Actress Chaitra Hallikeri: ಬಿಗ್ ಬಾಸ್ ಲೈಫ್ ಟೈಮ್ ಅನುಭವ ಎಂದ ಚೈತ್ರ ಹಳ್ಳಿಕೆರೆ
ಸುಖ-ದುಃಖ ಸಂತೋಷ ನೋವು ನಲಿವು ನೆನಪು ಈ ರೀತಿ ಎಲ್ಲವನ್ನು ಇಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಒಂದು ಹೊಸ ಟ್ರೆಂಡ್ ಆಗಿದೆ. ಅಂತೆಯೇ ನಟಿ ಚೈತ್ರಾ ಹಳ್ಳಿಕೇರಿಯವರು ತಮ್ಮ ಬಿಗ್ ಬಾಸ್ ದಿನಗಳನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದಷ್ಟು ಫೋಟೋಗಳೊಂದಿಗೆ ಒಂದಷ್ಟು ಒಳ್ಳೆಯ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಓಟಿಟಿಯಲ್ಲಿ ಚೈತ್ರಾ ಹಳ್ಳಿಕೇರಿಯವರು ಭಾಗವಹಿಸಿದ್ದರು. ಬರೋಬ್ಬರಿ 45 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಹೆಗ್ಗಳಿಕೆ ಇವರಿಗಿದೆ. ಈ ಬಿಗ್ ರಿಯಾಲಿಟಿ ಶುರುವಾಗಿ ಇತ್ತೀಚೆಗೆ ಒಂದು ವರ್ಷ ಕಳೆದಿದ್ದು ಆ ಬಗ್ಗೆ ಕೆಲ ನೆನಪುಗಳನ್ನು ಮೆಲುಕು ಹಾಕಿರುವ ನಟಿ ಚೈತ್ರಾ ಹಳ್ಳಿಕೇರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದಷ್ಟು ಫೋಟೋಗಳ ಜೊತೆಗೆ ಹಿಂದಿನ ಘಟನೆಗಳನ್ನು ನೆನೆದಿದ್ದಾರೆ.

ಬಿಗ್ ಬಾಸ್ ಲೈಫ್ ಟೈಮ್ ಅನುಭವ
ನನಗೆ ಬಿಗ್ ಬಾಸ್ ಒಂದು ಲೈಫ್ ಟೈಮ್ ಅನುಭವ ಎಂದು ಬರೆದುಕೊಂಡಿರುವ ನಟಿ ಚೈತ್ರಾ ಹಳ್ಳಿಕೇರಿಯವರು ನಾನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆ 45 ದಿನಗಳ ಯಾವ ಎಪಿಸೋಡ್‌ಗಳನ್ನು ನೋಡಲಿಲ್ಲ. ಇತ್ತೀಚೆಗಷ್ಟೇ ನನ್ನ ಇಂಟ್ರುಡಕ್ಷನ್ ವಿಡಿಯೋವನ್ನು ನೋಡಿದೆ. ಇಡೀ ಬಿಗ್ ಬಾಸ್ ಜರ್ನಿ ನನಗೆ ಬಹಳಷ್ಟು ವಿಚಾರಗಳು ಹೇಳಿ ಕೊಟ್ಟಿದ್ದಲ್ಲದೆ ಜೀವನದುದ್ದಕ್ಕೂ ಸಾಕಾಗುವಷ್ಟು ಒಳ್ಳೆ ನೆನಪುಗಳನ್ನು ಕೊಟ್ಟಿದೆ" ಎಂದು ಬರೆದುಕೊಂಡಿದ್ದಾರೆ.
ಜನರಿಗೆ ಪ್ರೇರಣೆ ಮಾಡಿದ್ದೇನೆ
ಬಿಗ್ ಬಾಸ್ ಮನೆಗೆ ಕಾಲಿಟ್ಟ ನಾನು ಬಹಳ ಹೆಚ್ಚಿನ ಸಾಧನೆ ಏನು ಮಾಡಿರಲಿಲ್ಲ. ಆಗಷ್ಟೇ ವೈವಾಹಿಕ ಜೀವನದಿಂದ ಹೊರ ಬಂದಿದ್ದೆ ಎಂಬುದೇ ದೊಡ್ಡ ನ್ಯೂಸ್ ಆಗಿತ್ತು. ಅಂತಹ ಸಂದರ್ಭದಲ್ಲಿ ನನಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟವೇ ಸರಿ. ಅಲ್ಲಿ ಇದ್ದದ್ದು ಬರೀ 45 ದಿನಗಳಾದರೂ ನಾನು ಒಂದಲ್ಲ ಒಂದು ರೀತಿಯಲ್ಲಿ ಜನರ ಜೀವನವನ್ನು ಪ್ರೇರಣೆ ಮಾಡಿದ್ದೇನೆ ಎಂದು ನಂಬುತ್ತೇನೆ." ಎಂದು ಬರೆದುಕೊಂಡಿದ್ದಾರೆ.

ಜನರ ಪ್ರೀತಿ ಬಿಗ್ ಬಾಸ್ ನೀಡಿದ ಪ್ರತಿಫಲ
ಅಷ್ಟೇ ಅಲ್ಲದೆ "ಇಂದು ಹಿಂದೆ ತಿರುಗಿ ನೋಡಿದಾಗ ನನಗೆ ಜನರಿಂದ ಸಿಗುವ ಪ್ರೀತಿ, ಗೌರವ, ವಾತ್ಸಲ್ಯವೆಲ್ಲವೂ ಬಿಗ್ ಬಾಸ್ ಮನೆಯಲ್ಲಿ ನಾ ಕಳೆದ 45 ದಿನಗಳ ಪ್ರತಿಫಲ ಎಂದೆ ನಂಬುತ್ತೇನೆ. ಒಬ್ಬ ಮಹಿಳೆ ನನ್ನ ಬಳಿ ಬಂದು ನಾನು ಅವರನ್ನು ಬಹಳಷ್ಟು ಪ್ರೇರಣೆ ಮಾಡಿದ್ದೆ ಎಂದೊಮ್ಮೆ ಹೇಳಿಕೊಂಡಿದ್ದರು. ಆ ಮಾತನ್ನು ನಾನೆಂದು ಮರೆಯುವುದಿಲ್ಲ. ಎಲ್ಲ ರೀತಿಯಲ್ಲಿ ಬಿಗ್ ಬಾಸ್ ನನಗೂ ನನ್ನ ಜೀವನಕ್ಕೂ ಬಹಳಷ್ಟು ವಿಚಾರಗಳನ್ನು ಹೇಳಿಕೊಟ್ಟಿದ್ದಲ್ಲದೆ ನನ್ನಿಂದ ಒಂದಷ್ಟು ಪ್ರೇಕ್ಷಕರಿಗಾದರೂ ಒಳ್ಳೆಯ ವಿಚಾರಗಳನ್ನು ತಿಳಿಸಿಕೊಟ್ಟಿದೆ ಎಂದು ನಂಬುತ್ತೇನೆ. ಆ ಸಂತೃಪ್ತಿ ನನ್ನಲ್ಲಿ ಸದಾ ಇದೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











