ಬ್ಲ್ಯಾಕ್ ಸೀರೆಯಲ್ಲಿ ಮಿಂಚಿದ ನಟಿ, ಪಡ್ಡೆ ಹುಡುಗರ ನಿದ್ದೆ ಕದ್ದ ಈ ಚೋರಿ ಯಾರು ಗೊತ್ತಾ?

By ಪೂರ್ವ

ಮಿಸ್ಟರ್ & ಮಿಸ್‌ಸ್ ರಂಗೇಗೌಡ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದವರು ಅಮೃತಾ ರಾಮಮೂರ್ತಿ. ನೋಡಲು ಬಹಳ ಸುಂದರವಾಗಿದ್ದು, ಸೀರೆಯುಟ್ಟರೆ ದಂತದ ಬೊಂಬೆಯ ಹಾಗೆ ಕಾಣಿಸುವ ಈ ನಟಿಯ ಸೊಬಗಿಗೆ ಮಾರು ಹೋಗದವರೆ ಇಲ್ಲ. ಇಂಥಾ ಅಮೃತಾ ರಾಮಮೂರ್ತಿ ಇದೀಗ ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಮೂಲಕ ಎಲ್ಲರನ್ನೂ ಮನರಂಜನೆ ನೀಡುತ್ತಿದ್ದಾರೆ. ಈಗಾಗಲೇ ಅಮೃತಾ ವಿಲನ್ ಪಾತ್ರದಲ್ಲಿ ಉತ್ತಮವಾಗಿ ಅಭಿನಯ ಮಾಡಿ ಈಗಾಗಲೇ ಸೈ ಎನಿಸಿಕೊಂಡಿದ್ದಾರೆ.

ಇನ್ನು ಅಮೃತಾ ರಾಮಮೂರ್ತಿ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿರುತ್ತಾರೆ. ಹಾಗೆಯೇ ಇವರು ತನ್ನದೇ ಆದ ಯೂಟ್ಯೂಬ್ ಚಾನೆಲ್ ನ್ನು ನಡೆಸುತ್ತಿದ್ದಾರೆ. ಅಮೃತ ರಾಮಮೂರ್ತಿ ಹಾಗೂ ಫ್ಯಾಮಿಲಿ ವಿದೇಶ ಟ್ರಿಪ್ ಗೆ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಕೆಂಡಸಂಪಿಗೆ ಧಾರಾವಾಹಿ ಮುಕ್ತಾಯದ ಹಂತ ತಲುಪಿದೆ. ಇದೀಗ ಆಸೆ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ.

kannada actress amruta ramamurti photo viral

ಇನ್ನೂ ಇವರ ಗಂಡ ಕೂಡ ಫೇಮಸ್ ಕಿರುತೆರೆ ಆಕ್ಟರ್ ಹೌದು ರಾಘವೇಂದ್ರ ಎಂದು ಅವರ ಹೆಸರು. ಇವರು ಮಿಸ್ಟರ್ ಆಂಡ್ ಮಿಸ್ಸಸ್ ರಂಗೆ ಗೌಡ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚಿದ ನಟ. ಅದೇ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಅವರು ಪ್ರಮುಖ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ರಘು ಅವರು ಅಭಿನಯ ಮಾಡಿದ್ದಾರೆ. ಇದೀಗ ಇವರಿಬ್ಬರೂ ನಿಜ ಜೀವನದಲ್ಲಿ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸಿಕೊಂಡು ಹೋಗುತ್ತಿದ್ದಾರೆ. ಇವರಿಗೆ ದ್ವಿತಿ ಎನ್ನುವ ಮುದ್ದಾದ ಮಗಳಿದ್ದಾಳೆ. ಆಗಾಗ ವ್ಲಾಗ್ ಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡುತ್ತಿರುತ್ತಾರೆ. ಇದೀಗ ಅಮೃತಾ ರಾಮಮೂರ್ತಿ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಅದ್ಭುತ ಲುಕ್ ನಲ್ಲಿ ಕಾಣಿಸಿಕೊಂಡ ಚೆಲುವೆ

ಬಹಳ ಅದ್ಭುತವಾದ ಲುಕ್ ನೊಂದಿಗೆ ಜನರ ಮನಸ್ಸು ಗೆದ್ದ ಚೋರಿ ಎಂದು ಹೇಳಿದರೆ ತಪ್ಪಾಗದು. ಹೌದು ಕಪ್ಪು ಬಣ್ಣದ ಸಾರಿಯಲ್ಲಿ ಅಮೃತ ರಾಮಮೂರ್ತಿ ಮಿಂಚಿದ್ದು ಇದೀಗ ಎಲ್ಲರ ಮನದಲ್ಲಿ ಜಾಗವನ್ನು ಪಡೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ಫೋಟೋ ನೋಡಿದ ಅಭಿಮಾನಿಗಳು ಲೈಕ್ ಹಾಗೂ ಕಾಮೆಂಟ್ ಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ.

kannada actress amruta ramamurti photo viral

ಮುತ್ತಿನ ಸರ ಧರಿಸಿದ ನಟಿ

ಇದೀಗ ಕಪ್ಪು ಬಣ್ಣದ ಸೀರೆಯಲ್ಲಿರುವ ನಟಿಯ ಫೋಟೋ ನೋಡಿ ಪಡ್ಡೆ ಹುಡುಗರು ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಇನ್ನು ಈ ಫೋಟೋವನ್ನು ಪೋಸ್ಟ್ ಮಾಡಿದ ನಟಿ " ಬ್ಲಾಕ್ ವೈಬ್ಸ್ ಓನ್ಲಿ" ಎಂದು ಬರೆದುಕೊಂಡಿದ್ದಾರೆ. ಇವರು ಕುತ್ತಿಗೆ ಗೆ ಧರಿಸಿದ ಬಿಳಿ ಬಣ್ಣದ ಮುತ್ತಿನ ಹಾರ ಬಹಳಷ್ಟು ಅಂದವನ್ನು ಹೆಚ್ಚು ಮಾಡುತ್ತಿದೆ. ಇನ್ನು ಹಲವಾರು ಜನರು ಮೇಕಪ್ ಬಹಳ ಚೆನ್ನಾಗಿ ಮಾಡಿಕೊಂಡಿದ್ದೀರಾ, ಬ್ಯೂಟಿಫುಲ್, ತುಂಬಾ ಸುಂದರವಾಗಿ ಕಾಣುತ್ತೀರಿ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ ಅಮೃತಾ ರಾಮಮೂರ್ತಿ ಯವರಿಗೆ ಬಹಳಷ್ಟು ಅವಕಾಶಗಳು ಒದಗಿ ಬರುತ್ತಿದೆ ಎಂದು ಹೇಳಿದರೆ ತಪ್ಪಾಗದು.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಬ್ಯುಸಿ ಇರುವ ನಟಿ

ಅಮೃತಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ಜನರನ್ನು ಭೇಟಿಯಾಗ್ತಾರೆ. ಹಾಗೆಯೇ ತನ್ನ ಫ್ಯಾಮಿಲಿ ಕಾರ್ಯಕ್ರಮ ಆಗಿರಬಹುದು, ಯಾವುದಾದರೂ ರೆಸಿಪಿ ಮಾಡುವ ವೇಳೆ ಆಗಿರಬಹುದು ಅಥವಾ ಗಂಡ ರಾಘವೇಂದ್ರ ಜೊತೆ ಸೇರಿ ವ್ಲಾಗ್ ಮಾಡುವ ಕೆಲಸವನ್ನು ಇವರು ಮಾಡುತ್ತಿರುತ್ತಾರೆ. ಇನ್ನು ಹೆಚ್ಚಾಗಿ ಮಗಳು ಧೃತಿ ಜೊತೆ ಹೆಚ್ಚಾಗಿ ಕಾಲ ಕಳಿಯುತ್ತಿರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X