Anjali Sudhakar: 'ರಾಮಾಚಾರಿ'ಯ ಅಮ್ಮ ಅಂಜಲಿ ಸುಧಾಕರ್ ಮಾಡ್ರನ್ ಲುಕ್ ನೋಡಿದ್ರಾ?
ರಾಮಾಚಾರಿ ಅಮ್ಮನಾಗಿ ಸದ್ಯ ಕಲರ್ಸ್ ಕನ್ನಡದಲ್ಲಿ ನಟನೆ ಮಾಡುತ್ತಿರುವ ನಟಿ ಅಂಜಲಿ ಸುಧಾಕರ್ ಇದೀಗ ಸಖತ್ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದು ನೋಡುಗರಿಗೆ ಖುಷಿ ನೀಡಿದೆ. ರಾಮಾಚಾರಿಯ ತಾಯಿ ಇಷ್ಟು ಮಾಡರ್ನ್ ಆಗಿದ್ದಾರಾ ಎಂದು ಆಶ್ಚರ್ಯ ಪಡುತ್ತಾ ಇದ್ದಾರೆ. ಸೀರಿಯಲ್‌ನಲ್ಲಿ ಸದಾ ಸೀರೆಯುಟ್ಟುಕೊಂಡು ಮಿಂಚುತ್ತಿದ್ದ ನಟಿಯ ಮಾಡರ್ನ್ ಡ್ರೆಸ್‌ಗಳಲ್ಲಿನ ಫೋಟೋ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಅಂಜಲಿ ಅವರು ಸಖತ್ ಮಾಡರ್ನ್ ಆಗಿದ್ದು ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಫೋಟೋಗೆ ಆಗಾಗ ಪೋಸ್ ನೀಡುತ್ತಾ ಇರುತ್ತಾರೆ. ವೆಕೇಷನ್, ಟ್ರಿಪ್ಸ್, ಔಟಿಂಗ್ ಹೋಗುವಾಗ ಅಂಜಲಿ ಅವರ ಆಯ್ಕೆ ಸೀರೆ. ಸೀರೆಯಲ್ಲಿ ಅವರು ಬಹಳ ಅದ್ಭುತವಾಗಿ ಕಾಣಿಸಿಕೊಳ್ಳುತ್ತ ಇದ್ದು ನೋಡುಗರಿಗೆ ಬಹಳಷ್ಟು ಖುಷಿ ನೀಡುತ್ತದೆ..ಇದೀಗ ಕೆಲವೊಂದು ಬಾರಿ ಟ್ರಿಪ್ ಹೋಗಬೇಕಾದರೆ ಮಾಡ್ರನ್ ಡ್ರೆಸ್‌ನಲ್ಲಿ ಫೋಟೋಗೆ ಪೋಸ್ ನೀಡುತ್ತಾರೆ.

ಇದೀಗ ಸೋಷಿಯಲ್ ಮೀಡಿಯಾದನಲ್ಲಿ ಅವರ ಫೋಟೋಗಳು ವೈರಲ್ ಆಗುತ್ತಿವೆ.. ಈ ಫೋಟೋಗಳಿಗೆ ಸಾಕಷ್ಟು ಲೈಕ್ ಹಾಗೂ ಕಾಮೆಂಟ್ ಬರುತ್ತಿದ್ದು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಹಾಗೆಯೇ ನೀಲಿ ಬಣ್ಣದ ಫ್ರಾಕ್ ತೊಟ್ಟು ಹೊರಗಡೆ ಔಟಿಂಗ್ ಗೆ ಹೋಗಿದ್ದಾರೆ. ಅಲ್ಲಿನ ರಮಣೀಯ ದೃಶ್ಯವೂ ಸಖತ್ ಆಗಿ ಕ್ಯಾಪ್ಚರ್ ಆಗಿದ್ದು ನೋಡುಗರಿಗೆ ಬಹಳಷ್ಟು ಖುಷಿ ನೀಡಿದೆ ಎಂದರೆ ತಪ್ಪಾಗದು.
ರಾಮಾಚಾರಿಯ ಅಮ್ಮನಾಗಿ ಕಾಣಿಸಿಕೊಂಡ ನಟಿ
ಹಾಗೆಯೇ ರಾಮಾಚಾರಿ ಸೆಟ್‌ನಲ್ಲಿ ತೊಟ್ಟುಕೊಂಡ ಸಾರಿ ಫೋಟೋಸ್ ಕೂಡ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು ನೋಡುಗರಿಗೆ ಬಹಳಷ್ಟು ಖುಷಿ ನೀಡಿದೆ. ಬಹಳ ಹಿಂದೆ ಇವರು ಕಾಶ್ಮೀರಕ್ಕೆ ಕೂಡ ಭೇಟಿ ನೀಡಿ ಅಲ್ಲಿನ ರಮಣೀಯ ದೃಶ್ಯವನ್ನು ಎಂಜಾಯ್ ಮಾಡಿದ್ದರು ಹಾಗೆಯೇ ಅಲ್ಲಿನ ರೀತಿ ಫೋಟೋ ತೆಗೆಸಿಕೊಂಡು ನೋಡುಗರಿಗೆ ಇನ್ನಷ್ಟು ಖುಷಿ ನೀಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್
ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ಹಾಗೆಯೇ ಈ ಫೋಟೋ ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿದ್ದಾರೆ. ಸುಂದರವಾದಂತಹ ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟು, ಕುಂಕುಮ ಹಚ್ಚಿ, ಮಲ್ಲಿಗೆ ಹೂವನ್ನು ಮುಡಿದು, ಕೈತುಂಬಾ ಬಳೆಗಳನ್ನು ಧರಿಸಿದರೆ ಅಂಜಲಿ ಬಹಳ ಮುದ್ದಾಗಿ ಕಾಣಿಸುತ್ತ ಇರುತ್ತಾರೆ.

ಅಂಜಲಿ ನೋಡಿ ಮನಸೋತ ಜನ
ಜನರು ಅಂಜಲಿ ಅವರನ್ನು ಆ ರೀತಿ ನೋಡಲು ಬಹಳಷ್ಟು ಇಷ್ಟ ಪಡುತ್ತಾರೆ ಕೂಡ. ಸಾಧಾರಣ ಹಳ್ಳಿಯ ಗೃಹಿಣಿಯ ಹಾಗೆ ಕಾಣಿಸಿ ಕೊಳ್ಳುತ್ತಾ ಇರುವ ಇವರು ಗೆಳೆಯರ ಜೊತೆ ಹೋದಾಗ ಸಖತ್ ಮಾಡರ್ನ್ ಡ್ರೆಸ್ ತೊಟ್ಟು ಹೊರಗಡೆ ಹೋಗುತ್ತಾರೆ. ಹಾಗೆಯೇ ರಾಮಾಚಾರಿ ತಾಯಿ ಪಾರ್ಟ್ ಮಾಡುತ್ತಿರುವ ಅಂಜಲಿ ಯಾವ ಡ್ರೆಸ್ ತೊಟ್ಟರು ಬಹಳ ಅದ್ಭುತವಾಗಿ ಕಾಣುತ್ತಾರೆ ಅವರನ್ನು ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿ ಪಡುತ್ತಾ ಇರುತ್ತಾರೆ.
ಬ್ಲಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ
ಬ್ಲ್ಯಾಕ್ ಮ್ಯಾಕ್ಸಿ ಡ್ರೆಸ್ನಲ್ಲಿ ಅಂಜಲಿ ಬಹಳ ಅದ್ಭುತವಾಗಿ ಕಾಣಿಸಿಕೊಳ್ಳುತ್ತ ಇರುತ್ತಾರೆ. ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಸಿಂಪಲ್ ಮೇಕಪ್ ಮಾಡಿಕೊಂಡು ರಾಮಾಚಾರಿ ನಟಿ ಅಂಜಲಿ ಮಾಡರ್ನ್ ಲುಕ್ನಲ್ಲಿಯೂ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಇವರನ್ನು ನೋಡಿದ ಅಭಿಮಾನಿಗಳು ಬಹಳ ಖುಷಿ ಪಡುತ್ತಾರೆ. ಸಿನಿಮಾ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದ ಅಂಜಲಿ ಕೊಂಚ ದಿನಗಳ ಮಟ್ಟಿಗೆ ಅಭಿನಯದಲ್ಲಿ ಬ್ರೇಕ್ ತೆಗೆದುಕೊಂಡು ಇದ್ದರೂ ಅದಾದ ಬಳಿಕ ಇವರು ವಾಪಸ್ ಬಣ್ಣದ ಲೋಕಕ್ಕೆ ಕೇಳುತ್ತಿರುವುದು ಎಲ್ಲರಿಗೂ ಖುಷಿಯ ಸಂಗತಿ ಆಗಿದೆ.
ಹಾಗೆಯೇ ಇವರನ್ನು ರಾಮಾಚಾರಿಯ ತಾಯಿ ಆಗಿ ನೋಡಲು ಬಹಳಷ್ಟು ಜನ ಖುಷಿ ಪಡುತ್ತಾ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 23 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅವರು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸಖತ್ ಸ್ಟೈಲಿಶ್ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾ ಇದ್ದು ಅನೇಕರಿಗೆ ಈ ವಿಚಾರ ಖುಷಿ ನೀಡಿದೆ. ಇನ್ನು ಅಂಜಲಿ ಅವರು ಉತ್ತಮವಾದ ಸಿನಿಮಾ ಧಾರಾವಾಹಿಯಲ್ಲಿ ಅಭಿನಯ ಮಾಡಲಿ ಎಂಬುವುದು ಅಭಿಮಾನಿಗಳ ಹಾರೈಕೆ.


Click it and Unblock the Notifications











