ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ಪುಟ್ಟಗೌರಿ, ಸಾನ್ಯಾ ಅಯ್ಯರ್ ಲುಕ್‌ಗೆ ಫ್ಯಾನ್ ಕ್ಲೀನ್ ಬೌಲ್ಡ್..!
ಸಾನ್ಯಾ ಅಯ್ಯರ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಗೌರಿ ಸಿನಿಮಾದ ಮೂಲಕ ಎಲ್ಲರ ಮನಸ್ಸನ್ನೂ ಕದಿಯಲು ಸಿದ್ಧವಾಗಿರುವ ಈ ಚೆಲುವೆ ಹಿಂದೆ ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಎಲ್ಲರ ಮನಸನ್ನೂ ಗೆದ್ದವರು. ಇಂಥಾ ಸಾನ್ಯಾ ಅಯ್ಯರ್ ಸದ್ಯಕ್ಕೆ ಹೊಸ ಫೋಟೋಶೂಟ್ ಮಾಡಿಸುವ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಚಿತ್ತವನ್ನೂ ಕದಿಯುತ್ತಿದ್ದಾರೆ.
ಹೌದು ಸಾನ್ಯಾ ಅಯ್ಯರ್ ಸದ್ಯಕ್ಕೆ ಇದೀಗ ಗೌರಿ ಚಿತ್ರದ ಪ್ರಚಾರದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾ ನಿರ್ಮಾಣ ಮುಗಿದ್ದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಸಾನ್ಯಾ ಅಯ್ಯರ್ ನಟನೆಯ ಗೌರಿ ಚಿತ್ರ ಆಗಸ್ಟ್ 15 ರಂದು ರಿಲೀಸ್ ಆಗುತ್ತಿದ್ದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೂ ಸಾನ್ಯಾ ಅಯ್ಯರ್‌ಗೆ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಜೋಡಿ ಆಗಿ ನಟನೇ ಮಾಡಿರುವ ಚಿತ್ರ ಇದಾಗಿದ್ದು ಒಂದು ಲವ್ ಕೆಮಿಸ್ಟ್ರಿ ಇರುವ ಚಿತ್ರ ಇದಾಗಿದೆ. ಇನ್ನೂ ಸಾನಿಯಾ ಗುಲಾಬಿ ಬಣ್ಣದ ಸೀರೆಯುಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ.

ಸೀರೆಯುಟ್ಟ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾನ್ಯಾ ಅಪ್ಲೋಡ್ ಮಾಡಿದ್ದಾರೆ. ಗುಲಾಬಿ ಬಣ್ಣದ ಈ ಸೀರೆಯಲ್ಲಿ ಸಾನ್ಯಾ ಅಯ್ಯರ್ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸೀರೆಗೆ ಮ್ಯಾಚ್ ಆಗುವ ಕಿವಿಯ ಒಲೆಯನ್ನು ಹಾಕಿಕೊಂಡಿದ್ದಾರೆ. ಈ ಓಲೆ ಕೂಡ ಸಾನಿಯಾಗೆ ಲುಕ್ ಗೆ ಇನ್ನಷ್ಟು ಮೆರಗು ನೀಡಿದೆ.
ಹುಲಿ ವೇಷಧಾರಿಗಳ ಜೊತೆ ಫೋಟೋ ತೆಗೆಸಿಕೊಂಡ ನಟಿ
ತನ್ನ ತಾಯಿಯ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾನ್ಯಾ ಅಯ್ಯರ್ ಅವರಿಗೆ ಅವರ ತಾಯಿಯೇ ಬಹುದೊಡ್ಡ ಶಕ್ತಿ ಎಂದು ಹೇಳಿದರೆ ತಪ್ಪಾಗದು. ಈಗಾಗಲೇ ಹೇಳಿದ ಹಾಗೆ ಸಾನ್ಯಾ ಅಯ್ಯರ್ ಅವರು ಗೌರಿ ಚಿತ್ರದ ಪ್ರವಾರದಲ್ಲಿದ್ದಾರೆ. ಈ ವೇಳೆ ಅವರಿಗೆ ಹುಲಿ ವೇಷಧಾರಿಗಳು ಸಿಕ್ಕ ಸಂದರ್ಭದಲ್ಲಿ ಅವರ ಜೊತೆ ಫೋಟೋ ಗೆ ಕೂಡ ಪೋಸ್ ನೀಡಿದ್ದಾರೆ ಸಾನಿಯಾ ಅಯ್ಯರ್.

ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ಫೋಟೋ ಸಾಮಾಜಿಕ ಜಾಲತಾಣದೆಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳು ಫೋಟೋ ನೋಡಿ ಫುಲ್ ಖುಷಿ ಆಗಿದ್ದಾರೆ. ಗೌರಿ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ ಹಾಗೆಯೇ ಗೌರಿ ಸಿನಿಮಾದ ಹಾಡನ್ನು ಚಂದನ್ ಶೆಟ್ಟಿ ಹಾಗೂ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.
ಬಿರುಸಿನಿಂದ ನಡೆಯುತ್ತಿರುವ ಪ್ರಚಾರ
ಸಾನಿಯಾ ಇದೀಗ ಸಿನಿಮಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು ಇದೆ ಆಗಸ್ಟ್ 15 ರಂದು ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಸಾನಿಯಾ ಅಯ್ಯರ್ ಸಣ್ಣ ವಯಸ್ಸಿನಿಂದಲೂ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಅಭಿನಯ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ ಹೀರೋಯಿನ್ ಆಗಿ ಮೊದಲ ಬಾರಿಗೆ ಅಭಿನಯ ಮಾಡಿದ್ದಾರೆ


Click it and Unblock the Notifications











