ಕವಿತಾ ಗೌಡ ದಿನಸಿ ಲೀಸ್ಟ್ ನೋಡಿ, ಇದಕ್ಕೆ ನಾವೂ ಮದುವೆ ಆಗಲ್ಲ ಅಂತಿದ್ದಾರೆ ಗಂಡು ಮಕ್ಕಳು!

By ಎಸ್ ಸುಮಂತ್

ಚಿನ್ನು ಎಂದರೆ ಈಗಲೂ ಎಲ್ಲರ ಮನಸ್ಸಲ್ಲಿ ಥಟ್ ಅಂತ ನೆನಪಾಗುವುದು ಕವಿತಾ ಗೌಡ. ಚಿನ್ನು ಅಲಿಯಾಸ್ ಕವಿತಾ ಗೌಡ ಎಂದೇ ಕರೆಯುತ್ತಾರೆ. ಈಗಲೂ ಚಿನ್ನು ಎಂಬ ಪೇಜ್‌ಗಳಲ್ಲಿ ಹೆಚ್ಚು ರಾರಾಜಿಸುವುದು ಕವಿತಾ ಗೌಡ ಫೋಟೊಗಳು. ಹಲವು ವರ್ಷಗಳು ನಟ ಚಂದನ್ ಕುಮಾರ್‌ರನ್ನು ಪ್ರೀತಿಸಿ, ಮದುವೆಯಾಗಿ ವರ್ಷವೂ ಕಳೆದಿದೆ. ಹೊಟೇಲ್ ಬ್ಯುಸಿನೆಸ್ ಜೊತೆಗೆ ಹೊಸ ಮನೆಯನ್ನೂ ಕೊಂಡುಕೊಂಡಿದ್ದಾರೆ. ಗಂಡ ಹೆಂಡತಿ ಪ್ರವಾಸ ಅಂತ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಕವಿತಾ ಇತ್ತೀಚೆಗೆ ಧಾರಾವಾಹಿಗಳಲ್ಲಿ ನಟಿಸುವುದು ತುಂಬಾ ವಿರಳವಾಗಿದೆ. ಆದರೆ ಶಾರ್ಟ್ ಮೂವಿ, ಸಿನಿಮಾಗಳಲ್ಲಿ ತಮ್ಮ ನಟನೆಯನ್ನು ಮುಂದುವೆರೆಸಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ಕವಿತಾ ಗೌಡ ತಮ್ಮ ದಿನಚರಿಯನ್ನು ಅಪ್ಡೇಟ್ ಮಾಡುತ್ತಾ ಇರುತ್ತಾರೆ.

ಕವಿತಾ ಗೌಡ ಶಾಪಿಂಗ್ ಲೀಸ್ಟ್ ನೋಡಿ ಶಾಕ್!

ಕವಿತಾ ಗೌಡ ಶಾಪಿಂಗ್ ಲೀಸ್ಟ್ ನೋಡಿ ಶಾಕ್!

ಕೆಲವೊಂದು ಸಿನಿಮಾದಲ್ಲಿ ಶಾಪಿಂಗ್ ಲೀಸ್ಟ್ ಬಗ್ಗೆ ಕಾಮಿಡಿಯನ್ನು ನೋಡಿರುತ್ತೇವೆ. ಆ ಲೀಸ್ಟ್ ನೋಡಿನೇ ತಲೆ ತಿರುಗಿ ಬಿದ್ದಿರುವಂಥದ್ದು. ಅದು ರಿಯಲ್ ಲೈಫ್‌ನಲ್ಲಿ ಆಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಿನಿಮಾಗಳಲ್ಲಿ ಕಾಮಿಡಿಗಾಗಿ ಮಾಡಿರುತ್ತಾರೆ. ಕೂಡು ಕುಟುಂಬವಿದ್ದರೆ ಹೆಚ್ಚಿನ ಪದಾರ್ಥಗಳು ಬೇಕಾಗಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಕುಟುಂಬಗಳೇ ಹೆಚ್ಚಾಗಿರುವುದರಿಂದ ಶಾಪಿಂಗ್ ಹೋದಾಗ ದಿನಸಿ ಪದಾರ್ಥಗಳು ಕಡಿಮೆಯೇ ಇರುತ್ತದೆ. ಆದರೆ ಕವಿತಾ ಗೌಡ ಶಾಪಿಂಗ್ ಮಾಡಿರುವ ಲೀಸ್ಟ್ ನೋಡಿದರೆ ಒಂದು ಕ್ಷಣ ತಲೆ ತಿರುವುವುದು ಗ್ಯಾರಂಟಿಯಾದಂತಾಗುತ್ತದೆ. ಮನೆಗೆ ಇಷ್ಟೊಂದು ಶಾಪಿಂಗ್ ಮಾಡಿದರಾ..? ಎಂಬ ಪ್ರಶ್ನೆಗಳು ಶುರುವಾಗಿವೆ.

ಮದುವೆಗೆ ಭಯ ಬಿದ್ದ ಗಂಡು ಮಕ್ಕಳು

ಮದುವೆಗೆ ಭಯ ಬಿದ್ದ ಗಂಡು ಮಕ್ಕಳು

ಮೊದಲೇ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಗಂಡು ಮಕ್ಕಳು ದುಡಿದ ದುಡ್ಡೆಲ್ಲಾ ಜೀವನಕ್ಕೆ ಸಾಕಾಗುತ್ತೆ ಎಂದು ಗೊಳೋ ಎನ್ನುತ್ತಿದ್ದಾರೆ. ಸಂಸಾರ ಎಂದರೆ ದೊಡ್ಡ ತಾಪತ್ರಯ ಗುರು. ಬರುವ ಸಂಬಳದಲ್ಲಿ ಹೆಂಡತಿಯನ್ನು ರಾಯಲ್ ಆಗಿ ಹೇಗೆ ನೋಡಿಕೊಳ್ಳುವುದು ಎಂದು ತಲೆ ಮೇಲೆ ಕೈಹೊತ್ತ ಕೆಲ ಗಂಡು ಮಕ್ಕಳ ಹಾರ್ಟ್ ಬ್ರೇಕ್ ಮಾಡಿದ್ದಾರೆ ಕವಿತಾ ಗೌಡ. ಚಿನ್ನು ತಾವೂ ಶಾಪಿಂಗ್ ಮಾಡಿದ ಲೀಸ್ಟ್ ಇರುವ ಫೋಟೊ ಕಾಪಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಗಂಡು ಮಕ್ಕಳು ಇದಕ್ಕೆ ನಾವೂ ಮದುವೆಯಾಗುತ್ತಿಲ್ಲ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಕವಿತಾ ಶಾಪಿಂಗ್ ನೋಡಿ ಮದುವೆಯಾಗಬೇಕಿದ್ದ ಗಂಡು ಮಕ್ಕಳನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಚಿನ್ನುಗಾಗಿ ಫ್ಯಾನ್ಸ್ ವೈಟಿಂಗ್

ಚಿನ್ನುಗಾಗಿ ಫ್ಯಾನ್ಸ್ ವೈಟಿಂಗ್

ಕವಿತಾ ಗೌಡ ಮದುವೆಯಾದ ಬಳಿಕ ನಟನೆಯಿಂದ ಕೊಂಚ ದೂರವೇ ಇದ್ದಾರೆ. ರಿಲೀಸ್ ಆದ ಸಿನಿಮಾಗಳು ಕಡಿಮೆಯೇ. ಹೀಗಾಗಿ ಅಭಿಮಾನಿಗಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ನಟನೆಗೆ ಮರಳಿ ಎಂದು ಕಮೆಂಟ್ ಹಾಕುತ್ತಿದ್ದಾರೆ. ಯಾಕೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಮತ್ತೆ ಕಿರುತೆರೆಗೆ ಬರಲು ಹೆಚ್ಚು ಮನವಿ‌ ಮಾಡುತ್ತಿದ್ದಾರೆ. ಕವಿತಾ ಗೌಡ ಹಾಕುವ ಒಂದೊಂದು ಪೋಸ್ಟ್‌ಗಳಿಗೂ ಬರುವ ಕಮೆಂಟ್ ಮೂಲಕ ಅವರನ್ನು ಅಭಿಮಾನಿಗಳು ಅದೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್

ಕವಿತಾ ಗೌಡ ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಇದರ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ತಮ್ಮಿಷ್ಟದ ನಟಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬ ಅಪ್ಡೇಟ್ ಸೋಶಿಯಲ್ ಮೀಡಿಯಾ ಮೂಲಕವೇ ತಿಳಿಯುತ್ತಿದೆ. ಇತ್ತೀಚೆಗೆ ಚಂದನ್ ಜೊತೆಗೆ ಚಿಕ್ಕಮಗಳೂರು ಟ್ರಿಪ್ ಕೂಡ ಹೋಗಿ ಬಂದಿದ್ದರು. ಇದೀಗ ಶಾಪಿಂಗ್ ಮಾಡಿ, ಅದರ ಬಿಲ್ ಹಂಚಿಕೊಂಡು ಗಂಡು ಮಕ್ಕಳಿಗೆ ಶಾಕ್ ನೀಡಿದ್ದಾರೆ. ಚಂದನ್ ಕಂಡು ನೆಟ್ಟಿಗರು ಮರುಗುವಂತೆ ಮಾಡಿದ್ದಾರೆ.

More from Filmibeat

English summary
Kannada Actress Kavitha Gowda Life Story, Biography And Shopping List. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X