For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಸ್ಪರ್ಧಿ ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಹೀಗ್ಯಾಕೆ ಹೇಳಿದ್ರು.?

  |
  Bigg Boss Kannada 7 : Haripriya speaks about Bigg Boss Contestant Chaitra Kotoor| FILMIBEAT KANNADA

  ''ನಾನು ನಟಿ ಮತ್ತು ಬರಹಗಾರ್ತಿ'' ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಕೆ ಚೈತ್ರ ಕೋಟೂರ್. ಯಾರಪ್ಪಾ ಈ ಚೈತ್ರ ಕೋಟೂರು ಅಂತ ಹುಡುಕುತ್ತಾ ಹೋದಾಗ ಎಲ್ಲರ ಕಣ್ಣು ಬಿದ್ದದ್ದು 'ಸೂಜಿದಾರ' ಚಿತ್ರದ ಮೇಲೆ.

  'ಸೂಜಿದಾರ' ಚಿತ್ರದಲ್ಲಿ ಚೈತ್ರ ಕೋಟೂರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಚಿತ್ರದಲ್ಲಿ ನಟಿ ಹರಿಪ್ರಿಯಾ ಕೂಡ ಇದ್ದರು. 'ಸೂಜಿದಾರ' ಚಿತ್ರದಲ್ಲಿ ಹರಿಪ್ರಿಯಾ ಪಾತ್ರವನ್ನು ಡಮ್ಮಿ ಮಾಡಿ, ಚೈತ್ರ ಕೋಟೂರು ನಿರ್ವಹಿಸಿದ್ದ ರಾಜಿ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬ ಕಾರಣಕ್ಕೆ ಗಾಂಧಿನಗರದಲ್ಲಿ ದೊಡ್ಡ ವಿವಾದ ಆಗಿತ್ತು.

  ಇನ್ನೂ ಚೈತ್ರ ಕೋಟೂರು ಯಾವ ಪ್ರಚಾರ ಕಾರ್ಯದಲ್ಲೂ ಭಾಗಿಯಾಗಬಾರದು, ಪೋಸ್ಟರ್ ಗಳಲ್ಲೂ ಕಾಣಿಸಿಕೊಳ್ಳಬಾರದು ಅಂತ ಹರಿಪ್ರಿಯಾ ತಾಯಿ ಚಿತ್ರತಂಡಕ್ಕೆ ತಾಕೀತು ಮಾಡಿದ್ದರಂತೆ. ಇದರಿಂದ ಚೈತ್ರ ಕೋಟೂರು ಮಾನಸಿಕವಾಗಿ ನೊಂದಿದ್ದರಂತೆ.

  ಇಷ್ಟೆಲ್ಲಾ ಅಂತೆ-ಕಂತೆ, ವಿವಾದಗಳಾದ ಮೇಲೆ ಚೈತ್ರ ಕೋಟೂರು 'ಬಿಗ್ ಬಾಸ್' ಮನೆ ಸೇರಿದ್ದಾರೆ. ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಇದೀಗ ಏನಂದಿದ್ದಾರೆ ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಖುಷಿ ವಿಚಾರ.!

  ಖುಷಿ ವಿಚಾರ.!

  ''ವಿವಾದ ಮಾಡಿಕೊಂಡ ಕೂಡಲೆ ಎಲ್ಲರ ಕಣ್ಣಿಗೂ ಬೀಳ್ತೀವಿ, ಇದರಿಂದ ಪ್ಲಸ್ ಅಥವಾ ಮೈನಸ್ ಆಗಬಹುದು ಅಂತ ಎಷ್ಟೋ ಜನ ಪ್ರಯತ್ನ ಪಟ್ಟಿರುವುದನ್ನು ನೋಡಿದ್ದೀವಿ. ಇಷ್ಟು ವರ್ಷ ನಾನು ಗಳಿಸಿರುವ ಹೆಸರು ಇನ್ನೊಬ್ಬರಿಗೆ ಉಪಯೋಗ ಆಗುತ್ತಿದೆ ಅಂದಾಗ ಅದು ಖುಷಿ ವಿಚಾರವೇ. ನನ್ನಿಂದ ಇನ್ನೊಬ್ಬರಿಗೆ ಒಳ್ಳೆಯದ್ದು ಆಗುತ್ತಿದೆ ಅಂದ್ರೆ ಆಗಲಿ'' ಎಂದು ಚೈತ್ರ ಕೋಟೂರು ಬಗ್ಗೆ ಹರಿಪ್ರಿಯಾ ಹೇಳಿದ್ದಾರೆ.

  ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?

  ಕರ್ಮ ಬಗ್ಗೆ ಹರಿಪ್ರಿಯಾ ಮಾತು

  ಕರ್ಮ ಬಗ್ಗೆ ಹರಿಪ್ರಿಯಾ ಮಾತು

  ''ಆ ಹುಡುಗಿ (ಚೈತ್ರ ಕೋಟೂರು) ಎಷ್ಟು ಜನಕ್ಕೆ ಗೊತ್ತಿದ್ದಾರೆ.? ಕರ್ಮ.. ನಾವೇನು ಮಾಡ್ತೀವಿ, ಅದನ್ನ ಪಡೆದುಕೊಳ್ತೀವಿ ಅಷ್ಟೇ. ಒಳ್ಳೆಯವರಿಗೆ ಒಳ್ಳೆಯದಾಗುತ್ತೆ, ಕೆಟ್ಟವರಿಗೆ ಕೆಟ್ಟದಾಗುತ್ತೆ'' ಎಂದಿದ್ದಾರೆ ಹರಿಪ್ರಿಯಾ.

  ಸೂಜಿದಾರ ಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನಟಿ ಹರಿಪ್ರಿಯಾಸೂಜಿದಾರ ಚಿತ್ರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ನಟಿ ಹರಿಪ್ರಿಯಾ

  'ಬಿಗ್ ಬಾಸ್' ಮನೆಯಲ್ಲೂ ವಿವಾದ.!

  'ಬಿಗ್ ಬಾಸ್' ಮನೆಯಲ್ಲೂ ವಿವಾದ.!

  'ಸೂಜಿದಾರ' ಚಿತ್ರದ ಕುರಿತಾಗಿ ಹರಿಪ್ರಿಯಾ ಮತ್ತು ಅವರ ತಾಯಿ ಕಡೆ ಬೆಟ್ಟು ಮಾಡಿ ಚೈತ್ರ ಕೋಟೂರು ವಿವಾದಕ್ಕೀಡಾಗಿದ್ದರು. ಅದರಂತೆಯೇ, 'ಬಿಗ್ ಬಾಸ್' ಮನೆಯಲ್ಲೂ ಚೈತ್ರ ಕೋಟೂರು ಒಂದಲ್ಲಾ ಒಂದು ವಿಷಯಕ್ಕೆ ಸದ್ದು ಮಾಡುತ್ತಲೇ ಇದ್ದಾರೆ. ಮೊದಲು ಶೈನ್ ಶೆಟ್ಟಿ ಹಿಂದೆ ಬಿದ್ದು ಸುದ್ದಿ ಮಾಡಿದ ಚೈತ್ರ ನಂತರ ಒಂದು ಆಪಲ್ ಗಲಾಟೆಯ ಕೇಂದ್ರಬಿಂದುವಾಗಿದ್ದರು.

  'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!'ಬಿಗ್ ಬಾಸ್': ಇಡೀ ಸಂಚಿಕೆಯನ್ನು ಕೊಂದ ಒಂದು ಆಪಲ್.!

  'ಬಿಗ್ ಬಾಸ್' ಮನೆಗೆ ಹೋಗ್ತಾರಾ ಹರಿಪ್ರಿಯಾ.?

  'ಬಿಗ್ ಬಾಸ್' ಮನೆಗೆ ಹೋಗ್ತಾರಾ ಹರಿಪ್ರಿಯಾ.?

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಹರಿಪ್ರಿಯಾಗೆ ಮೊದಲ ಆವೃತ್ತಿಯಿಂದಲೂ ಕರೆ ಬರುತ್ತಲೇ ಇದೆ. ಆದರೆ, ಚಿತ್ರಗಳಲ್ಲಿ ಬಿಜಿಯಾಗಿರುವ ಕಾರಣ ಹರಿಪ್ರಿಯಾ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇನ್ನೂ 'ಬಿಗ್ ಬಾಸ್' ಶೋ ನೋಡಲು ಹರಿಪ್ರಿಯಾ ಇಷ್ಟವಂತೆ.

  English summary
  Kannada Actress Haripriya speaks about Bigg Boss Kannada 7 Contestant Chaitra Kotur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X