ಬ್ಯಾಕ್ ಅಂಡ್ ಬ್ಯಾಕ್‌ನಲ್ಲಿ ಖಡಕ್ ಲುಕ್ ಕೊಟ್ಟ ಭೂಮಿ ಶೆಟ್ಟಿ; ಹೊಸ ಲುಕ್‌ಗೆ ಏನಂದ್ರು ನೆಟ್ಟಿಗರು?
ಭೂಮಿ ಶೆಟ್ಟಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ನಟಿಯ ಫೋಟೋಗಳು ಸಖತ್ ಆಗಿ ವೈರಲ್ ಕೂಡ ಆಗುತ್ತಿವೆ. ಹಾಗೆಯೇ ಇದೀಗ ಭೂಮಿಕಾ ಬಹಳ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮಾದಕ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಸಖತ್ ಬ್ಯುಸಿ ಆಗಿದ್ದ ನಟಿ ಭೂಮಿ ಶೆಟ್ಟಿ ಇದೀಗ ಪರ ಭಾಷೆಗಳಲ್ಲಿ ನಟನೆ ಮಾಡಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ.
ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ. ಇದೀಗ ಮತ್ತೊಮ್ಮೆ ತಮ್ಮ ಫೋಟೋಶೂಟ್ ಅನ್ನು ಶೇರ್ ಮಾಡಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಇನ್ನೂ ಭೂಮಿ ಶೆಟ್ಟಿ ಸಖತ್ ಬೋಲ್ಡ್ ನಟಿ. ಯಾರೆ ಏನೇ ಹೇಳಿದರೂ ಕೂಡ ಭೂಮಿ ಶೆಟ್ಟಿ ಕ್ಯಾರೆ ಎನ್ನುವುದಿಲ್ಲ. ಆಕೆಗೆ ತನ್ನ ಲುಕ್ ಹಾಗೂ ಸ್ಟೈಲ್ ಬಗ್ಗೆ ಹೆಮ್ಮೆಯಿದೆ.

ಭೂಮಿಕಾ ಶೆಟ್ಟಿ ಫೋಟೋಶೂಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಭೂಮಿ ಶೆಟ್ಟಿ ಅಂದವನ್ನು ಹೊಗಳಿದರೆ, ಇನ್ನು ಕೆಲವರು ಅವರನ್ನು ಟೀಕಿಸಿದ್ದಾರೆ. ಇನ್ನೂ ಭೂಮಿ ಶೆಟ್ಟಿ ರಗಡ್ ಲುಕ್ ನೋಡಿ ಅಭಿಮಾನಿಗಳಿ ಹಾಗು ನಟ ನಟಿಯರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಟ ಚಂದನ್ ಶೆಟ್ಟಿ, ಸಂಯುಕ್ತ ಹೆಗ್ಡೆ, ಹಾಗೆಯೇ ಇನ್ನೂ ಅನೇಕ ಜನ ನಟ, ನಟಿಯರು ಭೂಮಿ ಶೆಟ್ಟಿ ಲುಕ್‌ಗೆ ಮನಸೋತಿದ್ದಾರೆ. ಇನ್ನೂ ಆಗಾಗ ಜಾಲಿ ಮೂಡ್‌ನಲ್ಲಿ ಕಾಣಿಸಿಕೊಳ್ಳುವ ನಟಿ ಭೂಮಿ ಶೆಟ್ಟಿ ಬೈಕ್ ರೈಡ್ ಕೂಡ ಮಾಡುತ್ತಾರೆ.
ಯಾರ ಮಾತಿಗೂ ಬಗ್ಗದ ನಟಿ
ಯಾರು ಏನೇ ಹೇಳಿದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಹುಡುಗಿ ಭೂಮಿ ಶೆಟ್ಟಿ ಅಲ್ಲಾ. ಇನ್ನೂ ಭೂಮಿ ಶೆಟ್ಟಿ ಕಪ್ಪು ಬಣ್ಣದ ಲೆದರ್ ಪ್ಯಾಂಟ್, ಕಪ್ಪು ಬಣ್ಣದ ಟ್ರಾನ್ಸ್‌ಪರೆಂಟ್ ಟಾಪ್ ಮತ್ತು ಕಪ್ಪು ಬಣ್ಣದ ಜಾಕೆಟ್ ಧರಿಸಿರುವ ಭೂಮಿ ಶೆಟ್ಟಿ, ಸ್ಟೈಲಿಶ್ ಆಗಿ ಗ್ಲಾಸ್ ತೊಟ್ಟಿದ್ದಾರೆ. ಜೊತೆಗೆ ಬಾಕ್ಸ್ ಬ್ರೈಡ್ಸ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಫರೆಂಟ್ ಲುಕ್ ಕೊಟ್ಟ ನಟಿ
ಹಾಗೆಯೇ ಫೋಟೋವನ್ನು ಫೋಸ್ಟ್ ಮಾಡಿದ್ದ ಭೂಮಿ ಶೆಟ್ಟಿ ಅದರ ಕೆಳಗೆ "Main character energy" ಎಂದು ಬರೆದುಕೊಂಡಿದ್ದಾರೆ. ಭೂಮಿ ಶೆಟ್ಟಿ ಹೊಸ ಲುಕ್‌ಗೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಇನ್ನೂ ಭೂಮಿ ಶೆಟ್ಟಿ ಹೇರ್ ಸ್ಟೈಲ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ.


Click it and Unblock the Notifications











