Gautami Gowda: 'ಭಾಗ್ಯಲಕ್ಷ್ಮಿ'ಯಿಂದ ಗೌತಮಿ ಗೌಡ ಬಂದ ಗುಟ್ಟು ರಟ್ಟು.. ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟ ನಟಿ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕ ತಾಂಡವ್ ಪ್ರೇಯಸಿ, ಖಳನಾಯಕಿ ಆಗಿ ಅಭಿನಯಿಸಿದ್ದ ಗೌತಮಿ ಗೌಡ ಮುಂದೆ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದ್ದರು. ಆದರೆ, ಗೌತಮಿ ಗೌಡ ಅವರು ಅದ್ಯಾಕೆ ಶ್ರೇಷ್ಠಾ ಪಾತ್ರಕ್ಕೆ ವಿದಾಯ ಹೇಳಿದರು? ಅದ್ಯಾಕೆ ಇದ್ದಕ್ಕಿದ್ದಂತೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯಿಂದ ಹೊರಬಂದರು ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ದೊರಕಿದೆ.

ಕಿರುತೆರೆ ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಹೌದು, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಈ ಜೋಡಿ ಇದೀಗ ಪೋಷಕರಾಗಿ ಬಡ್ತಿ ಪಡೆದಿದ್ದು ಮುದ್ದು ಕಂದನ ನಿರೀಕ್ಷೆಯಲ್ಲಿದ್ದಾರೆ. ತಾವು ಪೋಷಕರಾಗುತ್ತಿರುವ ಸಂತಸದ ವಿಚಾರವನ್ನು ಸ್ವತಃ ಗೌತಮಿ ಗೌಡ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Kannada actress Gautami Gowda and George Christy are a couple who have been promoted as parents

ತಮ್ಮ ಪ್ರೆಗ್ನೆನ್ಸಿ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ "ನಮ್ಮ ಸಂತೋಷವನ್ನು ಮಗದಷ್ಟು ಇಮ್ಮಡಿಗೊಳಿಸಲು ಪುಟಾಣಿ ಬರುತ್ತಿದೆ" ಎಂದು ಆಕೆ ಬರೆದುಕೊಂಡಿದ್ದಾರೆ. ಇನ್ನು ಗೌತಮಿ ಅವರ ಈ ಫೋಸ್ಟ್ ಗೆ ಕಿರುತೆರೆ ಕಲಾವಿದರುಗಳ ಜೊತೆಗೆ ನೆಟ್ಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಅಂದ ಹಾಗೇ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್ ಅಂತೆ! ಕಾಮನ್ ಪ್ರೆಂಡ್ ಮೂಲಕ ಇವರಿಬ್ಬರ ಪರಿಚಯವಾಗಿದ್ದು ಆರಂಭದಲ್ಲಿ ಇವರಿಬ್ಬರೂ ಸ್ನೇಹಿತರಾಗಿದ್ದರು. ನಂತರ ಆ ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮುಂದೆ ಮನೆಯವರನ್ನು ಒಪ್ಪಿಸಿ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳ ಮೂಲಕ ಇವರು ಹೊಸ ಜೀವನ ಶುರು ಮಾಡಿದ್ದರು.

ಇನ್ನು ಗೌತಮಿ ಗೌಡ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚಿ.ಸೌ.ಸಾವಿತ್ರಿ'ಯಲ್ಲಿ ನಾಯಕಿ ಸಾವಿತ್ರಿಯಾಗಿ ನಟಿಸುವ ಮೂಲಕ ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡಾಕೆ. ತದ ನಂತರ 'ಅಮ್ಮ ನಿನಗಾಗಿ', 'ತಾಯವ್ವ', 'ಚೆಲುವಿ', 'ಚಲಿಸುವ ಮೋಡಗಳು' ಇದೀಗ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಟಿಸಿದ್ದರು.

Kannada actress Gautami Gowda and George Christy are a couple who have been promoted as parents

ಇದರ ಜೊತೆಗೆ 'ಮಳೆ', 'ಮುತ್ತಿನ ಪಲ್ಲಕ್ಕಿ', 'ದಿ ಪ್ಲಾನ್', 'ಮಾತುಕತೆ', 'ಕೋಟಿಗೊಬ್ಬ 2', 'ಜೆಸ್ಸಿ', 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗಳಲ್ಲಿ ಅಭಿನಯಿಸಿರುವ ಗೌತಮಿ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು.

More from Filmibeat

English summary
Kannada actress Gautami Gowda and George Christy are a couple who have been promoted as parents
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X