ನೇರಳೆ ಬಣ್ಣದ ಸ್ಯಾರಿಯಲ್ಲಿ ಮಿಂಚಿದ ನೀರೆ, ತನ್ವಿ ರಾವ್ ಲುಕ್ಕಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್..!

By ಪೂರ್ವ

ತನ್ವಿ ರಾವ್ ಎಂದರೆ ಜನರಿಗೆ ಅಷ್ಟಾಗಿ ತಿಳಿದಿಲ್ಲ ಅದೇ ಕೀರ್ತಿ ಎಂದ ಕೂಡಲೇ ಜನರ ಕಿವಿ ನೆಟ್ಟಗೆ ಆಗುತ್ತದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಬಹು ಮುಖ್ಯವಾದ ಪಾತ್ರಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗದು. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಸತ್ತು ಹೋಗಿದ್ದಾಳೆ ಎಂದು ಕೆಲವರು ಅಂದುಕೊಂಡಿದ್ದರು ಮತ್ತೆ ಎಂದು ಧಾರಾವಾಹಿಗೆ ಮರಳಿ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು ಆದರೆ ಇದೀಗ ಮತ್ತೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಆಗಮಿಸಿ ಜನರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.

ತನ್ವಿ ರಾವ್ ಬಹುಮುಖ ಪ್ರತಿಭೆ. ಯಾವುದೇ ಪಾತ್ರ ಕೂಡ ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ. ಬಹಳ ಅದ್ಭುತ ಪ್ರತಿಭೆ ತನ್ವಿ ರಾವ್ ಅವರದ್ದು. ಇದೀಗ ನೇರಳೆ ಬಣ್ಣದ ಸೀರೆಯಲ್ಲಿ ತನ್ವಿ ರಾವ್ ಮಿಂಚಿದ್ದಾರೆ. ತನ್ವಿ ನೋಟಕ್ಕೆ ಫಿದಾ ಆಗದವರೆ ಇಲ್ಲ. ಯಾವತ್ತೂ ಮಾಡರ್ನ್ ಲುಕ್ ನಲ್ಲಿ ಎಲ್ಲರ ಮನಸನ್ನು ಗೆದ್ದ ನಟಿ ಇದೀಗ ಸೀರೆಯುಟ್ಟು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತನ್ವಿ ರಾವ್ ತೊಟ್ಟಿರುವ ನೇರಳೆ ಬಣ್ಣದ ಸೀರೆಗೆ , ಕೈ ಬಳೆ ಹಾಗೂ ಸರ ಸಖತ್ ಆಗಿ ಮ್ಯಾಚ್ ಆಗುತ್ತಿದೆ. ಸೀರೆಯುಟ್ಟು ಬಹಳ ಮುದ್ದು ಮುದ್ದಾಗಿ ಕಾಣಿಸುತ್ತಿರುವ ನಟಿಯ ನೋಟಕ್ಕೆ ಅನೇಕ ಜನರು ಫಿದಾ ಆಗಿದ್ದಾರೆ.

kannada actres Tanvi rao photo viral

ತನ್ವಿ ರಾವ್ ಅವರನ್ನು ಅನೇಕ ಜನರು ಗಾಜು ಕಣ್ಣಿನ ಚೆಲುವೆ ಎಂದೇ ಕರೆಯುತ್ತಾರೆ. ಈಗಾಗಲೇ ಈಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಬಹಳಷ್ಟು ಖುಷಿ ವ್ಯಕ್ತಪಡಿಸುತ್ತಿದ್ದರು. ಹಾಗೆಯೇ ಸಾಕಷ್ಟು ಲೈಕ್ ಹಾಗೂ ಕಾಮೆಂಟ್ ಗಳು ಹರಿದು ಬರುತ್ತಿದೆ. ತನ್ವಿ ರಾವ್ ಅವರು ಮೂಡಲಿದೆ ರಾಧಾ ಶ್ಯಾಮ ಧಾರಾವಾಹಿಯಲ್ಲಿ ನಾಯಕಿ ನಟಿಸಿ ಎಲ್ಲರ ಮನಸನ್ನು ಗೆದ್ದಿದ್ದರು. ತನ್ವಿ ಅವರು ಅಭಿನಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಈಕೆ ಬಹಳ ಉತ್ತಮ ಡ್ಯಾನ್ಸರ್ ಎಂದು ಹೇಳಿದರೆ ತಪ್ಪಾಗದು.ಬಾಲಿವುಡ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟನೆಯ ಗುಲಾಬ್ ಗ್ಯಾಂಗ್ ಚಿತ್ರದಲ್ಲಿ ನಟಿಸಿದ್ದರು.

ಆಕೃತಿ ಧಾರಾವಾಹಿಯಲ್ಲಿ ನಟಿಸಿದ್ದ ತನ್ವಿ

ಇದಾದ ಬಳಿಕ ಮೊದಲಿಗೆ ತನ್ವಿ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಆಕೃತಿ ಎಂಬ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡ ನಟಿ ಈಕೆ. ತನ್ವಿ ಅವರು ಧಾರವಾಹಿ ಮಾತ್ರ ಅಲ್ಲದೆ ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ರಂಗ್ ಬಿ ರಂಗ್ ಸಿನಿಮಾದಲ್ಲಿ ತನ್ವಿ ಬಣ್ಣ ಹಚ್ಚಿದ್ದಾರೆ. ಇನ್ನೂ ಬೇರೆ ಭಾಷೆಯ ಧಾರಾವಾಹಿಯಲ್ಲಿ ಕೂಡ ತನ್ವಿ ಅವರು ಅಭಿನಯಿಸಿದ್ದು ಎಲ್ಲರಿಗೂ ಬಹಳ ಖುಷಿಯನ್ನು ನೀಡಿತ್ತು. ತಮಿಳಿನ ಜಮೀಲ ಎಂಬ ಸೀರಿಯಲ್ ನಲ್ಲಿ ನಾಯಕಿ ಪಾತ್ರದಲ್ಲಿ ಬಣ್ಣಹಚ್ಚಿದ್ದರು.

ಭರತನಾಟ್ಯದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡ ನಟಿ

ಈ ಧಾರಾವಾಹಿಯಲ್ಲಿ ಇವರಿಗೆ ಮುಸ್ಲಿಂ ಹುಡುಗಿ ಪಾತ್ರವನ್ನು ನೀಡಲಾಗುತ್ತು. ಬಹಳ ಅಚ್ಚುಕಟ್ಟಾಗಿ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ತನ್ವಿ ರಾವ್. ನಟಿ ತನ್ವಿ ರಾವ್‌ ಭರತನಾಟ್ಯ ಕಲಾವಿದೆಯಾಗಿದ್ದು 6 ಕ್ಕಿಂತ ಹೆಚ್ಚು ಭರತನಾಟ್ಯದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತನ್ವಿ ರಾವ್ ಅವರ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಎಂದರೆ ಎಲ್ಲರಿಗೂ ಬಹಳ ಇಷ್ಟ . ಕೀರ್ತಿ ಧಾರವಹಿಯಿಂದ ಹೋದ ಬಳಿಕ ಕೊಂಚ ಮಟ್ಟಿಗೆ ವೀಕ್ಷಕರು ಬೇಸರ ಪಟ್ಟುಕೊಂಡಿದ್ದರು. ಆದರೆ ಸಡನ್ ಕೀರ್ತಿ ಧಾರವಾಹಿ ವಾಪಸ್ ಆದಾಗ ಬಹಳಷ್ಟು ಜನರು ಖುಷಿ ಪಟ್ಟರು. ತನ್ವಿ ರಾವ್ ಅವರು ಅಷ್ಟರ ಮಟ್ಟಿಗೆ ಅಭಿನಯ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X