ನೆಗೆಟಿವ್ ರೋಲ್ ಮಾಡಲ್ಲ ಎಂದು ಹಠ ಹಿಡಿದಿದ್ದೆ.. ಅದ್ರಿಂದ್ಲೇ ಅವಕಾಶ ಸಿಗ್ತಿದೆ"-ದಿವ್ಯಶ್ರೀ ನಾಯಕ್

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕಿ ರಾಗಿಣಿ ಚಿಕ್ಕಮ್ಮ ಶಾಂಭವಿಯಾಗಿ ನಟಿಸುತ್ತಿರುವ ದಿವ್ಯಶ್ರೀ ನಾಯಕ್ ಸುಳ್ಯ ಅದ್ಭುತ ನಟನೆಯ ಮೂಲಕ ಕಿರುತೆರೆಯಲ್ಲಿ ನಟನಾ ಛಾಪು ಮೂಡಿಸುತ್ತಿರುವ ಬೆಡಗಿ. ಟಿ.ಎನ್. ಸೀತಾರಾಮ್ ನಿರ್ದೇಶನದ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ವೈ ಜಯಂತಿಯಾಗಿ ಅಭಿನಯಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ದಿವ್ಯಶ್ರೀ ಎರಡನೇ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡರು.

ಅಸಲಿಗೆ ಖಳನಾಯಕಿ ಶಾಂಭವಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ದಿವ್ಯಶ್ರೀಗೆ ಶಾಂಭವಿ ಪಾತ್ರ ಎನ್ನುವುದು ನೆಗೆಟಿವ್ ಛಾಯೆ ಹೊಂದಿರುವಂತದ್ದು ಎಂಬುದು ಕೊನೆಯ ಕ್ಷಣದವರೆಗೂ ತಿಳಿದಿರಲಿಲ್ಲ. "ನಮ್ಮ ಧಾರಾವಾಹಿಯಲ್ಲಿ ಇಪತ್ತಕ್ಕೂ ಅಧಿಕ ಜನ ಕಲಾವಿದರು ಇದ್ದಾರೆ. ಹಾಗಾಗಿ ಆವಾಗವಾಗ ಪಾತ್ರಗಳು ಅದಲು ಬದಲುಗಳಾಗುತ್ತಿದ್ದವು. ಲುಕ್ ಟೆಸ್ಟ್ ಗಳು ಕೂಡಾ ಆಗಾಗ ನಡೆಯುತ್ತಿತ್ತು. ಯಾಕೆಂದರೆ ಧಾರಾವಾಹಿ ತಂಡಕ್ಕೆ ಪರ್ಫೆಕ್ಟ್ ಆಗಿ ಪಾತ್ರಗಳ ಆಯ್ಕೆ ಮಾಡಬೇಕೆಂದಿತ್ತು" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳುತ್ತಾರೆ ದಿವ್ಯಶ್ರೀ ನಾಯಕ್.

kannada-actress-divyashree-nayak

"ಆರಂಭದಲ್ಲಿ ನನಗೆ ಪಾಸಿಟಿವ್ ಪಾತ್ರ ಅಂಥ ಹೇಳಿದ್ದರು. ನೀವು ನಂಬಲ್ಲ, ಶೂಟಿಂಗ್‌ನ ಮೊದಲ ದಿನವೇ ನನಗೆ ತಿಳಿದದ್ದು, ನಾನು ನೆಗೆಟಿವ್ ರೋಲ್ ಮಾಡುತ್ತಿದ್ದೇನೆ ಅಂಥ. ನಾನು ಪೂರ್ತಿ ಅಪ್ ಸೆಟ್ ಆಗಿದ್ದೆ. ಜೊತೆಗೆ ನೆಗೆಟಿವ್ ರೋಲ್ ಆದರೆ ನಾನು ಆ್ಯಕ್ಟ್ ಮಾಡುವುದಿಲ್ಲ. ನನಗೆ ಕಷ್ಟವಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದೆ" ಎನ್ನುತ್ತಾರೆ ದಿವ್ಯಶ್ರೀ ನಾಯಕ್.

"ಆರಂಭದಲ್ಲಿ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದ ಜಗನ್ ಅವರು ಬಂದು ಶಾಂಭವಿ ಸಂಪೂರ್ಣ ನೆಗೆಟಿವ್ ಅಲ್ಲ. ಇದು ತುಂಬಾ ಚೆಂದದ ಪಾತ್ರ. ನಿಮ್ಮಿಂದ ಶಾಂಭವಿ ಆಗಿ ನಟಿಸುವುದಕ್ಕೆ ಆಗುತ್ತದೆ‌. ಮಾಡಿ, ನಿಮಗೆ ಆ ಪಾತ್ರ ಸೂಟ್ ಆಗುತ್ತದೆ ಎಂದೇ ನಾವು ನಿಮ್ಮನ್ನ ಆಯ್ಕೆ ಮಾಡಿದ್ದು‌‌. ನಾವು ಇಷ್ಟು ಫಿಲ್ಟರ್ ಮಾಡಿ ಆಯ್ಕೆ ಮಾಡಿದ ಉದ್ದೇಶವೂ ಇದೇನೆ. ನಟಿಸಿ ಎಂದು ಪ್ರೇರೆಪಿಸಿದರು. ಹಾಗಾಗಿ ನಟಿಸಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ದಿವ್ಯಶ್ರೀ ನಾಯಕ್.

kannada-actress-divyashree-nayak

"ಅಂದ ಹಾಗೇ ಇದೀಗ ತಿಲಕ್ ಅವರು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರಂತೂ ಅದ್ಭುತ ನಿರ್ದೇಶಕ. ನಾನು ಈಗ ಖಳನಾಯಕಿಯಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಆ ಎಲ್ಲಾ ಕ್ರೆಡಿಟ್ ತಿಲಕ್ ಅವರಿಗೆ ಸಲ್ಲಬೇಕು. ಡೈಲಾಗ್ ಮೇಲೆ ಸಂಪೂರ್ಣ ಗಮನ ಹರಿಸಿ ನಟನೆ ಮಾಡಿದಾಗ ಟೇಕ್‌ಗಳನ್ನು ತುಂಬಾ ತೆಗೊಳ್ಳುತ್ತಿದ್ದೆ. ಆದರೂ, ತಿಲಕ್ ಸರ್ ಸಪೋರ್ಟ್ ಮಾಡುತ್ತಿದ್ದರು" ಎಂದು ಸಂತಸದಿಂದ ಹೇಳುತ್ತಾರೆ ದಿವ್ಯಶ್ರೀ ನಾಯಕ್.

ಕೊನೆಯದಾಗಿ "ಶಾಂಭವಿ ಆಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದರೆ ಅದರಲ್ಲಿ ನನ್ನ ಪ್ರಯತ್ನ ಕೂಡಾ ಇದೆ‌. ಸಮಯ ಕಳೆದಂತೆ ನಾನು ಶಾಂಭವಿ ಪಾತ್ರವನ್ನು ಎಂಜಾಯ್ ಮಾಡತೊಡಗಿದೆ. ಜನರ ಮನಸ್ಸಿನಲ್ಲಿಯೂ ನೆಗೆಟಿವ್ ಪಾತ್ರಗಳೇ ಅಚ್ಚೊತ್ತಿಬಿಡುತ್ತದೆ ಎಂದು ಗೊತ್ತಾಗಿಬಿಟ್ಟಿತ್ತು. ಜೊತೆಗೆ ನೆಗೆಟಿವ್ ರೋಲ್‌ನಲ್ಲಿ ನಟನೆಗೆ ಅವಕಾಶ ಜಾಸ್ತಿ ಎಂಬುದು ಕೂಡಾ ಅರಿವಾಯಿತು. ಜನರಿಂದ, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ, ಬರುತ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ವ್ಯಕ್ತಪಡಿಸುತ್ತಾರೆ ದಿವ್ಯಶ್ರೀ ನಾಯಕ್.

More from Filmibeat

English summary
Divyasree Nayak said that she got popularity due to his negative role
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X