Deepika Das: ಕಿರುತೆರೆ ಬಿಟ್ಟು ಲಂಡನ್‌ನ ಬೀದಿ ಬೀದಿ ಸುತ್ತಾಡಿದ ನಟಿ ದೀಪಿಕಾ ದಾಸ್!

By Poorva

ಲಂಡನ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಹೇಳಿ ಕೇಳಿ ಎಲ್ಲಾ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಲಂಡನ್‌ಗೆ ಒಂದಲ್ಲ ಒಂದು ದಿನ ಹೋಗಬೇಕು, ಅಲ್ಲಿರುವ ಎಲ್ಲ ದಿನಗಳನ್ನು ಬಹಳ ಖುಷಿಯಿಂದ ಎಂಜಾಯ್ ಮಾಡಬೇಕು ಎನ್ನುವುದು ಎಲ್ಲರ ಕನಸು. ಹಾಗೇಯೇ ಇಲ್ಲೊಬ್ಬ ನಟಿ ಇತ್ತೀಚೆಗೆ ಫಾರಿನ್‌ನಲ್ಲಿ ಹೆಚ್ಚು ದಿನಗಳನ್ನು ಕಳೆಯುತ್ತಿದ್ದಾರೆ. ಆ ನಟಿ ಬೇರೆ ಯಾರು ಅಲ್ಲ ಅವರೇ 'ನಾಗಿಣಿ' ನಟಿ ದೀಪಿಕಾ ದಾಸ್.

ದೀಪಿಕಾ ದಾಸ್ ಇದೀಗ ಲಂಡನ್‌ನಲ್ಲಿ ತಮ್ಮ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಲಂಡನ್‌ನ ಬೀದಿ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಲಂಡನ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಬೀದಿ ಬೀದಿಗಳಲ್ಲಿಯೂ ಕ್ರಿಸ್ಮಸ್ ಅಲಂಕಾರ ಸಕತ್ ಜೋರಾಗಿರುತ್ತದೆ. ಹೀಗಾಗಿಯೇ ಹಲವು ಸೆಲಬ್ರಿಟಿಗಳು ಹಬ್ಬ ಆಚರಿಸಲು ಲಂಡನ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ನಟಿ ದೀಪಿಕಾ ದಾಸ್ ಕೂಡ ಒಬ್ಬರು.

Kannada actress Deepika Das enjoyed her London trip, see her Photos

ಲಂಡನ್‌ನಲ್ಲಿ ಕಾಣಿಸಿಕೊಂಡ 'ನಾಗಿಣಿ'!

ನಟಿ ದೀಪಿಕಾ ದಾಸ್ ಲಂಡನ್‌ಗೆ ತೆರಳಿ ಕ್ರಿಸ್ಮಸ್ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಬಟ್ಟೆಗಲ ಆಯ್ಕೆಯಿಂದ ಯಾವಾಗಲು ಟ್ರೆಂಡ್ ಸೃಷ್ಠಿ ಮಾಡುವ ನಟಿ ದೀಪಿಕಾ ದಾಸ್, ಬ್ಲೂ ಡ್ರೆಸ್ ಧರಿಸಿ, ಅದರ ಮೇಲೆ ಗೋಧಿ ಬಣ್ಣದ ಬ್ಲೆಜರ್ ತೊಟ್ಟು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಕೂದಲು ಫ್ರಿಯಾಗಿ ಬಿಟ್ಟು ತಲೆಗೆ ಮುದ್ದಾದ ಟೋಪಿ ಧರಿಸಿದ್ದಾರೆ.

ಇನ್ನು ಡಿಸೆಂಬರ್ ತಿಂಗಳಿನಲ್ಲಿ ಬಹಳ ಚಳಿ ಇರುವುದರಿಂದ ಅದಕ್ಕೆ ತಕ್ಕಂತಾ ಡ್ರೆಸ್ ದೀಪಿಕಾ ಹಾಕಿಕೊಂಡಿದ್ದಾರೆ. ನಟಿ ದೀಪಿಕಾ ದಾಸ್ ಸದ್ಯ ಯಾವುದೇ ಟಿಪಿ ಧಾರಾವಾಹಿಗಳಲ್ಲಿ ಕಾಣಿಸಿಕೊಲ್ಳುತ್ತಿಲ್ಲ. ಹೀಗಾಗಿ ತಮ್ಮ ಫ್ರೀ ಟೈಂನಲ್ಲಿ ಆಗಾಗ ವಿದೇಶಕ್ಕೆ ತೆರಳಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ಒಬ್ಬರೇ ಲಂಡನ್‌ಗೆ ಹೋಗಿದ್ದಿರಾ...?: ದೀಪಿಕಾಗೆ ಫ್ಯಾನ್ಸ್ ಪ್ರಶ್ನೆ

ನಟಿ ದೀಪಿಕಾ ದಾಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ತಕ್ಷಣ ಫ್ಯಾನ್ಸ್ ಅಲರ್ಟ್ ಆಗಿದ್ದಾರೆ. ಫೋಟೋಗಳಲ್ಲಿ ಒಬ್ಬರೇ ಇರುವುದನ್ನು ನೋಡಿ, ಒಬ್ಬರೇ ಹೋಗಿದ್ದಿರಾ ಎಂದ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಇನ್ನು, ನಟಿ ಪದೇ ಪದೇ ವಿದೇಶಕ್ಕೆ ತೆರಳುತ್ತಿರುವ ಬಗ್ಗೆಯೂ ಫ್ಯಾನ್ಸ್ ಪ್ರಶ್ನಿಸಿದ್ದು, ಯಾವಾಗಲೂ ಫಾರಿನ್‌ಗೆ ಹೋಗುತ್ತಿರಲ್ಲ..? ಇಂಡಿಯಾದಲ್ಲಿ ಇರುವುದೇ ಕಡಿಮೆ ಆಗಿ ಬಿಟ್ಟಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Kannada actress Deepika Das enjoyed her London trip, see her Photos

ಲಂಡನ್ ಬೀದಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ನಟಿ

ಲಂಡನ್ ಬೀದಿಯಲ್ಲಿ ಸುತ್ತುತ್ತಿರುವ ವೇಳೆ ದೀಪಿಕಾ ದಾಸ್ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದನ್ನು ನೋಡಿದ ದೀಪಿಕಾ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಹಾಗೆಯೇ ಲೈಕ್, ಕಾಮೆಂಟ್‌ಗಳನ್ನ ಮಾಡಿ ದೀಪಿಕಾ ಸೌಂದರ್ಯವನ್ನು ಹಾಡಿ ಹೊಗಳುತ್ತಾ ಇದ್ದಾರೆ. ನಟಿ ಶೆರ್ಲಾಕ್ ಹೋಮ್ಸ್ ಮ್ಯೂಸಿಯಂಗೆ ತೆರಳಿ ಅಲ್ಲಿ ಕೂಡ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಹಳ ಖುಷಿ ಪಟ್ಟಿದ್ದಾರೆ.

ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ

ನಾಗಿಣಿ ಧಾರಾವಾಹಿಯ ಮೂಲಕ ದೀಪಿಕಾ ದಾಸ್ ಕಿರುತೆರೆಯಲ್ಲಿ ಬಹಳ ಖ್ಯಾತಿ ಪಡೆದಿದ್ದರು. ಧಾರಾವಾಹಿ ಬಳಿಕ ಬಿಗ್ ಬಾಸ್ ಮನೆಗೆ ತೆರಳಿದ್ದರು. ಅಲ್ಲಿ ಕೂಡ ಜನರಿಗೆ ಮೆಚ್ಚುಗೆ ಆಗುವ ಹಾಗೆ ಆಟವಾಡಿದ್ದರು. ಇಲ್ಲಿ ಶೈನ್ ಶೆಟ್ಟಿ ಜೊತೆ ಇವರ ಹೆಸರು ತಗಲಾಕಿಕೊಂಡಿತ್ತು. ಸದ್ಯ ಬಹಳ ಜನರಿಗೆ ದೀಪಿಕಾ ದಾಸ್ ಈಗ ಎನು ಮಾಡುತ್ತಾ ಇದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಉತ್ತರ ಅವರ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತಿದೆ.

More from Filmibeat

English summary
Actress Deepika Das enjoyed her London trip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X