Bhoomi Shetty: ಮಹಾರಾಷ್ಟ್ರ ಶೈಲಿಯ ಸೀರೆಯುಟ್ಟು ಮಿಂಚಿದ 'ಕಿನ್ನರಿ' ಬೆಡಗಿ ಭೂಮಿ ಶೆಟ್ಟಿ
ಕಿನ್ನರಿ ಧಾರಾವಾಹಿಯ ಮೂಲಕ ಸಕತ್ ಫೇಮಸ್ ಆಗಿರುವ ನಟಿ ಭೂಮಿ ಶೆಟ್ಟಿ. ಧಾರಾವಾಹಿಯಲ್ಲಿ ಭೂಮಿ ಶೆಟ್ಟಿಯನ್ನು ಜನರು ಬಹಳಷ್ಟು ಇಷ್ಟಪಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಟಿ ಸಕತ್ ಆಕ್ಟಿವ್ ಆಗಿದ್ದು ನೋಡುಗರಿಗೆ ಇನ್ನಷ್ಟು ಖುಷಿ ನೀಡಿದೆ. ಇದೀಗ ಭೂಮಿ ಶೆಟ್ಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಶೈಲಿಯ ಸೀರೆ ಉಟ್ಟು ಬಹಳ ಅಂದವಾಗಿ ಕಾಣಿಸುತ್ತಿದ್ದಾರೆ.
ಭೂಮಿ ಶೆಟ್ಟಿ ಕಿನ್ನರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದರು. ಆ ಬಳಿಕ ಬಿಗ್ ಬಾಸ್‌ನಲ್ಲಿ ಕೂಡ ಭಾಗವಹಿಸಿ, ಅಲ್ಲಿಂದ ಎಲ್ಲರಿಗೂ ಭೂಮಿ ಶೆಟ್ಟಿ ಚಿರಪರಿಚಿತರಾಗಿದ್ದರು. ಬಿಗ್ ಬಾಸ್‌ಗೆ ಕಾಲಿಟ್ಟ ಬಳಿಕ ಭೂಮಿ ಶೆಟ್ಟಿಯನ್ನು ಜನರು ಬಹಳ ಇಷ್ಟ ಪಡುತ್ತಿದ್ದರು. ಬಿಗ್ ಬಾಸ್‌ನಲ್ಲೂ ಕೂಡ ಸಕತ ಆಕ್ಟಿವ್ ಆಗಿದ್ದು ಸ್ಟ್ರಾಂಗ್ ಕಂಟೆಸ್ಟೆಂಟ್ ಅನ್ನುವಂತಹ ರೀತಿಯಲ್ಲಿ ಇದ್ದರು. ಬಳಿಕ ಇವರಿಗೆ ಕನ್ನಡ ಸಿನಿಮಾ ಹಾಗೂ ಇತರ ಭಾಷೆಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಭೂಮಿ ಶೆಟ್ಟಿ ಇದೀಗ ಸಖತ್ ಬ್ಯುಸಿಯಾಗಿದ್ದಾರೆ. ಭೂಮಿ ಶೆಟ್ಟಿ, ಮುಂಬೈನ ಗಲ್ಲಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಭೂಮಿ ಶೆಟ್ಟಿ ಆಗಾಗ ಫೋಟೋಸ್, ವಿಡಿಯೋವನ್ನು ಶೇರ್ ಮಾಡಿ ಅಭಿಮಾನಿಗಳಿಗೆ ರಸದೌತಣ ಬಡಿಸುತ್ತಿರುತ್ತಾರೆ.
ಬಿಳಿ ಬಣ್ಣದ ಸೀರೆಯುಟ್ಟು ಮಿಂಚಿದ ನಟಿ
ಭೂಮಿ ಶೆಟ್ಟಿ ಮಹಾರಾಷ್ಟ್ರಿಯನ್ ಶೈಲಿಯಲ್ಲಿ ಬಿಳಿ ಬಣ್ಣದ ಅದರ ಮೇಲೆ ಕೆಂಪು ಫ್ಲೋರಲ್ ಡಿಸೈನ್ ಇರುವ ಸೀರೆಯುಟ್ಟಿದ್ದಾರೆ. ಜೊತೆಗೆ ಕೆಂಪು ಬಣ್ಣದ ಬ್ಲೌಸ್ ಕೂಡ ಧರಿಸಿದ್ದಾರೆ. ಹಾಗೆಯೇ ವೈಟ್ ಸ್ನೀಕರ್ಸ್ ಧರಿಸಿ, ಬನ್ ಹೇರ್ ಸ್ಟೈಲ್ ಜೊತೆಗೆ ಗೋಲ್ಡನ್ ಇಯರಿಂಗ್ಸ್, ಜೊತೆ ಡಿಸೈನರ್ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಭೂಮಿ ಶೆಟ್ಟಿಯ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಹಾಗೂ ಲೈಕ್ ಮಾಡಿ ಸಂತಸ ಹೊರ ಹಾಕಿದ್ದಾರೆ.

ಮುಂಬೈನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ನಟಿ
ಭೂಮಿ ಶೆಟ್ಟಿಯ ನೋಟ ನೋಡುಗರಿಗೆ ಬಹಳ ನಾಟುವಂತೆ ಇದ್ದು ಅಭಿಮಾನಿಗಳಿಗೆ ಬಹಳ ಇಷ್ಟವಾಗುವಂತೆ ಇರುತ್ತಾರೆ. ಭೂಮಿ ಶೆಟ್ಟಿ ಇದೀಗ ತಮಿಳು, ತೆಲುಗು ಭಾಷೆಗಳಲ್ಲಿ ಅಭಿನಯ ಮಾಡುವುದರಲ್ಲಿ ಬ್ಯುಸಿಯಾಗಿ ಸಿನಿಮಾಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.
ಕುಂದಾಪುರದ ಬೆಡಗಿ ಸಿನಿಮಾಗಳಲ್ಲಿ ಬ್ಯುಸಿ
ಇದೀಗ ಕುಂದಾಪುರದ ಬೆಡಗಿ ಎಲ್ಲರ ಫೇವರೆಟ್ ನಟಿಯಾಗಿರುವ ಭೂಮಿ ಶೆಟ್ಟಿ ಅಭಿನಯದ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಭೂಮಿ ಶೆಟ್ಟಿ ನೋಟಕ್ಕೆ ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ.


Click it and Unblock the Notifications











