ಕನ್ನಡ ಕಿರುತೆರೆಯ 'ಅರುಂಧತಿ' ತೆಲುಗಿನಲ್ಲೂ ಬ್ಯುಸಿ: ಯಾರೀ ನಟಿ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಕರಿಮಣಿ'ಯೂ ಒಂದು. 'ಕರಿಮಣಿ' ಧಾರಾವಾಹಿಯಲ್ಲಿ ನಾಯಕ ಕರ್ಣನ ಅಮ್ಮ ಅರುಂಧತಿಯಾಗಿ ಅಭಿನಯಿಸುತ್ತಿರುವ ಅನುಷಾ ರಾವ್ ಕನ್ನಡ ಸೇರಿದಂತೆ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ. ಅರುಂಧತಿಯಾಗಿ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿರುವ ಅನುಷಾ ರಾವ್ ಅವರಿಗೆ ಕಿರುತೆರೆಯಲ್ಲಿ ಜನಪ್ರಿಯತೆ ನೀಡಿದ್ದು ರಾಧಿಕಾ ಪಾತ್ರ.

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಾಯಕ ಸಿದ್ದಾರ್ಥ್‌ ಅಣ್ಣ ಗೌತಮ್‌ನ ಹೆಂಡತಿ ರಾಧಿಕಾ ಪಾತ್ರದಲ್ಲಿ ಅನುಷಾ ರಾವ್ ನಟಿಸಿದ್ದರು. ರಾಧಿಕಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಅನುಷಾ ರಾವ್ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದಿದ್ದು 'ದುರ್ಗಾ' ಧಾರಾವಾಹಿ.

Kannada Actress Anusha Rao is busy in other language serial here is the details

ಸ್ಡಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದುರ್ಗಾ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅನುಷಾ ರಾವ್ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ‌‌. ಆಕಸ್ಮಿಕವಾಗಿ ದೊರಕಿದ ಅವಕಾಶದಿಂದ ನಟಿಯಾಗಿ ಕಾಣಿಸಿಕೊಂಡಿರುವ ಅನುಷಾ ರಾವ್ ಅವರು ಸೈಕಾಲಜಿಯಲ್ಲಿ ಎಂ ಎಸ್ ಸಿ ಪದವಿ ಪಡೆದಿದ್ದಾರೆ.

ಅಂದ ಹಾಗೇ ನಟಿಯಾಗಬೇಕು ಎಂದು ಅಂದುಕೊಂಡಿದ್ದ ಅನುಷಾ ರಾವ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಪುಟ್ಟ ಗೌರಿ ಮದುವೆ'ಯ ನಾಯಕ ಮಹೇಶನ ಅಮ್ಮನ ಪಾತ್ರಕ್ಕೆ ಆಡಿಶನ್ ನೀಡಿದ್ದರು. ಆದರೆ, ಆಕೆ ಆ ಪಾತ್ರಕ್ಕೆ ಆಯ್ಕೆ ಆಗಲಿಲ್ಲ. ತದ ನಂತರ 'ದುರ್ಗಾ' ಧಾರಾವಾಹಿಯ ಆಡಿಶನ್‌ಗೆ ಹೋಗಿದ್ದರು. ಅಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು.

Kannada Actress Anusha Rao is busy in other language serial here is the details

ಅಲ್ಲಿ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಅನುಷಾ ರಾವ್ ಮುಂದೆ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ಈಕೆ 'ದೊಡ್ಮನೆ ಸೊಸೆ', 'ಮನೆಯೇ ಮಂತ್ರಾಲಯ' ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ತದ ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ರಾಧಿಕಾ ಪಾತ್ರದಲ್ಲಿ ನಟಿಸಿದ ಈಕೆ ಇಂದಿಗೂ ಅದೇ ಕ್ಯಾರೆಕ್ಟರ್ ಮೂಲಕವೇ ಗುರುತಿಸಿಕೊಂಡಿರುವುದು ಖುಷಿಯ ವಿಚಾರ. ಅಂದ ಹಾಗೇ ಅನುಷಾ ರಾವ್ ಅವರು ಧಾರಾವಾಹಿ ಆರಂಭದ ದಿನಗಳಲ್ಲಿಯೇ ರಾಧಿಕಾ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಧಾರಾವಾಹಿ ಅರ್ಧದಲ್ಲಿ ಈಕೆ ಕಾಣಿಸಿಕೊಂಡಿದ್ದರೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಇನ್ನು ತೆಲುಗು ಕಿರುತೆರೆಗೆ ಕಾಲಿಟ್ಟಿರುವ ಅನುಷಾ ರಾವ್ ಖಳನಾಯಕಿಯಾಗಿಯೂ ಮೋಡಿ ಮಾಡಿದ್ದಾರೆ. ತಮ್ಮ ನಟನೆಯ ಮೂಲಕ ಪರಭಾಷೆಯ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಇವರು ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈಕೆ ಮುಂದೆ 'ಚಿತ್ರಕಥಾ', 'ಮನರೂಪ', 'ನಕ್ಷೆ', 'ಮಹಾ ಕರ್ಮ', ಹಾಗೂ 'ಪದವಿಪೂರ್ವ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಮನರೂಪ' ಸಿನಿಮಾದ ನಟನೆಗೆ ಈಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

More from Filmibeat

English summary
Kannada Actress Anusha Rao is busy in other language serial here is the details:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X