For Quick Alerts
ALLOW NOTIFICATIONS  
For Daily Alerts

ಸ್ಯಾಂಡಲ್ ವುಡ್ ಸಾಧಕಿಯರಿಗೆ ಸ್ಟಾರ್ ಸುವರ್ಣದ ಗೌರವ ಸ್ಟಾರ್ ಮಹಾನಟಿ

|

ಕನ್ನಡದ ಮೇರು ನಟಿಯರ ಸಾಧನೆಯನ್ನು ಸನ್ಮಾನಿಸುವ ವೇದಿಕೆ ಸಜ್ಜಾಗಿತ್ತು, ಬೆಂಗಳೂರಿನ ಡೊಂಕ ಹಳ್ಳ ಮೈದಾನದಲ್ಲಿ. ಜಯಂತಿ, ಭಾರತಿ, ತಾರಾ, ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಹರಿಪ್ರಿಯಾ, ರಾಗಿಣಿ ದ್ವಿವೇದಿ ಮತ್ತು ರಚಿತಾ ರಾಮ್ ಅವರಿಗೆ ಸ್ಟಾರ್ ಸುವರ್ಣ ವಾಹಿನಿ 'ಮಹಾನಟಿ' ಪುರಸ್ಕಾರ ನೀಡಿ ಗೌರವಿಸಿದೆ.

ಈ ಸುಂದರ ಸಂಜೆಗೆ ಕರ್ನಾಟಕ ಚಲನಚಿತ್ರೋದ್ಯಮದ ಖ್ಯಾತನಾಮರು ಸಾಕ್ಷಿಯಾಗಿದ್ದರು. 5 ದಶಕಗಳ ಕಾಲ ಬೆಳ್ಳಿ ಪರದೆಮೇಲೆ ಅಭಿನಯ ಶಾರದೆಯಾಗಿ ಅಲಂಕೃತಗೊಂಡು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಮಹಾನಟಿ ಜಯಂತಿಯವರದ್ದು. ಹಿರಿಯ ನಟ ರಾಜೇಶ್ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಜಯಂತಿಯವರಿಗೆ ಮಹಾನಟಿ ಪುರಸ್ಕಾರವನ್ನಿತ್ತು ಸನ್ಮಾನಿಸಿದರು.

Kannada actress got Mahanati award from star suvarna

ನಟಿ ಕೃಷಿ ತಾಪಂಡ, ಜಯಂತಿಯವರ ಪ್ರಖ್ಯಾತ ಗೀತೆಗಳಿಗೆ ಹೆಜ್ಜೆ ಹಾಕಿ ಅವರನ್ನು ಗೌರವಿಸಿದ್ದಾರೆ. ಮತ್ತೊಬ್ಬ ಮೇರುನಟಿ ಭಾರತಿಯವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸಿ ಅವರಿಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಸನ್ಮಾನಿಸಿದರು.

ದಶಕದ ಬಳಿಕ ಧಾರಾವಾಹಿ ಪ್ರಪಂಚದಲ್ಲಿ ರಾಘವೇಂದ್ರ ರಾಜ್ ಕುಮಾರ್

ಮಹಾನಟಿ ಕಾರ್ಯಕ್ರಮದಲ್ಲಿ ಶ್ರೇಷ್ಠ ಅಭಿನೇತ್ರಿ ತಾರಾ ಅವರನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಟಿ ತಾರಾ ಚಿತ್ರರಂಗದ ನಡವಳಿಕೆ ಕುರಿತಾಗಿ ಮಾತನಾಡಿದ್ದಾರೆ. ಚಿತ್ರರಂಗದ ಪಯಣದಲ್ಲಿ ನಾಯಕನೊಬ್ಬನ ಮೈಲಿಗಲ್ಲುಗಳನ್ನು ಸಂಭ್ರಮಿಸುವ ಉದ್ಯಮ, ಆ ಸಾಧನೆಯಲ್ಲಿ ನಾಯಕಿಯರ ಪಾತ್ರವೂ ಇದೆ ಎಂಬುದನ್ನು ಬಹಳ ಜಾಣತನದಿಂದ ಮರೆತಿದೆ ಎಂದರು. ಮಹಾನಟಿ ಪುರಸ್ಕಾರ ಸಂದಿರುವುದು ಮಹಿಳೆಯಾಗಿ, ಕಲಾವಿದೆಯಾಗಿ ಬಹಳ ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.

Kannada actress got Mahanati award from star suvarna

ಸಂಭಾವನೆಯಲ್ಲಿ, ಸತ್ಕಾರದಲ್ಲಿ ಮಹಿಳೆಯರನ್ನು ಕಡೆಗಣಿಸಿ, ಅವರ ಅಂದಚಂದವನ್ನು ಮಾತ್ರ ಬಂಡವಾಳ ಮಾಡಿಕೊಂಡು ಚಿತ್ರರಂಗ ವಿಜೃಂಭಿಸುತ್ತದೆ, ನಮ್ಮ ವೃತ್ತಿಜೀವನದಲ್ಲಿ , ಚಿತ್ರಗಳಲ್ಲಿ, ಕಥೆಗಳಲ್ಲಿ ಹೆಣ್ಣನ್ನು ಗೌರವಿಸುವ ಕೆಲಸವಾಗಬೇಕು, ಇದನ್ನು ಮಾಡುತ್ತಿರುವ ವಾಹಿನಿಯ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

ನಟಿ ಪ್ರಿಯಾಂಕ ಉಪೇಂದ್ರ ಅವರನ್ನು ಸನ್ಮಾನಿಸಿ ಮಾತಾನಾಡಿದ ನಿರ್ದೇಶಕ ನಾಗಾಭರಣ, ಕಲಾವಿದೆಯರನ್ನು, ಅವರ ಸಾಧನೆಯನ್ನು ಪ್ರಶಂಸಿಸುವ ಕಾರ್ಯಕ್ರಮ ಎಂದೋ ಆಗಬೇಕಿತ್ತು , ಮಹಾನಟಿಯರ ಸಾಧನೆಯನ್ನು ಗುರುತಿಸಿ, ಗೌರವಿಸಿ, ಸ್ಫೂರ್ತಿದಾಯಿಯಾಗುವ ಹೆಮ್ಮೆಯ ಕಾರ್ಯಕ್ರಮ ನೀಡಿರುವ ಸ್ಟಾರ್ ಸುವರ್ಣದ ಈ ನಿಲುವಿಗೆ ಹ್ಯಾಟ್ಸ್ ಆಫ್ ಎಂದರು. ಪ್ರಿಯಾಂಕ ಉಪೇಂದ್ರ ಅವರ ಈ ಸಾಧನೆಗೆ ವೇದಿಕೆಯಲ್ಲಿ ಸಾಕ್ಷಿಯಾಗಿದ್ದರು ಅವರ ತಾಯಿ, ಅತ್ತೆ ಮತ್ತು ಸ್ನೇಹಿತೆ ಪಲ್ಲವಿ ಗುರುಕಿರಣ್.

Kannada actress got Mahanati award from star suvarna

ಹಿರಿಯ ನಟ ದ್ವಾರಕೀಶ್ ನಟಿ ಪ್ರಿಯಾಮಣಿಗೆ ಮಹಾನಟಿ ಪ್ರಶಸ್ತಿ ನೀಡಿ, ಪ್ರಿಯಾ ನಮ್ಮ ಮನೆ ಮಗಳು ಎಂದು ಅಭಿಮಾನ ವ್ಯಕ್ತಪಡಿಸಿದರು. ನಟಿಯರಾದ ಹರಿಪ್ರಿಯಾ, ರಾಗಿಣಿ ಮತ್ತು ರಚಿತಾ ರಾಮ್ ತಮ್ಮ ಸಾಧನೆಯ ಹಾದಿಯಲ್ಲಿ ಬಂದ ಸವಾಲುಗಳು ಮತ್ತು ತಮಗೆ ಪ್ರೀತಿ ತೋರಿಸಿದ ಕುಟುಂಬ ಮತ್ತು ಅಭಿಮಾನಿಗಳನ್ನು ನೆನೆದು ಭಾವುಕರಾದರು. ನಟ ಶ್ರೀಮುರುಳಿ, ಡಿಐಜಿ ಡಿ.ರೂಪ ಮತ್ತು ನಿರ್ದೇಶಕರಾದ ಚೇತನ್ ಮತ್ತು ಸಂತು ಈ ಸಾಧಕಿಯರಿಗೆ ಮಹಾನಟಿ ಪ್ರಶಸ್ತಿ ನೀಡಿ ಗೌರವಿಸಿದರು.

ಕನಸು ಕಾಣುವ ಮುಗ್ಧ ಮನಸುಗಳ ಕಥೆ 'ನನ್ ಹೆಂಡ್ತಿ ಎಂಬಿಬಿಎಸ್'

ಸ್ಟಾರ್ ಸುವರ್ಣ ವಾಹಿನಿಯ ಸತ್ಯಂ ಶಿವಂ ಸುಂದರಂ, ಮರಳಿ ಬಂದಳು ಸೀತೆ, ನನ್ ಹೆಂಡ್ತಿ ಎಂಬಿಬಿಎಸ್, ಮುದ್ದುಲಕ್ಷ್ಮಿ, ಮೌನರಾಗ, ಅಮೃತವರ್ಷಿಣಿ, ಸರ್ವ ಮಂಗಳ ಮಾಂಗಲ್ಯೇ, ಬಯಸದೆ ಬಳಿ ಬಂದೆ ಧಾರವಾಹಿಯ ಕಲಾವಿದರು ಈ ಮಾಹಾನಟಿಯರ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ಗೌರವ ಸಮರ್ಪಿಸಿದ್ದಾರೆ. ಗಾಯಕ ರಘು ದೀಕ್ಷಿತ್ ಈ ಮಹಾನಟಿಯರಿಗೆ ತಮ್ಮ ಗಾಯನದ ಮೂಲಕ ನಮಿಸಿದ್ದಾರೆ.

Kannada actress got Mahanati award from star suvarna

ಮಹಾನಟಿ ಬರಿ ಮನೋರಂಜನೆಯ ಕಾರ್ಯಕ್ರಮವಾಗದೆ, ಚಿತ್ರರಂಗದಲ್ಲಿ ಅಗ್ರ ಸಾಧನೆಗೈದಿರುವ ಮಾಹಾನ್ ಕಲಾವಿದೆಯರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಏಪ್ರಿಲ್ 6ರಂದು ಸಂಜೆ 6.30ಕ್ಕೆ ವೀಕ್ಷಕರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಸ್ಟಾರ್ ಸುವರ್ಣ ವಾಹಿನಿ ಪ್ರಸಾರ ಮಾಡುತ್ತಿದೆ.

English summary
Kannada actress bharathi vishnuvardhan, jayanthi, rachita ram, haripriya, priyanka upendra, tara got Mahanati award from star suvarna. the episode will telicast on this weekend.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more