ತೆಲುಗು ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಈ ಕನ್ನಡತಿ ಯಾರು? ಸೀರಿಯಲ್ ಯಾವುದು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ಅಭಿನಯಿಸುತ್ತಿದ್ದಾರೆ ನಟಿ ದೀಪಿಕಾ. ಇದೀಗ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಮೂಡಿಸುತ್ತಿದ್ದಾರೆ.

ಹೌದು, ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಹಂಸಗೀತಂ' ಧಾರಾವಾಹಿಯಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ ದೀಪಿಕಾ. ಅಂದ ಹಾಗೇ 'ಹಂಸಗೀತಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದವರು ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಆಯ್ಕೆಯಾಗಿದ್ದೇ ಕನ್ನಡತಿ ದೀಪಿಕಾ.

Kannada actress Deepika started the second innings with Hamsageetham Telugu serial

ದೀಪಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದ ತೆಲುಗು ಧಾರಾವಾಹಿ 'ಇಂಟಿಕಿ ದೀಪಂ ಇಲ್ಲಾಲು' ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. ಇದೀಗ 'ಹಂಸಗೀತಂ' ಮೂಲಕ ಮತ್ತೆ ತೆಲುಗು ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ದೀಪಿಕಾ ಸಂತಸ ವ್ಯಕ್ತಪಡಿಸಿದ್ದಾರೆ. "ಮತ್ತೊಮ್ಮೆ ತೆಲುಗು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಮೊದಲ ಧಾರಾವಾಹಿಗೆ ತೆಲುಗು ಕಿರುತೆರೆ ವೀಕ್ಷಕರು ತೋರಿದ್ದ ಪ್ರೀತಿ, ಪ್ರೋತ್ಸಾಹವನ್ನು ಈ ಧಾರಾವಾಹಿಗೂ ನೀಡಿದ್ದಾರೆ. ಇದು ನನಗೆ ಖುಷಿಕೊಟ್ಟಿದೆ" ಎಂದು ಫಿಲ್ಮಿಬೀಟ್ ಜೊತೆಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ ದೀಪಿಕಾ.

"ಹಂಸಗೀತಂ ಧಾರಾವಾಹಿಯ ತಂಡವೂ ಕೂಡಾ ಅಷ್ಟೇ, ತುಂಬಾ ಚೆನ್ನಾಗಿದೆ. ಅಂದ ಹಾಗೇ ನಮ್ಮ 'ಇಂಟಿಕಿ ದೀಪಂ ಇಲ್ಲಾಲು' ತೆಲುಗು ಧಾರಾವಾಹಿಯು 800 ನೇ ಸಂಚಿಕೆಗೆ ಮುಕ್ತಾಯಗೊಂಡಿತ್ತು. ಆಶ್ಚರ್ಯಕರ ಸಂಗತಿಯೆಂದರೆ 'ಹಂಸಗೀತಂ' ಧಾರಾವಾಹಿಗೆ ನಾನು ಎಂಟ್ರಿ ಕೊಟ್ಟಿದ್ದು ಕೂಡಾ 800 ಸಂಚಿಕೆಗೆ ತುಂಬಾ ಖುಷಿಯಾಗ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ದೀಪಿಕಾ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ನಾಯಕಿ ಧನ್ಯಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ದೀಪಿಕಾ ಬರೋಬ್ಬರಿ ಐದು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರನ್ನು ಸೆಳೆದಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಆರತಿ ಪಾತ್ರಕ್ಕೆ ಜೀವ ತುಂಬಿದರು.

Kannada actress Deepika started the second innings with Hamsageetham Telugu serial

ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿ ಆಗಿ ನಟಿಸುತ್ತಿರುವ ಈಕೆ ಜಿಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಹಂಸಗೀತಂ'ನಲ್ಲಿ ನಾಯಕಿಯಾಗಿ ಕಮಾಲ್ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆ ಎರಡನ್ನೂ ಏಕಕಾಲಕ್ಕೆ ನಿಭಾಯಿಸಿಕೊಂಡು ಸಾಗುತ್ತಿರುವ ದೀಪಿಕಾ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಾಗಿದೆ.

'ಚಿಟ್ಟೆ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈಕೆ 'ನನ್ ಮಗಳೇ ಹಿರೋಯಿನ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ತೆಲುಗಿನ 'ಇಟ್ಲು' ಸಿನಿಮಾದಲ್ಲಿಯೂ ಬಣ್ಣ ಹಚ್ಚಲಿದ್ದಾರೆ ಕನ್ನಡತಿ ದೀಪಿಕಾ.

More from Filmibeat

English summary
Kannada actress Deepika started the second innings with Hamsageetham Telugu serial:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X