ಬಾಲಿ ಥ್ರೋಬ್ಯಾಕ್ ಫೋಟೊಗಳನ್ನು ಹಂಚಿಕೊಂಡ ದೀಪಿಕಾ ದಾಸ್: ಫ್ಯಾನ್ಸ್ ಕಾಮೆಂಟ್‌ ಏನು?

By ಪೂರ್ವ

'ನಾಗಿಣಿ' ಧಾರಾವಾಹಿಯ ಮೂಲಕ ದೀಪಿಕಾ ದಾಸ್ ಕನ್ನಡಿಗರ ಮನಮೆಚ್ಚಿದ ನಾಯಕಿಯಾದರು. ಹೌದು ದೀಪಿಕಾ ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಮೋಡಿ ಮಾಡಿದ್ದರು. ನಟನೆಯಲ್ಲಿ ಆಕೆಯನ್ನು ಮೀರಿಸುವವರು ಯಾರು ಇಲ್ಲ ಅಷ್ಟು ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಇದಾದ ಬಳಿಕ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡರು. ತನ್ನದೇ ಆದ ರೀತಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದರು ಎಂದು ಹೇಳಿದರೆ ತಪ್ಪಾಗದು.

ಇನ್ನು ದೀಪಿಕಾ ದಾಸ್ ಸದಾ ಒಂದಲ್ಲ ಒಂದು ಸುದ್ದಿಯಿಂದ ಸದ್ದಾಗುತ್ತಲೇ ಇರುತ್ತಾರೆ. ದೀಪಿಕಾ ಅವರಿಗೆ ಸಖತ್ ಸ್ಟೈಲ್ ಆಗಿ ಡ್ರೆಸ್ ತೊಡುವ ಹುಚ್ಚು ಎಂದರೆ ತಪ್ಪಾಗದು. ಸ್ಟೈಲಿಷ್ ಆಗಿರಬೇಕು ಏನೇ ಮಾಡಿದರೂ ಸ್ಟೈಲ್ ಆಗಿ ಇರಬೇಕು ಎನ್ನುವುದು ಅವರ ಆಸೆ. ಹಾಗೆಯೇ ಇದೀಗ ದೀಪಿಕಾ ದಾಸ್ ಸುದ್ದಿ ಆಗಿರುವುದು ಅವರ ಫ್ಯಾಷನ್‌ ಸೆನ್ಸ್‌ನಿಂದಾಲೇ. ಇತ್ತೀಚೆಗೆ ದೀಪಿಕಾ ಹಳೆಯ ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Kannada actress Deepika Das Bali travel photos went viral

ಹೌದು, ದೀಪಿಕಾ ಕೆಲವು ದಿನಗಳ ಹಿಂದೆ ಪ್ರವಾಸ ಮಾಡುವಾಗ ಧಾರ್ಮಿಕ ಕ್ಷೇತ್ರವೊಂದರಕ್ಕೆ ಹೋಗಿದ್ದರು. ಈ ವೇಳೆ ದೀಪಿಕಾ ದಾಸ್ ಉಟ್ಟಿರುವ ಸೀರೆಯ ಮೇಲೆ ಅವರ ಅಭಿಮಾನಿಗಳ ಕಣ್ಣು ಬಿದ್ದಿದ್ದೆ. ಆ ಸೀರೆಯಲ್ಲಿ ದೀಪಿಕಾ ದಾಸ್ ಅವರನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

ದೀಪಿಕಾ ಮೆಚ್ಚಿಕೊಂಡಾಡಿದ ಫ್ಯಾನ್ಸ್

ವಿದೇಶ ಪ್ರವಾಸದ ವೇಳೆ ಅಲ್ಲಿನ ಸಂಪ್ರದಾಯದಂತೆ ಸೀರೆಯುಟ್ಟಿದ್ದಾರೆ. ಬ್ಲೌಸ್ ಕೂಡ ಅವರದ್ದೇ ಸ್ಟೈಲ್‌ನಲ್ಲಿ ತೊಟ್ಟಿದ್ದರು. ಇದು ಅಭಿಮಾನಿಗಳ ಗಮನ ಸೆಳೆದಿದೆ. ಆ ಸುಂದರ ತಾಣಗಳಲ್ಲಿ ದೀಪಿಕಾ ದಾಸ್ ತೆಗೆಸಿಕೊಂಡ ಫೋಟೋಗಳನ್ನು ಈಗ ದೀಪಿಕಾ ಶೇರ್ ಮಾಡಿಕೊಂಡಿದ್ದರು. ಆ ಫೋಟೋಗಳಿಗೆ ಈ ನಟಿಯ ಫ್ಯಾನ್ಸ್ ಮೆಚ್ಚಿ ಕೊಂಡಾಡಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ದೀಪಿಕಾ

ಇನ್ನು ದೀಪಿಕಾ ದಾಸ್ ಅವರು ಇತ್ತೀಚಿಗೆ ಪ್ರವಾಸಿಗರ ನೆಚ್ಚಿನ ತಾಣ ಬಾಲಿಗೆ ಹೋಗಿದ್ದರು. ಈ ವೇಳೆ ಅಲ್ಲಿನ ಪ್ರಸಿದ್ಧ ಪುರಾತನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿನ ಜನರ ಸಂಸ್ಕೃತಿಯಂತೆ ದೀಪಿಕಾ ಸೀರೆಯುಟ್ಟು ಮಿಂಚಿದ್ದಾರೆ. ಆ ವಿಶಿಷ್ಠ ವಿನ್ಯಾಸದ ದೇವಾಲಯದಲ್ಲಿ ಫೋಟೊಗಳನ್ನು ತೆಗೆಸಿಕೊಂಡು ಮಿಂಚಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಕೂಡ ಮೆಚ್ಚಿಕೊಂಡಾಡಿದ್ದಾರೆ.

ಮದುವೆ ಆದ ಬಳಿಕ ಸಖತ್ ಬ್ಯುಸಿ

ಇನ್ನು ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲೂ ಫುಲ್ ಬ್ಯುಸಿ. ಆಗಾಗ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. "ನಮ್ಮ ಧರ್ಮ ಬೇರೆಯಾಗಿರಬಹುದು. ಭಾಷೆ ಬೇರೆಯಾಗಿರಬಹುದು, ಮೈ ಬಣ್ಣವೂ ಬೇರೆ ಇರಬಹುದು. ಆದರೆ ನಾವೆಲ್ಲರೂ ಮನುಷ್ಯನ ಜಾತಿಗೆ ಸೇರಿದ್ದೇವೆ' ಎಂದು ದೀಪಿಕಾ ದಾಸ್ ಫೋಟೋ ಶೇರ್ ಮಾಡಿ ಹಂಚಿಕೊಂಡಿದ್ದಾರೆ.

More from Filmibeat

English summary
Kannada actress Deepika Das Bali travel photos went viral
Read more about: deepika das poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X