ತಮಿಳು ಕಿರುತೆರೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ ಧಾರಾವಾಡದ ಬೆಡಗಿ ಐಶ್ವರ್ಯಾ ಸಾಲಿಮಠ್!

By ಪೂರ್ವ

ಕನ್ನಡ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ಇಂದು ಪರಭಾಷೆಯ ಕಿರುತೆರೆಯಲ್ಲಿಯೂ ಜನಪ್ರಿಯರಾಗಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿದವರು ಐಶ್ವರ್ಯಾ ಸಾಲಿಮಠ್. ಧಾರಾವಾಡದ ಬೆಡಗಿ ಐಶ್ವರ್ಯಾ ಸಾಲಿಮಠ್ ಕನ್ನಡ ಕಿರುತೆರೆಯಲ್ಲಿ ತನು ಎಂದೇ ಫೇಮಸ್ಸು! ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಆಗಿ ಅಭಿನಯಿಸುತ್ತಿದ್ದ ಐಶ್ವರ್ಯಾ ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಹೌದು, ತಾವು ಬಣ್ಣ ಹಚ್ಚಿರುವಂತಹ ನಾಲ್ಕು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಐಶ್ವರ್ಯಾ ಮೊದಲ ಬಾರಿಗೆ ನಾಯಕಿಯಾಗಿರುವುದು ತಮಿಳಿನಲ್ಲಿ.

ತಮಿಳಿನ 'ಉಯಿರೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಾಯಕಿಯಾಗಬೇಕು ಎಂಬ ತಮ್ಮ ಐದು ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ ಐಶ್ವರ್ಯಾ. ''ನಾನು ನಾಯಕಿಯಾಗಿ ನಟಿಸಬೇಕು ಎಂದು ಐದು ವರ್ಷದಿಂದ ಕಾಯುತ್ತಿದ್ದೆ. ಇದೀಗ ನಾಯಕಿಯಾಗಿ ನಟಿಸುವ ಅವಕಾಶ ದೊರಕಿದೆ. ಇದು ನನ್ನ ಜೀವನದ ಅತ್ಯಂತ ಸುಂದರವಾದ ಕ್ಷಣ'' ಎಂದು ಐಶ್ವರ್ಯಾ ಅಂದು ಹೇಳಿಕೊಂಡಿದ್ದರು.

ರಾಜ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಅನಂತಿನಿಯಲ್ಲಿ ಸಹ ನಾಯಕಿಯಾಗಿ ಅಭಿನಯಿಸುತ್ತಿರುವ ಧಾರಾವಾಡದ ಬೆಡಗಿ ಕನ್ನಡದ ಜೊತೆಗೆ ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಸತಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಐಶ್ವರ್ಯಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಮಹಾಸತಿ ಧಾರಾವಾಹಿಯ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಯೂ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.

Kannada Actress Aishwarya Salimath Acting In Tamil Serials

ತದ ನಂತರ ಅಗ್ನಿಸಾಕ್ಷಿ ಧಾರಾವಾಹಿಯ ತನು ಆಗಿ ಬದಲಾದ ಐಶ್ವರ್ಯಾ ಇಂದಿಗೂ ಅದೇ ಹೆಸರಿನಿಂದ ಫೇಮಸ್ಸು! ಇಂದು ಆಕೆ ಎತ್ತ ಹೋದರೂ ಜನರು ಆಕೆಯನ್ನು ಅಗ್ನಿಸಾಕ್ಷಿ ತನು ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಅವರಿಗೆ ಜನಪ್ರಿಯತೆ ನೀಡಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮೋಡಿ ಮಾಡಿದ ಐಶ್ವರ್ಯಾ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ಖಳನಾಯಕಿ ಪ್ರಿಯಾ ಆಗಿ ಮಿಂಚುತ್ತಿದ್ದಾರೆ.

More from Filmibeat

English summary
Kannada actress Aishwarya Salimath acting in Tamil serials. She is from Dharawad, know her acting journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X