ಕೆಂಪು ಸಾರಿಯುಟ್ಟು ಮಿಂಚಿದ ಮೌನ, ದೇವತೆ ಎಂದ ಅಭಿಮಾನಿಗಳು ..!
ಎಲ್ಲರ ಮನಗೆದ್ದ ಮುದ್ದು ಮೊಗದ ಚೆಲುವೆ ಬೇರೆ ಯಾರು ಅಲ್ಲ ಅವರೇ ನಮ್ಮ ರಾಮಾಚಾರಿ ಧಾರಾವಾಹಿಯ ನೆಚ್ಚಿನ ನಟಿ ಚಾರು ಅಲಿಯಾಸ್ ಮೌನ ಗುಡ್ಡೆಮನೆ. ಮೌನ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಆಗಿರುವ ಮುದ್ದು ಮೊಗದ ಬೆಡಗಿ. ಆಗಾಗ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತನೇ ಇರ್ತಾರೆ. ಇತ್ತೀಚಿನ ದಿನಗಳಲ್ಲಿ ಮೌನ ಗುಡ್ಡೆ ಮನೆಯವರು ತೊಟ್ಟ ಸಾರಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ . ಕನ್ನಡದ ಕಿರುತೆರೆಯ ಬಹಳ ಸುಂದರ ನಟಿಯರ ಪೈಕಿ ಮೌನ ಗುಡ್ಡೆ ಮನೆ ಕೂಡ ಒಬ್ಬರು. ಯಾವ ನಟಿಯರಿಗಿಂತ ಇವರು ಕಮ್ಮಿಯಲ್ಲಿ ಇಲ್ಲ.
ಇವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋವನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಹಾಗೆಯೇ ಮೌನ ಅವರು ಇತ್ತೀಚಿನ ದಿನಗಳಲ್ಲಿ ಗುರು ರಾಘವೇಂದ್ರ ಸ್ವಾಮಿಯ ದರ್ಶನವನ್ನು ಕೂಡ ಪಡೆದುಕೊಂಡಿದ್ದಾರೆ. ದೇವರ ದರ್ಶನ ಮಾಡಿದ ಬಳಿಕ ಬಹಳ ಪುನೀತನಾದ ಭಾವನೆಯನ್ನು ಇವರು ಒಳಗೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗದು. ರಾಮಾಚಾರಿ ಧಾರಾವಾಹಿಯಲ್ಲಿ ಚಾರು ನಟನೆಗೆ ಅಭಿಮಾನಿಗಳು ಫಿದಾ ಆಗಿರುವುದಂತೂ ಸತ್ಯ. ಟಿಆರ್ ಪಿ ವಿಚಾರಕ್ಕೆ ಬಂದರೆ ರಾಮಾಚಾರಿ ಧಾರಾವಾಹಿ ಕೂಡ ಉತ್ತಮ ಸ್ಥಾನದಲ್ಲಿ ಇದೆ.

ರಾಮಾಚಾರಿ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದಿರುವ ಚೆಲುವೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಮೌನ ಗುಡ್ಡೆ ಮನೆಯವರು ಇದೀಗ ಕೆಂಪು ಬಣ್ಣದ ಸಾರಿಯುಟ್ಟು ಫೋಟೋ ಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ. ಕಿವಿಯೋಲೆಯನ್ನೂ ಧರಿಸಿ, ಕೈಬಳೆಯನ್ನು ಧರಿಸಿಕೊಂಡಿದ್ದಾರೆ. ಹಾಗೆಯೇ ಹಣೆಗೆ ಕೆಂಪು ಬಣ್ಣದ ಬಿಂದಿಯನ್ನು ಇಟ್ಟುಕೊಂಡು ಬಹಳ ಖುಷಿಯಲ್ಲಿ ಫೋಟೋ ತೆಗೆದುಕೊಂಡಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಿಮ್ಮ ಪ್ರೀತಿಯ ಚಾರು ಎಂದು ಬರೆದುಕೊಂಡಿದ್ದಾರೆ.
ಕೆಂಪು ಬಣ್ಣದ ಸೀರೆಯುಟ್ಟು ಮಿಂಚಿದ ಮೌನ ಗುಡ್ಡೆ ಮನೆ
ಸೀರೆಯಲ್ಲಿ ಮೌನ ಗುಡ್ಡೆ ಮನೆಯವರನ್ನು ನೋಡಿದ ಅಭಿಮಾನಿಗಳು ನಮ್ಮ ಚಾರು ವನ್ನು ಸೀರೆಯಲ್ಲಿ ನೋಡುವುದೇ ಒಂದು ರೀತಿಯ ಚಂದ ಎಂದು ಹೇಳಿದರೆ ಇನ್ನು ಕೆಲವರು ದೇವತೆ, ದಂತದ ಗೊಂಬೆ, ಬ್ಯೂಟಿಫುಲ್, ಎಂದು ಹೇಳಿದರೆ ಇನ್ನೂ ಕೆಲವರು ನಿಮ್ಮ ಮುಂದಿನ ಧಾರವಾಹಿ ಯಾವುದು ಎನ್ನುವ ಪ್ರಶ್ನೆ ಮಾಡಿದ್ದಾರೆ ಆದರೆ ಸದ್ಯಕ್ಕೆ ಮೌನ ಗುಡ್ಡೆಮನೇ ಯಾವುದಕ್ಕೂ ಕೂಡ ರೆಸ್ಪಾನ್ಸ್ ಮಾಡುತ್ತಿಲ್ಲ. ಇನ್ನು ಕೆಂಪು ಬಣ್ಣದ ಸೀರೆಯಲ್ಲಿ ಮಾತ್ರ ಮೌನ ಬಹಳ ಮುದ್ದಾಗಿ ಕಾಣಿಸುತ್ತಿದ್ದಾರೆ. ಯಾರೇ ಹುಡುಗಿಯರು ಸೀರೆಯುಟ್ಟರೆ ಬಹಳ ಅದ್ಭುತವಾಗಿಯೆ ಕಾಣಿಸುತ್ತಾರೆ.
ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಾರ ಚಾರು
ರಾಮಾಚಾರಿ ಧಾರಾವಾಹಿಯ ಸದ್ಯ ಅಂತಿಮ ಹಂತಕ್ಕೆ ಬಂದು ತಲುಪಿದೆ ಎಂದು ಹೇಳಿದರೆ ತಪ್ಪಾಗದು. ಇದೀಗ ರಾಮಾಚಾರಿಯ ಮಾವ ಯಾವ ತಪ್ಪು ಮಾಡಿಲ್ಲ ಅವರು ತುಂಬಾ ಒಳ್ಳೆಯವರು ಎನ್ನುವುದು ಎಲ್ಲರಿಗೂ ಕೂಡ ತಿಳಿದಿದೆ. ಇತ್ತ ಕಿಟ್ಟಿ ಹಾಗೂ ಆತನ ಪ್ರೇಯಸಿ ಒಂದಾಗುವ ಗಳಿಗೆ ಕೂಡ ಹತ್ತಿರ ಬಂದಿದೆ. ಇನ್ನು ಮಾನ್ಯತ ಬುದ್ದಿ ಕಲಿತರೆ ರಾಮಾಚಾರಿ ಧಾರವಾಹಿ ಸುಲಲಿತವಾಗಿ ಮುಕ್ತಾಯ ಆಗಬಹುದು. ಅನೇಕರಿಗೆ ಚಾರು ಮೇಡಂ ಇನ್ನೂ ಬೇರೆ ಯಾವ ಧಾರಾವಾಹಿಯಲ್ಲಿ ನಟನೆ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ.


Click it and Unblock the Notifications











