Deepika Das:ದೀಪಿಕಾ ದಾಸ್ ಮದುವೆ ಫೋಟೊ ವೈರಲ್ ? ನೆಟ್ಟಿಗರು ಶಾಕ್ ಆಗಿದ್ದೇಕೆ?
'ನಾಗಿಣಿ' ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ಚೆಲುವೆ. ಬಿಗ್ ಬಾಸ್ ಮೂಲಕ ಎಲ್ಲರ ಮನಸ್ಸು ಕದ್ದ ಚೋರಿ. ಅದು ಬೇರೆ ಯಾರೂ ಅಲ್ಲ ದೀಪಿಕಾ ದಾಸ್. ಬಿಗ್ ಬಾಸ್‌ಗೆ ಹೋದ ಬಳಿಕ ದೀಪಿಕಾ ಎಲ್ಲೂ ಅಷ್ಟಾಗಿ ಕಾಣಿಸುತ್ತ ಇರಲಿಲ್ಲ. ಧಾರಾವಾಹಿಯಲ್ಲಿ ಕೂಡ ನಟನೆ ಮಾಡುತ್ತಿಲ್ಲ. ಸಿನಿಮಾದಲ್ಲಿ ನಟಿಸಲು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇನ್ನೂ ದೀಪಿಕಾ ವಿದೇಶಗಳಿಗೆ ತೆರಳಿ ಅಲ್ಲಿನ ಪ್ರಕೃತಿಯ ರಮಣೀಯ ದೃಶ್ಯವನ್ನು ಸವಿಯುತ್ತಿದ್ದಾರೆ.
ಹಾಗೆಯೇ ಟ್ರಕ್ಕಿಂಗ್‌ಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ದೀಪಿಕಾ ದಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಹೌದು.. ಅದು ಬೇರೆ ಏನು ಅಲ್ಲ. ದೀಪಿಕಾ ದಾಸ್ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದೀಪಿಕಾ ದಾಸ್ ತನ್ನ ಮದುವೆಯ ಬಗ್ಗೆ ಎಲ್ಲಿಯೂ ಕೂಡ ಪ್ರಸ್ತಾಪ ಮಾಡಿಲ್ಲ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿದಾಡುತ್ತಿದ್ದು, ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಬೀಚ್ ಸೈಡ್ ವೆಡ್ಡಿಂಗ್ ಫೋಟೋ ಶೇರ್ ಮಾಡಿ ಕೊಂಡಿದ್ದು, ಇದರಿಂದ ಕೆಲವರಿಗೆ ಶಾಕ್ ಆಗಿ ಇದ್ದರೂ ಬಹುತೇಕ ಜನರಿಗೆ ಖುಷಿಯಾಗಿದೆ.

ಇನ್ನೂ ಕೆಲವರು ನಿಜವಾಗಿಯೂ ದೀಪಿಕಾ ದಾಸ್ ಮದುವೆ ಆಗಿದ್ದಾರಾ? ಅಥವಾ ಇದು ಸುಳ್ಳು ಸುದ್ದಿಯಾ? ಯಾವುದಾದರೂ ಜಾಹೀರಾತಿಗೆ ಈ ರೀತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರಾ? ಎನ್ನುವುದು ಎಲ್ಲರಿಗೂ ಮೂಡಿರುವ ಪ್ರಶ್ನೆ. ಆದರೆ ದೀಪಿಕಾ ದಾಸ್ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಅದರ ಕೆಳಗೆ ಮಿಸ್ಟರ್ & ಮಿಸಸ್ ಡಿ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕನ್ಫ್ಯೂಸ್ ಆಗಿದ್ದಾರೆ. ಹಾಗೆಯೇ ಮದುವೆ ಆಯಿತಾ ಎಂದು ಅನೇಕ ಜನ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಮದುಮಗಳ ಉಡುಗೆಯಲ್ಲಿ ದೀಪಿಕಾ
ಸದ್ಯಕ್ಕೆ ದೀಪಿಕಾ ದಾಸ್ ಮದುವೆ ಗೆಟಪ್‌ನಲ್ಲಿ ಇರೋದ್ಯಾಕೆ ಅನ್ನೋದಕ್ಕೆ ಉತ್ತರ ಕೊಟ್ಟಿಲ್ಲ. ಆದರೆ, ಅಭಿಮಾನಿಗಳು ಇದೇನಿದು ದೀಪಿಕಾ ದಾಸ್ ಸದ್ದಿಲ್ಲದೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರಾ ಹೇಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ . ಇನ್ನೂ ಮದುಮಗಳಾಗಿ ಕಾಣಿಸಿಕೊಂಡ ನಟಿಯೂ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆಯನ್ನು ತೊಟ್ಟಿದ್ದು, ಈ ಸೀರೆಯಲ್ಲಿ ದೀಪಿಕಾ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.
ಸದ್ದಿಲ್ಲದೆ ಮದುವೆ ಆದ ನಟಿ
ಆಕರ್ಷಕವಾದ ವರಮಾಲೆ ಧರಿಸಿ ಸುಂದರವಾಗಿ ವಧುವಾಗಿ ಕಂಗೊಳಿಸಿದ್ದಾರೆ. ವರನ ಕೈ ಹಿಡಿದುಕೊಂಡು ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೆಯೇ ದೀಪಿಕಾಗೆ ವರ ಅಕ್ಷತೆ ಹಾಕುವುದು ಕ್ಯಾಮರಾದ ಕಣ್ಣಿಗೆ ಬಹಳ ಸುಂದರವಾಗಿ ಕಾಣ ಸಿಕ್ಕಿದೆ. ಸದ್ಯ ಫೋಟೋಗಳನ್ನು ಮಾತ್ರ ನಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ, ವರ ಯಾರು ಏನು? ಎತ್ತ? ಎಂಬುವುದನ್ನು ಇನ್ನಷ್ಟೇ ರಿವಿಲ್ ಮಾಡಬೇಕಾಗಿದೆ. ದೀಪಿಕಾ ಲುಕ್‌ಗೆ ಅನೇಕ ಜನ ಫಿದಾ ಆಗಿದ್ದಾರೆ. ಬೀಚ್ ಸೈಡ್ ಅಲ್ಲಿ ಮದುವೆ ಮಂಟಪವನ್ನು ಹಾಕಿ ಅಲ್ಲಿ ಮದುವೆ ಮಾಡಿಕೊಂಡಿದ್ದಾರಾ? ಇಲ್ಲ ಇದು ಜಾಹೀರಾತಿಗಾ ಅಂತ ತಲೆ ಕೆಡಿಸಿಕೊಂಡಿದ್ದಾರೆ.
ಅದ್ಧೂರಿಯಾಗಿ ನಡೆದ ಮದುವೆ
ಬೀಚ್ ವೆಡ್ಡಿಂಗ್, ಡೆಕೊರೇಷನ್ಸ್ ಸೇರಿದಂತೆ ಉಳಿದೆಲ್ಲ ಸಿದ್ಧತೆಗಳು ಅದ್ಧೂರಿಯಾಗಿವೆ. ಫೋಟೋಗಳು ಕೂಡ ಬಹಳ ಕಲರ್‌ಫುಲ್ ಆಗಿ ಮೂಡಿ ಬಂದಿದೆ. ವರನ ಕೈ ಹಿಡಿದುಕೊಂಡು ದೀಪಿಕಾ ದಾಸ್ ಬಹಳ ಖುಷಿಯಿಂದ ನಡೆದುಕೊಂಡು ಬರುವ ದೃಶ್ಯ ಕೂಡ ಸೆರೆ ಆಗಿದ್ದು, ಬಹುತೇಕ ಜನರಿಗೆ ದೀಪಿಕಾ ದಾಸ್ ಲುಕ್ ಬಹಳ ಸುಂದರವಾಗಿ ಕಾಣಿಸುತ್ತಿದೆ. ದೀಪಿಕಾ ಉಡುಗೆ ತೊಡುಗೆ ಸಾಂಪ್ರದಾಯಿಕವಾಗಿ ಇದ್ದು ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.


Click it and Unblock the Notifications











