ತೆಲುಗು ಕಿರುತೆರೆಯಲ್ಲಿ ದ್ವಿಪಾತ್ರದಲ್ಲಿ ಮಿಂಚಿದ ಕನ್ನಡದ ನಟಿ ಅಮೂಲ್ಯ; ಯಾವುದು ಆ ಧಾರಾವಾಹಿ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಬೃಂದಾವನ'ವೂ ಒಂದು. 'ಬೃಂದಾವನ' ಧಾರಾವಾಹಿಯಲ್ಲಿ ನಾಯಕಿ ಪುಷ್ಪಾ ಪಾತ್ರದಲ್ಲಿ ಅಭಿನಯಿಸಿದ್ದ ಬೆಡಗಿಯ ಹೆಸರು ಅಮೂಲ್ಯ ಭಾರದ್ವಾಜ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಮೂಲ್ಯ ಇದೀಗ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ತೆಲುಗಿನ ವಂಟಲಕ್ಕ ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿರುವ ಅಮೂಲ್ಯ ಭಾರದ್ವಾಜ್ ದ್ವಿಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ವಂಟಲಕ್ಕ ಧಾರಾವಾಹಿಯಲ್ಲಿ ವೈಷ್ಣವಿ ಮತ್ತು ವೆನಿಲ್ಲಾ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.ಏಕಕಾಲಕ್ಕೆ ಎರಡು ಭಿನ್ನ ಭಿನ್ನ ಪಾತ್ರಗಳಿಗೆ ಜೀವ ತುಂಬುತ್ತಿರುವ ಅಮೂಲ್ಯ ಬಿ.ಕಾಂ ಪದವೀಧರೆ ಕೂಡ ಹೌದು.

Kannada actress Amulya Bharadwaj will be seen in a dual role in the Telugu serial

ಮೊದಲಿನಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಈ ನಟಿ ಇಂದು ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಅಂದ ಹಾಗೇ ನಟಿಯಾಗುವ ಬಯಕೆ ಹೊಂದಿದ್ದ ಅಮೂಲ್ಯ ಇದ್ದಂತಹ ಆಡಿಶನ್‌ಗಳಿಗೆಲ್ಲಾ ಹಾಜರಾಗುತ್ತಿದ್ದರು. ಆದರೆ, ಅವರು ನೋಡುವುದಕ್ಕೆ ಸಣ್ಣ ಇರುವ ಕಾರಣದಿಂದ ಯಾವ ಆಡಿಶನ್‌ಗಳಲ್ಲಿ ಆಯ್ಕೆಯಾಗಲಿಲ್ಲ.

ಆದರೂ, ಛಲ ಬಿಡದೆ ಪ್ರಯತ್ನಿಸುತ್ತಿದ್ದ ಅಮೂಲ್ಯಗೆ ಒಂದು ದಿನ ಅದೃಷ್ಟದ ಬಾಗಿಲು ತೆರೆಯಿತು. 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅಮೂಲ್ಯ ನಂತರ ಕಾಣಿಸಿದ್ದು ಸರಸ್ವತಿಯಾಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದಾಸ ಪುರಂದರ' ಧಾರಾವಾಹಿಯಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತಿಯಾಗಿ ಈಕೆ ಅಭಿನಯಿಸಿದ್ದರು.

'ದಾಸ ಪುರಂದರ' ಧಾರಾವಾಹಿ ಮುಕ್ತಾಯಗೊಂಡ ಸ್ವಲ್ಪ ದಿನಗಳಲ್ಲಿ 'ಬೃಂದಾವನ' ಧಾರಾವಾಹಿಯಲ್ಲಿ ನಾಯಕಿ ಪುಷ್ಪಳಾಗಿ ನಟಿಸುವ ಅವಕಾಶವನ್ನು ಈಕೆ ಪಡೆದುಕೊಂಡಿದ್ದರು. ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸಿರುವ ಅಮೂಲ್ಯ ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸಲಿರುವ ಈಕೆ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆ್ಯಕ್ಟೀವ್.

Kannada actress Amulya Bharadwaj will be seen in a dual role in the Telugu serial

ಸಮಯ ಸಿಕ್ಕಾಗಲೆಲ್ಲಾ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ಈಕೆ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಾಂಪ್ರದಾಯಿಕ ಫೋಟೋಶೂಟ್‌ಗಳ ಜೊತೆಗೆ ಮಾಡರ್ನ್ ಡ್ರೆಸ್‌ನಲ್ಲಿ ಫೋಟೋಗಳನ್ನೂ ಹಂಚಿಕೊಳ್ಳುವ ಅಮೂಲ್ಯ ಬಿಡುವು ಸಿಕ್ಕಾಗಲೆಲ್ಲಾ ರೀಲ್ಸ್ ಅನ್ನು ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ನೆಟ್ಟಿಗರನ್ನು ಸದಾ ಕಾಲ ಎಂಗೇಜ್ ಆಗಿರುವಂತೆ ನೋಡಿಕೊಳ್ಳುವ ಈಕೆಗೆ 72.7K ಫಾಲೋವರ್ಸ್ ಇದ್ದಾರೆ.

More from Filmibeat

English summary
Kannada actress Amulya Bharadwaj will be seen in a dual role in the Telugu serial;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X