ಗಂಡ್ಮಕ್ಳ ಜಾಕೆಟ್ ಹಾಕಿ ಪೋಸ್ ಕೊಟ್ಟ ಚೈತ್ರಾ; ಅಷ್ಟಕ್ಕೂ ಈ ಜಾಕೆಟ್ ವಿಶೇಷವೇನು?
ಚೈತ್ರಾ ಜೆ.ಆಚಾರ್ ಕನ್ನಡ ಚಿತ್ರರಂಗದ ಸಿಕ್ಕಾಪಟ್ಟೆ ಹಾಟ್ ಬೇಬಿ. ತನಗೆ ಹೇಗೆ ಅನ್ನಿಸುತ್ತೋ ಅದೇ ರೀತಿಯ ಇರುವುದಕ್ಕೆ ಇಷ್ಟ ಪಡುವ ನಟಿ. ನೆಗೆಟಿವ್ ಕಮೆಂಟ್‌ಗಳಿಗೆ ಡೋಂಟ್ ಕೇರ್. ಚೈತ್ರಾಗೆ ಪಾಸಿಟಿವ್ ಕಮೆಂಟ್‌ಗಳಿಗಿಂತ ನೆಗೆಟಿವ್ ಕಮೆಂಟ್‌ಗಳು ಬಂದಿರುವುದೇ ಹೆಚ್ಚು. ಆದರೂ ಅದಕ್ಕೆಲ್ಲಾ ಗಮನ ಕೊಡುವುದಕ್ಕೆ ಸಮಯವನ್ನ ಮೀಸಲಿಡುವುದಿಲ್ಲ. ಚೈತ್ರಾ ಜೆ.ಆಚಾರ್ ಅವರಿಗೆ ಅಷ್ಟೊಂದು ನೆಗೆಟಿವ್ ಕಮೆಂಟ್ ಬರೋದಕ್ಕೆ ಕಾರಣ, ಅಷ್ಟೊಂದು ಟ್ರೋಲ್ ಆಗುವುದಕ್ಕೆ ಕಾರಣ ಅವರ ಮಾರ್ಡನ್ ಫ್ಯಾಷನ್.
ಚೈತ್ರಾ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಮಾತಲ್ಲಿ ಆಗಲಿ, ಡ್ರೆಸ್ಸಿಂಗ್ ಸೆನ್ಸ್‌ನಲ್ಲಿ ಆಗಲಿ, ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಹೆಚ್ಚು. ಅದರಲ್ಲೂ ಮಾದಕತೆ ತುಂಬಿದ ಫೋಟೊಗಳೇ ಹೆಚ್ಚಾಗಿ ಸಿಗುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಎರಡೂವರೆ ಲಕ್ಷ ಜನ ಫಾಲೋವರ್ಸ್ ಹೊಂದಿದ್ದಾರೆ. ಚೈತ್ರಾ ಹಾಕುವ ಒಂದೊಂದು ಪೋಸ್ಟ್‌ಗೂ ಬರುವ ಲೈಕ್ಸ್, ಕಮೆಂಟ್ ಕಡಿಮೆ ಏನು ಅಲ್ಲ. ಸೀರೆ ಉಟ್ಟರೂ ಸಿಂಗಾರ ಮಾಡಿಕೊಂಡು, ಮಾಡರ್ನ್ ಲುಕ್ ಕೊಡ್ತಾರೆ.

ಚೈತ್ರಾ ಜೆ ಆಚಾರ್ ಅವರನ್ನ ಕನ್ನಡದ ಆಲಿಯಾ ಭಟ್ ಅಂತಾನೇ ಕರೆಯುತ್ತಾರೆ. ನೋಡುವುದಕ್ಕೆ ಸೇಮ್ ಟು ಸೇವ್ ಅವರಂತೆಯೇ ಕಾಣುತ್ತಾರೆ. ಕಣ್ಣಿನ ಭಾಗದಲ್ಲಿ ಕಪ್ಪು ಮಚ್ಚೆಯೊಂದು ಚೈತ್ರಾಗೆ ಹೆಚ್ಚಾಗಿದೆ. ಆದರೆ ಅದು ಕೂಡ ವಿಶೇಷ ನೋಟವನ್ನ ಬೀರುತ್ತದೆ. ಚೈತ್ರಾ ಆಚಾರ ಸುಮ್ಮನೇ ಕೂರೋದೆ ಅಲ್ಲ. ಸದಾ ಕಾಲ ಏನಾದರೊಂದನ್ನ ಮಾಡ್ತಾನೆ ಇರುತ್ತಾರೆ. ಹೊಸದಾಗಿ ಕಾಣಿಸುವ ಡ್ರೆಸ್ ಹಾಕ್ತಾರೆ, ಮೇಕಪ್ ಮಾಡಿಸಿಕೊಳ್ತಾರೆ, ಫೋಟೋಶೂಟ್ ಮಾಡಿಸಿಕೊಳ್ತಾರೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಫಿಟ್ನೆಸ್ ಮೆಂಟೈನ್ ಮಾಡುವುದಕ್ಕೆ ಜಿಮ್‌ನಲ್ಲೂ ಕಸರತ್ತು ಮಾಡುತ್ತಾರೆ. ಬೆವರಿಳಿಸಿ ದೇಹವನ್ನು ದಂಡಿಸುತ್ತಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಬೆಕ್ಕುಗಳೆಂದರೆ ಸಿಕ್ಕಾಪಟ್ಟೆ ಇಷ್ಟಪಡುವ ಚೈತ್ರಾ, ಬೆಕ್ಕುಗಳು ಕಣ್ಮುಂದೆ ಬಂದರೆ ಮುದ್ದಾಡಿಡುತ್ತಾರೆ. ಚೈತ್ರಾ ಕ್ರೇಜಿ ಗರ್ಲ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಎಷ್ಟು ಕ್ರೇಜಿ ಅಂದ್ರೆ ಆಟೋದಲ್ಲಿ ಕೂತು ತೆಗೆದುಕೊಂಡ ಸೆಲ್ಫೀ ನೋಡಿದರೆ ಯಾವ ದೇಶದ ಸೆಲ್ಫಿ ಎನ್ನಬೇಕು ಅಷ್ಡು ಡಿಸೈನ್ ಡಿಸೈನ್ ಆಗಿ ಫೋಟೋ ತೆಗೆದುಕೊಳ್ಳುತ್ತಾರೆ.
ಎಂಥದ್ದೇ ಪಾತ್ರ ಕೊಟ್ಟರೂ ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸ್ತಾರೆ ಅನ್ನೋದನ್ನ 'ಟೋಬಿ' ಸಿನಿಮಾದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ಅದೆಷ್ಟೇ ಸವಾಲಿನ ಪಾತ್ರವಾದರೂ ಗಮನ ಸೆಳೆಯುವಂತೆ, ವಾವ್ ಎನ್ನುವಂತೆ ಪಾತ್ರವನ್ನ ಮಾಡ್ತಾರೆ. ಅವರ ಸೋಷಿಯಲ್ ಮೀಡಿಯಾದಲ್ಲಿ ಪಿನ್ ಮಾಡಿರೋ ಒಂದು ಸಾಂಗ್ ತುಣುಕು ಕೂಡ ಹಾಗೇ ಸವಾಲಿನದ್ದಾಗಿದೆ. ಹಾಗೇ ಉತ್ತರಕಾಂಡ ಸಿನಿಮಾದಲ್ಲೂ ಡಿ ಗ್ಲಾಮರ್ ಪಾತ್ರ ಮಾಡಿದ್ದಾರೆ. ಅದರಲ್ಲೂ ಮುಖವೆಲ್ಲ ಸುಕ್ಕು ಗಟ್ಟಿದಂತೆ, ಅಡಿಕೆ ಎಲೆಯನ್ನು ಸದಾ ಕಾಲ ಜಗಿಯುತ್ತಾ ಇರುವಂತಹ ಪಾತ್ರ ಅದು.

ಹೀಗೆ ಯಾವುದೇ ಪಾತ್ರವಾದರೂ ಸದಾ ಅದರಲ್ಲಿ ಜೀವಿಸುವ ಚೈತ್ರಾ ಆಚಾರ ರಿಯಲ್ ಲೈಫ್ ನಲ್ಲಿ ಕ್ರೇಜಿ. ಏನೇ ಬರಲಿ ಲೈಫ್ ಅಲ್ಲಿ ನಗು ಇರ್ಬೇಕು ಅಂತ ಭಾವಿಸುವವರು. ಅದಕ್ಕೆ ತಮ್ಮ ಜೊತೆಗೆ ಇರುವವರನ್ನು ಸದಾ ನಗಿಸುತ್ತಲೆ ಇರುತ್ತಾರೆ. ಅಂಥದ್ದೆ ಕ್ರೇಜಿ ಕೆಲಸವೊಂದನ್ನ ಮಾಡಿದ್ದಾರೆ. ಅದುವೇ ಅವರು ತೊಟ್ಟಿರುವ ಜಾಕೆಟ್. ಗ್ರೀನ್ ಕಲರ್, ವೈಟ್ ಲೈನ್ ಮಿಕ್ಸ್ ಆಗಿದ್ದು, ಬಿ ಅಕ್ಷರವನ್ನ ದೊಡ್ಡದಾಗಿ ಮುದ್ರಿಸಲಾಗಿದೆ. ಅದು ಬೇಸ್ ಜಾಕೆಟ್. ಇದರ ಬೆಲೆ ಸುಮಾರು 6-7 ಸಾವಿರ ರೂಪಾಯಿ ಇದೆ. ಇದು ಬಾಯ್ಸ್ ಗೆ ಮಾತ್ರ ಸಿಗೋದು. ಆದರೆ ಚೈತ್ರಾ ಆಚಾರ್ ಅದೆಲ್ಲ ತಲೆಗೆ ಹಾಕೋಳಲ್ಲ. ಗಂಡು ಮಕ್ಕಳ ಜಾಕೆಟ್ ಹಾಕಿ ಪೋಸ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತುಂಬಾನೇ ಇಷ್ಟ ಪಟ್ಟಿದ್ದಾರೆ.


Click it and Unblock the Notifications











