ತೆಲುಗು ಡ್ರಾಮಾ ಜ್ಯೂನಿಯರ್ಸ್ ಶೋ ಮೆಂಟರ್ ಆದ ಈ ಕನ್ನಡತಿಯ ಹಿನ್ನೆಲೆಯೇನು?

By ಅನಿತಾ ಬನಾರಿ

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕಿ ನಯನಿ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ ಕನ್ನಡತಿಯ ಹೆಸರು ಆಶಿಕಾ ಪಡುಕೋಣೆ. ತಮ್ಮ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದ ಆಶಿಕಾ ಪಡುಕೋಣೆ ಇದೀಗ ಖಡಕ್ ಲುಕ್ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ. ಅದು ಕೂಡಾ ಜೀ ತೆಲುಗು ವಾಹಿನಿಯಲ್ಲಿ ಎನ್ನುವುದು ವಿಶೇಷ.

ಹೌದು, ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೇಘಸಂದೇಶಂ' ಧಾರಾವಾಹಿಯಲ್ಲಿ ಎಸಿಪಿ ನಯನಿ ಪಾತ್ರದಲ್ಲಿ ನಟಿ ಆಶಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಖಡಕ್ ಅಧಿಕಾರಿಯಾಗಿ ಅಭಿನಯಿಸುತ್ತಿರುವ ಆಶಿಕಾ ತಮ್ಮ ಮಾಸ್ ಲುಕ್ ಮೂಲಕ ಪರಭಾಷೆಯ ಕಿರುತೆರೆ ವೀಕ್ಷಕರ ಮನವನ್ನು ಸೆಳೆದಿದ್ದಾರೆ.

Kannada actress Ashika Padukone became Telugu Drama Juniors Show Mentor

ಇದರ ಜೊತೆಗೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ರಿಯಾಲಿಟಿ ಶೋ 'ಡ್ರಾಮಾ ಜ್ಯೂನಿಯರ್ಸ್ ಸೀಸನ್ 8'ರ ಮೆಂಟರ್ ಆಗಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಸದ್ಯ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಆಶಿಕಾ ಪಡುಕೋಣೆ ಕಿರುತೆರೆಗೆ ಕಾಲಿಟ್ಟಿದ್ದು ರಾಜಕುಮಾರಿಯಾಗಿ ಅರ್ಥಾತ್ ರಾಜಕುಮಾರಿ ಧಾರಾವಾಹಿ ಮೂಲಕ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಕುಮಾರಿ' ಧಾರಾವಾಹಿಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಆಶಿಕಾ ಪಡುಕೋಣೆ ನಂತರ ನಟಿಸಿದ್ದು 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ. 'ತ್ರಿವೇಣಿ ಸಂಗಮ'ದಲ್ಲಿ ನಾಯಕಿಯಾಗಿ ಅಭಿನಯಿಸಿದ ಆಶಿಕಾ ನಂತರ 'ನಿಹಾರಿಕಾ' ಧಾರಾವಾಹಿಯ ಮಧ್ಯದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದರು.

ಬೆರಳೆಣಿಕೆಯಷ್ಟು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ ಈಕೆ ನಂತರ ಹಾರಿದ್ದು ಪರಭಾಷೆಯ ಕಿರುತೆರೆಗೆ. ತಮಿಳಿನ 'ತಮಿಳು ಸೆಲ್ವಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟ ಈ ಕನ್ನಡತಿ ಮುಂದೆ ನಟಿಸಿದ್ದು ತೆಲುಗು ಧಾರಾವಾಹಿ 'ಕಥಾಲೋ ರಾಜಕುಮಾರಿ'ಯಲ್ಲಿ. ಈ ಧಾರಾವಾಹಿಯು ಕೂಡಾ 'ಕಥೆಯಾದಳು ರಾಜಕುಮಾರಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಡಬ್ ಆಗಿತ್ತು. ಟಿಆರ್‌ಪಿ ಸಮಸ್ಯೆಯಿಂದಾಗಿ ಅರ್ಧದಲ್ಲಿಯೇ ಮುಕ್ತಾಯಗೊಂಡಿತ್ತು.

Kannada actress Ashika Padukone became Telugu Drama Juniors Show Mentor

ಮುಂದೆ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕಿ ತ್ರಿನಯಿನಿ ಆಗಿ ಈಕೆ ಅಭಿನಯಿಸಿದರು. ತಮ್ಮ ನಟನೆಯ ಮೂಲಕ ಆಶಿಕಾ ಪರಭಾಷೆಯ ಕಿರುತೆರೆ ವೀಕ್ಷಕರ ಮನವನ್ನು ಸೆಳೆದಿದ್ದಾರೆ ಎಂಬುದಕ್ಕೆ ಜೀ ಕುಟುಂಬಂ ಅವಾರ್ಡ್ಸ್‌ನಲ್ಲಿ ಆಕೆ ಪಡೆದ 'ಉತ್ತಮ ಕಥಾನಾಯಕಿ' ಪ್ರಶಸ್ತಿಯೇ ಸಾಕ್ಷಿ. ಇದರ ಜೊತೆಗೆ 'ತ್ರಿನಯಿನಿ' ಧಾರಾವಾಹಿಯು ಕನ್ನಡ ಭಾಷೆಗೆ ಡಬ್ ಆಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿತ್ತು. ವಿಭಿನ್ನ ರೀತಿಯ ಕಥಾಹಂದರವನ್ನೊಳಗೊಂಡಿದ್ದ ಈ ಧಾರಾವಾಹಿಯನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದರು.

ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಆಶಿಕಾ ಪಡುಕೋಣೆ ಕೊನೆಯದಾಗಿ ನಟಿಸಿದ್ದು 'ತ್ರಿವೇಣಿ ಸಂಗಮ' ಕನ್ನಡ ಧಾರಾವಾಹಿಯಲ್ಲಿ. ಇದೀಗ ಕನ್ನಡ ಕಿರುತೆರೆಯಿಂದ ದೂರವಿರುವ ಈಕೆ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಮರಳುತ್ತಾರಾ ಎಂದು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.

More from Filmibeat

English summary
Kannada actress Ashika Padukone became Telugu Drama Juniors Show Mentor:
Read more about: actress tv show reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X