Ganavi Laxman: ಕೆಂಪು ಲೆಹೆಂಗಾದಲ್ಲಿ ಫ್ಯಾನ್ಸ್ ನಿದ್ದೆ ಕದ್ದ 'ಮಗಳು ಜಾನಕಿ'.. ಗಾನವಿ ಫೋಟೋಗಳು ವೈರಲ್

By ಪೂರ್ವ

'ಮಗಳು ಜಾನಕಿ' ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ನಟಿ ಗಾನವಿ ಲಕ್ಷ್ಮಣ್. ಇತ್ತೀಚೆಗೆ ಸಿನಿಮಾಗಳಲ್ಲೂ ಮಿಂಚುತ್ತಿರುವ ನಟಿ ತನ್ನ ಪ್ರತಿಭೆ ಮೂಲಕ ಜನರ ಮನಗೆದ್ದಿದ್ದಾರೆ. ಅದರಲ್ಲೂ ಶಿವಣ್ಣನ ಜೊತೆ 'ವೇದ' ಸಿನಿಮಾದಲ್ಲಿ ನಟಿಸಿದ ಗಾನವಿ ಲಕ್ಷ್ಮಣ್‌ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಗಾನವಿ ಲಕ್ಷ್ಮಣ್ ಈಗ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಹೌದು, ಇದೀಗ ಗಾನವಿ ಲಕ್ಷ್ಮಣ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೋಟೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಬಹಳ ಖುಷಿ ಪಟ್ಟು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Kannada actress Ganavi Laxman new red lehenga photo shoot went viral

ಕೆಂಪು ಲೆಹೆಂಗಾದಲ್ಲಿ ಮಿಂಚಿದ ಬ್ಯೂಟಿ

ದೀಪಾವಳಿ ಹಬ್ಬದ ಈ ಸಂಭ್ರಮದಲ್ಲಿ ವಿಶೇಷವಾಗಿ ಗಾನವಿ ಲಕ್ಷ್ಮಣ್ ಫೋಟೊ ಶೂಟ್ ಮಾಡಿಸಿದ್ದರು. ಹಣತೆ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಇನ್ನೊಂದು ಪೋಟೋದಲ್ಲಿ ಹೂವು ಹಿಡಿದು ನಾನಾ ಭಂಗಿಯಲ್ಲಿ ಕ್ಯಾಮರಾ ಮುಂದೆ ಬಂದಿದ್ದರು. ಈ ಫೋಟೊಗಳಿಗೆ ಕನ್ನಡ ಸಿನಿರಸಿಕರು ಫಿದಾ ಆಗಿದ್ದಾರೆ.

ಗಾನವಿ ಸಿಂಪಲ್ ಫೋಟೊಶೂಟ್

ನಟಿಯರು ಸಾಮಾನ್ಯವಾಗಿ ಮೇಕಪ್ ಇಲ್ಲದೆ ಮನೆಯಿಂದ ಹೊರ ಬರೋದು ತೀರಾ ವಿರಳ. ಅಂತದ್ರಲ್ಲಿ ಗಾನವಿ ಲಕ್ಷ್ಮಣ್ ಮೇಕಪ್ ಇಲ್ಲದೆ ಸಿಂಪಲ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡು ಇದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮಾತ್ರ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಲಂಗ-ದಾವಣಿ ಧರಿಸಿರೋ ಈ ಫೋಟೋಗಳಲ್ಲಿ ಮೇಕಪ್‌ ಇಲ್ವೇ ಇಲ್ಲ. ಎಲ್ಲೂ ಲೈಟಿಂಗ್ ಜಾದು ಕೂಡ ಇಲ್ಲ. ನಾಚ್ಯೂರಲ್ ಆಗಿಯೇ ಫೋಟೊಶೂಟ್ ನಡೆದಿದೆ.ಹಣೆಗೆ ಬೊಟ್ಟು ಇಟ್ಟು. ಸಿಂಪಲ್ ಆಗಿ ಸೀರೆಯುಟ್ಟು ಸಹಜ ಸುಂದರಿಯಂತೆ ಕಾಣಿಸುತ್ತಿದ್ದಾರೆ.

Kannada actress Ganavi Laxman new red lehenga photo shoot went viral

ನೆಟ್ಟಿಗರ ಕಮೆಂಟ್ ಏನು?

ಗಾನವಿ ಲಕ್ಷ್ಮಣ್ ಫೋಟೋಗಳನ್ನು ನೋಡಿ ನೆಟ್ಟಿಗರು ಲೈಕ್ ಕಾಮೆಂಟ್‌ಗಳನ್ನೂ ಮಾಡಿ ಖುಷಿ ಪಡುತ್ತಿದ್ದಾರೆ. "ಲಕ್ಷಣವಾದ ಭಾರತೀಯ ಹೆಣ್ಣು".. "ಭಾವನೆ ಸೂಸುವ ಕಣ್ಣುಗಳು", "ಸುಂದರ ಚಿತ್ರಗಳು ಗಾನವಿ" ಅಂತೆಲ್ಲ ಬಣ್ಣಿಸುತ್ತಿದ್ದಾರೆ. ಇನ್ನು ಕೆಲವರು "ಯು ಆರ್ ಸೋ ಬ್ಯೂಟಿಫುಲ್" ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಗಾನವಿ ಲಕ್ಷ್ಮಣ್‌ಗೆ ಇದೀಗ ಕನ್ನಡ ಅಲ್ಲದೆ ತೆಲುಗಿನಲ್ಲೂ ಕೂಡ ಆಫರ್‌ಗಳ ಬರುತ್ತಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

'ಮಗಳು ಜಾನಕಿ' ಮೂಲಕ ಖ್ಯಾತಿ ಪಡೆದ ನಟಿ

'ಮಗಳು ಜಾನಕಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಯಾದ ನಟಿ ಆ ಬಳಿಕ ಸಿನಿಮಾಗಳಲ್ಲಿ ಅವಕಾಶಗಳು ಕೈ ಬೀಸಿ ಕರೆದವು . ರಿಷಬ್ ಶೆಟ್ಟಿ ನಟನೆಯ 'ಹೀರೋ' ಸೇರಿದಂತೆ 'ಭಾವಚಿತ್ರ' ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶಿವಣ್ಣನೊಂದಿಗೆ ನಟಿಸಿದ 'ವೇದಾ' ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ತೆಲುಗಿನ ಸಿನಿಮಾದ 'ರುದ್ರಂಗಿ' ಸಿನಿಮಾದಲ್ಲೂ ಗಾನವಿ ನಟಿಸಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾದ ಗಾನವಿ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Magalu Janaki and Vedha fame kannada actress Ganavi Laxman photo shoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X