ಥೇಟ್ ಆಲಿಯಾಳಂತೆ ಕಂಗೊಳಿಸಿದ ಕನ್ನಡದ ಕಿರುತೆರೆ ನಟಿ:'ಗಂಗೂಬಾಯಿ ಕಾಥಿಯಾವಾಡಿ'ಯಂತೆ ಕಾಣ್ತಿದ್ದಾರಾ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕೆಂಡಸಂಪಿಗೆ'. ಈ ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ಪ್ರಸಾದ್ ಅತ್ತಿಗೆ ಸಾಧನಾ ಪಾತ್ರದಲ್ಲಿ ಅಮೃತಾ ರಾಮಮೂರ್ತಿ ಖಳನಾಯಕಿಯಾಗಿ ಮೋಡಿ ಮಾಡುತ್ತಿದ್ದಾರೆ.

ಅಮೃತಾ ರಾಮಮೂರ್ತಿ ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ತೆರೆಯ ಮೇಲೆ ಮೋಡಿ ಮಾಡುತ್ತಿದ್ದು, ಇನ್‌ಸ್ಟಾಗ್ರಾಂನಲ್ಲೂ ಸಖತ್ ಆ್ಯಕ್ಟೀವ್. ಬಿಡುವಿದ್ದಾಗಲೆಲ್ಲಾ ರೀಲ್ಸ್ ಮಾಡುತ್ತಾ? ಫೋಟೋಗಳನ್ನು ಶೇರ್ ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಇರುವ ಈಕೆ ಗಂಗೂಬಾಯಿ ಆಗಿ ಬದಲಾಗಿದ್ದಾರೆ.

Amrutha Ramamoorthi-Alia Bhatt

ಹೌದು, ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಥಿಯಾವಾಡಿ' ಸಿನಿಮಾದಲ್ಲಿನ ಆಕೆಯ ಲುಕ್ ಅನ್ನು ಅಮೃತಾ ರಾಮಮೂರ್ತಿ ರೀ-ಕ್ರೀಯೆಟ್ ಮಾಡಿದ್ದಾರೆ. ಪಕ್ಕಾ ಆಲಿಯಾ ಭಟ್ ಅವರಂತೆ ಡ್ರೆಸ್ ಮಾಡಿಕೊಂಡ ಅಮೃತಾ ರಾಮಮೂರ್ತಿ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಡೋಲಿದಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಥೇಟ್ ಆಲಿಯಾಳಂತೆ ಕಂಗೊಳಿಸಿದ ಅಮೃತಾ

ಬಿಳಿ ಸೀರೆ ಧರಿಸಿದ ಅಮೃತಾ ಹಣೆಗೆ ಕೆಂಪು ದೊಡ್ಡ ಬಿಂದಿ ಹಾಕಿದ್ದಾರೆ. ಇನ್ನು ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಧರಿಸಿದ ಈಕೆ ಅಲಿಯಾರಂತೆ ಮುಡಿಗೆ ಕೆಂಪು ಗುಲಾಬಿಯನ್ನು ಮುಡಿದಿದ್ದಾರೆ. ಈ ರೀಲ್ಸ್ ಅನ್ನು ಇನ್‌ಸ್ಟಗ್ರಾಂನಲ್ಲಿ ಹಂಚಿಕೊಂಡ ಅಮೃತಾ "ತಡವಾಗಿ ಈ ಟ್ರೆಂಡ್ ಮಾಡ್ತಿದ್ದೇನೆ. ನಾನು ಸ್ವಲ್ಪ ಆದ್ರೂ ಆಲಿಯಾ ಭಟ್ ಹಾಗೇ ಕಾಣ್ತಿದ್ದೀನಾ" ಎಂದು ಬರೆದುಕೊಂಡಿದ್ದಾರೆ.

Amrutha Ramamoorthi-Alia Bhatt

ಕಿರುತೆರೆಯಲ್ಲಿ ಮೋಡಿ ಮಾಡಿರುವ ಅಮೃತಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೇಘ ಮಯೂರಿ' ಧಾರಾವಾಹಿಯಲ್ಲಿ ಮಯೂರಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅಮೃತಾ ಮುಂದೆ 'ಸರಸ್ವತಿ -ಲಕ್ಷ್ಮಿ ಪ್ರಿಯೆ', 'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ', 'ಕುಲವಧು', 'ಕಸ್ತೂರಿ ನಿವಾಸ' ಧಾರಾವಾಹಿಗಳಲ್ಲಿ ನಾಯಕಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಕಿರುತೆರೆ ನಟನ ಜೊತೆಗೆ ವಿವಾಹ

'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ನಾಯಕ ರಂಗೇಗೌಡನಾಗಿ ನಟಿಸಿದ್ದ ರಘು ಗೌಡ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಮೃತಾ ರಾಮಮೂರ್ತಿಗೆ ಮುದ್ದಾದ ಹೆಣ್ಣು ಮಗುವಿದೆ. ಮುದ್ದು ಮಗಳು ಧೃತಿಯ ಲಾಲನೆ ಪಾಲನೆಗಾಗಿ ನಟನೆಯಿಂದ ದೂರವಿದ್ದ ಅಮೃತಾ ಇದೀಗ ಮತ್ತೆ ಸಾಧನಾ ಆಗಿ ಕಿರುತೆರೆಗೆ ಮರಳಿದ್ದಾರೆ.

More from Filmibeat

English summary
Kannada actress Amrutha Ramamoorthi Posing like Alia Bhatt in Gangubai Kathiawadi, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X