾದ ತಾಣಗಳಿಗೆ ಇವರು ವಿಸಿಟ್ ಮಾಡಿ ಪ್ರಕೃತಿಯ ರಮಣಿಯ ದೃಶ್ಯವನ್ನು ಅಸ್ವಾದಿಸಿದ್ದಾರೆ. ತನ್ನ ತಾಯಿ ಹಾಗೂ ಗೆಳತಿಯರೊಡನೆ ಮೋಕ್ಷಿತ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಊಟಿಗೆ ತೆರಳಿದ್ದಾರೆ.
ಗೆಳೆಯರೊಡನೆ ಬಹಳ ಖುಷಿಯಾಗಿ ನಿಸರ್ಗದ ಮಡಿಲಿನಲ್ಲಿ ಖುಷಿ ಪಡುತ್ತಿದ್ದಾರೆ . ಇನ್ನೂ ಊಟಿ ಪ್ರವಾಸಿಗರು ನೋಡಲೇಬೇಕಾದ ರಮಣೀಯ ಸ್ಥಳ.ತಮಿಳುನಾಡಿನ ನೀಲಗಿರಿ ಪರ್ವತದ ತಪ್ಪಲಲ್ಲಿ ಇದೆ. ಇಲ್ಲಿ ಹೆಚ್ಚಾಗಿ ಕಾಫಿ ಮತ್ತು ಚಹಾ ತೋಟಗಳ ಹೊರತಾಗಿ, ಕೋನಿಫರ್, ನೀಲಗಿರಿ, ಪೈನ್ ಮತ್ತು ವಾಟಲ್‌ನಂತಹ ಮರಗಳು ಕಂಡು ಬರುತ್ತದೆ. ಇನ್ನೂ ಮೋಕ್ಷಿತ ಪೈ ಮಾತ್ರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈಗ ಮಳೆಗಾಲ ಆಗಿರುವುದರಿಂದ ಕೊಂಚ ಚಳಿ ಹೆಚ್ಚಾಗಿಯೇ ಇದೆ. ಈ ಕೊರೆವ ಚಳಿಯಲ್ಲಿ ಮೋಕ್ಷಿತ ಪೈ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅಪ್ಲೋಡ್ ಮಾಡಿದ್ದಾರೆ.

ಫೋಟೋ ನೋಡಿದ ಅಭಿಮಾನಿಗಳು ಫೋಟೋ ಬಹಳ ಚೆನ್ನಾಗಿ ಮೂಡಿ ಬಂದಿದೆ ಹಾಗೆಯೇ ನೀವು ತುಂಬಾ ಕ್ಯೂಟ್ ಆಗಿದ್ದಿರ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಮೋಕ್ಷಿತಾ ಪೈ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದು, ಅವರು ತಮ್ಮ ಖುಷಿಯನ್ನೂ ಫೋಟೋ ಸಮೇತ
ಅಭಿಮಾನಿಗಳ ಜೊತೆ ಆಗಾಗ ಹಂಚಿ ಕೊಳ್ಳುತ್ತಿರುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಪಾರು ಖ್ಯಾತಿಯ ಮೋಕ್ಷಿತ ಉತ್ತಮ ಕಥೆಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಪಾರು ಧಾರಾವಾಹಿಯಲ್ಲಿ ಅಭಿನಯ ಮಾಡಿ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಹಾಗೆಯೇ ಎಲ್ಲಿ ಹೋದರು ಮೋಕ್ಷಿತ ಅವರನ್ನು ಪಾರು ಎಂದೇ ಕರೆಯುತ್ತಾರೆ. ಇನ್ನೂ ಮೋಕ್ಷಿತ ಹೆಚ್ಚಾಗಿ ಆಕೆಯ ತಮ್ಮನೊಂದಿಗೆ ಕೂಡ ಕಾಲ ಕಳೆಯುತ್ತಿರುತ್ತಾರೆ. ಇನ್ನೂ ಮುದ್ದು ಮುಖದ ಚೆಲುವೆಗೆ ಅನೇಕ ಜನ ಫ್ಯಾನ್ಸ್ ಫಿದಾ ಆಗಿದ್ದಾರೆ.

ಒಟ್ಟಿನಲ್ಲಿ ಮಳೆಗಾಲದಲ್ಲಿ ಮೋಕ್ಷಿತಾ ಗೆಳೆಯರೊಡನೆ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಮೋಕ್ಷಿತ ಸಾಕಷ್ಟು ಭಾರಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಹಾಗೆಯೇ ಸಾರಿಯುಟ್ಟ ಪಾರು ಖ್ಯಾತಿಯ ಮೋಕ್ಷಿತಾ ಬಹಳ ಕ್ಯೂಟ ಆಗಿ ಕಾಣಿಸುತ್ತಿದ್ದರು. ಇನ್ನೂ ಈಕೆಯ ಹಲವಾರು ಫೋಟೋಗಳಿಗೆ ಸಾಕಷ್ಟು ಲೈಕ್ ಕಾಮೆಂಟ್ ಗಳು ಬಂದಿದೆ.


Click it and Unblock the Notifications











