ಮುದ್ದಿನ ನಾಯಿ ಜೊತೆ ಕಾಲ ಕಳೆಯುತ್ತಿರುವ ಪ್ರಿಯಾ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..!
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಗಟ್ಟಿಮೇಳ ಧಾರಾವಾಹಿಯ ಮೂಲಕ ಎಲ್ಲರ ಮನಸನ್ನು ಕದ್ದ ಪ್ರಿಯಾ ಜೆ ಆಚಾರ್ ನೋಡಲು ಬಹಳ ಮುದ್ದು ಮುದ್ದು ಆಗಿ ಇದ್ದಾರೆ. ಮುದ್ದು ಮೊಗದ ಸುಂದರಿ ಎಲ್ಲರ ಮನಸನ್ನು ಕದ್ದ ಚೋರಿ ಈಕೆ ಎಂದು ಹೇಳಿದರೆ ತಪ್ಪಾಗದು. ಇದೀಗ ಪ್ರಸ್ತುತ ಕಾವೇರಿ ಕನ್ನಡ ಮಿಡಿಯಂ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಪ್ರಿಯಾ ಆಚಾರ್ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ನಟನೆಗೂ ಸೈ ಡ್ಯಾನ್ಸ್ ಗೂ ಸೈ ಎಲ್ಲರ ಜೊತೆ ಖುಷಿಯಾಗಿಯೇ ಕಾಲ ಕಳೆಯುತ್ತಿರುವ ನಟಿಯ ನೋಟಕ್ಕೆ ಇದೀಗ ಮರುಳಾಗದವರು ಇಲ್ಲ. ಪ್ರಿಯಾ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫೋಟೋ ನೋಡಿದ ಅನೇಕರು ಬಬ್ಲಿ ಎಂದೇ ಕರೆಯುತ್ತಿದ್ದಾರೆ. ಪ್ರಿಯಾ ಜೇ ಆಚಾರ ಫೋಟೋ ನೋಡಿದ ಅನೇಕ ಜನರು ಆಕೆಯನ್ನು ಕೊಂಡಾಡುತ್ತಿದ್ದಾರೆ. ದುರ್ಗಿ ಅವತಾರವೆತ್ತಿ ದುಷ್ಟರನ್ನು ಸದೆಬಡಿಯಲು ಹೊರಟ ನಾರಿ ಇದೀಗ ಬೆಚ್ಚಗೆ ಮಲಗಿದ್ದಾಳೆ ಎಂದು ಅನೇಕರು ಹೇಳುತ್ತಿದ್ದಾರೆ. ಇನ್ನೂ ನೆರಳಿನಲ್ಲಿ ಕುಳಿತು ಪ್ರಿಯಾ ತನ್ನ ನಾಯಿ ಮರಿ ಜೊತೆ ಕಾಲ ಕಳೆಯುತ್ತಿರುವ ಫೋಟೋವನ್ನು ನೋಡಿ ಅನೇಕರಿಗೆ ಖುಷಿ ಆಗಿದೆ. ಪ್ರಿಯಾ ಜೇ ಆಚಾರ್ ಸಿದ್ದು ಮೂಲಿಮನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಇನ್ನಷ್ಟು ಜೀವನದಲ್ಲಿ ಖುಷಿಯಾಗಿದ್ದಾರೆ.

ಗಟ್ಟಿ ಮೇಳ ಧಾರಾವಾಹಿಯಲ್ಲಿ ಹುಡುಗಿಯ ತಂಗಿ ಪಾತ್ರದಲ್ಲಿ ಈಕೆ ಅಭಿನಯ ಮಾಡಿದ್ದು ತುಂಟಾಟಗಳನ್ನು ಮಾಡುತ್ತಾ ಎಲ್ಲರ ಜೊತೆ ಬಹಳ ಸಂತಸದಿಂದ ಕಾಲ ಕಳೆಯುತ್ತಾ ಇದ್ದ ಮುದ್ದು ಅದಿತಿಯನ್ನು ಎಲ್ಲರೂ ನೋಡಿದರೆ ಕಾವೇರಿ ಕನ್ನಡ ಮೀಡಿಯಂ ನಲ್ಲಿ ಮಾತ್ರ ಆಕೆಯ ನಟನೆಗೆ ಫಿದಾ ಆಗದವರೆ ಇಲ್ಲ. ಅಷ್ಟರ ಮಟ್ಟಿಗೆ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇದೀಗ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಅಚ್ಚರಿಯ ಬೆಳವಣಿಗೆಗಳು ಆಗುತ್ತಿದ್ದು ಧಾರವಾಹಿ ನೋಡುಗರಿಗೆ ಬಹಳಷ್ಟು ಕುತೂಹಲವನ್ನು ಮೂಡಿಡುತ್ತಿರುವುದು ಮಾತ್ರ ನಿಜವಾದ ಸಂಗತಿ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ
ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾ ಜೇ ಆಚಾರ್ ಹೆಚ್ಚಾಗಿ ಕಾಲ ಕಳೆಯುತ್ತಿದ್ದು, ಹೆಚ್ಚಾಗಿ ರೀಲ್ಸ್ ಗಳನ್ನೂ ಮಾಡಿ ಜನರ ಮನಸನ್ನು ಇನ್ನಷ್ಟು ಖುಷಿ ಪಡಿಸಲು ನೋಡುತ್ತಿರುತ್ತಾರೆ. ಮೊದಲಿಗೆ ಇವರು ರೀಲ್ಸ್ ಮಾಡುವ ಮೂಲಕ ಎಲ್ಲರ ಮನಸನ್ನು ಕದ್ದಿದ್ದರು ಅದಾದ ಬಳಿಕ ಗಟ್ಟಿ ಮೇಳ ಧಾರಾವಾಹಿಯಲ್ಲಿ ಈಕೆಗೆ ನಟನೆ ಮಾಡಲು ಅವಕಾಶ ಸಿಕ್ಕಿತು. ಆನಂತರ 'ಆನಂದರಾಗಂ' ಎಂಬ ತೆಲುಗು ಧಾರಾವಾಹಿಯಲ್ಲೂ ಪ್ರಿಯಾ ನಟಿಸಿದ್ದಾರೆ. ಜೊತೆಗೆ 'ಧಮಾಕಾ' ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೂ ಅವರು ಕಾಲಿಟ್ಟಿದ್ದಾರೆ. ವಿಶೇಷವೆಂದರೆ, 'ಧಮಾಕಾ' ಸಿನಿಮಾದಲ್ಲಿ ಸಿದ್ದು ಮೂಲಿಮನಿಗೆ ಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಪ್ರಿಯಾ ಮೂಲತಃ ದಾವಣಗೆರೆಯವರು.
ಮುದ್ದುಮೊಗದ ಸುಂದರಿ ನೋಟಕ್ಕೆ ಬೆರಗಾದ ಪಡ್ಡೆ ಹೈಕಳು
ಒಟ್ಟಿನಲ್ಲಿ ಮುದ್ದು ಮೊಗದ ಸುಂದರಿಯ ನೋಟಕ್ಕೆ ಪಡ್ಡೆ ಹೈಕಳು ಮಾತ್ರ ಬಹಳಷ್ಟು ಬೆರಗಾಗಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಅದನ್ನು ಲೀಲಾ ಜಾಲವಾಗಿ ನಿಭಾಯಿಸುವ ಎಲ್ಲಾ ಕ್ಯಪಾಸಿಟಿ ಅವರಿಗಿದೆ. ಇದೀಗ ಶಾಲೆಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಾವೇರಿಯಾಗಿಯೂ ಎಲ್ಲರ ಮನಗೆದ್ದ ನಟಿ ಇದೀಗ ದುರ್ಗಿಯಾಗಿ ದುಷ್ಟರಿಗೆ ಚಮಕ್ ನೀಡುತ್ತಿದ್ದಾರೆ


Click it and Unblock the Notifications











