ಸೋಶಿಯಲ್ ಮೀಡಿಯಾದಲ್ಲಿ ಕವಿತಾ ಗೌಡಗೆ ಬುದ್ಧಿ ಮಾತು: ನಟಿ ಮಾಡಿದ ತಪ್ಪೇನು?

By ಎಸ್ ಸುಮಂತ್

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಕಡಿಮೆ ಏನು ಇಲ್ಲ. ಇದಕ್ಕಿದ್ದ ಹಾಗೇ ರೀಲ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಹಾಡು ಹೇಳುವ ಮೂಲಕ, ಡಾನ್ಸ್ ಮಾಡುವ ಮೂಲಕ ಮನರಂಜನೆ ತೆಗೆದುಕೊಳ್ಳುತ್ತಾರೆ. ಮನರಂಜನೆ ನೀಡುತ್ತಾರೆ. ಇದು ಯಾವ ಸಮಸ್ಯೆಯೂ ಇಲ್ಲ. ಆದರೆ ಖ್ಯಾತಿ ಹೆಚ್ಚಾದಷ್ಟು ಅಪಾಯ ಹತ್ತಿರವಾಗುತ್ತೆ ಎಂಬ ಮಾತಿನಂತೆ ಕೆಲವೊಬ್ಬರ ಅತಿಯಾಸೆ, ಪ್ರಚಾರದ ಹುಚ್ಚು. ಒಮ್ಮೊಮ್ಮೆ ಪ್ರಾಣಕ್ಕೆ ಕುತ್ತು ತಂದು ಬಿಡುತ್ತೆ. ಈ ರೀಲ್ಸ್ ಮಾಡುವವರ ವಿಚಾರದಲ್ಲಿ ಇಂತಹ ಘಟನೆ ಸಾಕಷ್ಟು ಬಾರಿ ನಡೆದಿದೆ.

ರೀಲ್ಸ್ ಮಾಡಲು ಆರಂಭಿಸಿದರೆ ಕೇವಲ ಹಾಡು, ಡ್ಯಾನ್ಸಿಗಷ್ಟೆ ಸೀಮಿತವಾಗಲ್ಲ. ರಿಸ್ಕಿ ಪ್ಲೇಸ್‌ನಲ್ಲಿ ನಂಗೇನು ಆಗಲ್ಲ ಎಂಬ ಮೊಂಡು ಧೈರ್ಯದಿಂದ ಹಲವು ಅಪಾಯಗಳನ್ನು ಮೈಮೇಲೆ ಎಳೆದುಕೊಂಡವರ ಉದಾಹರಣೆಗಳಿದ್ದಾವೆ. ಇದ್ಯಾಕೆ ರೀಲ್ ಬಗ್ಗೆ ಇಷ್ಟೆಲ್ಲ ಪೀಠಿಕೆ ಹಾಕುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಕವಿತಾ ಗೌಡ ಅಲಿಯಾಸ್ ಚಿನ್ನು ಮಾಡಿರುವ ಈ ವಿಡಿಯೋ ಕಾರಣ.

ಹಸಿರ ಸಿರಿಯಲ್ಲಿ ಕ್ಯೂಟ್ ಕಪಲ್

ಹಸಿರ ಸಿರಿಯಲ್ಲಿ ಕ್ಯೂಟ್ ಕಪಲ್

ಸದ್ಯ ಕವಿತಾ ಗೌಡ ಪತಿ ಚಂದನ್ ಕುಮಾರ್ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಧಾರಾವಾಹಿಯಲ್ಲಿರುವ ಸ್ಪಂದನಾ ಮತ್ತು ವಿಕ್ರಾಂತ್ ಜೋಡಿಯನ್ನು ಒಂದು ಮಾಡಲು ಅವರ ತಾಯಿ ಪ್ರಯತ್ನ ಪಡುತ್ತಿದ್ದಾರೆ. ಹಾಗೇ ಸ್ಪಂದನಾಳನ್ನು ವಿಕ್ರಾಂತ್ ಕೂಡ ಇಷ್ಟಪಡುತ್ತಿದ್ದಾನೆ. ಹೀಗಾಗಿ ಇಬ್ಬರನ್ನು ಮನಸ್ಸುಗಳನ್ನು ಒಂದು ಮಾಡಲು ಧಾರಾವಾಹಿ ತಂಡ ಹಸಿರ ಸಿರಿ ಚಿಕ್ಕಮಗಳೂರಿಗೆ ಹೊರಟಿದ್ದಾರೆ. ರೀಲ್ ದಂಪತಿ ನಡುವೆ ರಿಯಲ್ ದಂಪತಿ ಕೂಡ ಚಿಕ್ಕಮಗಳೂರಿನ ಬೆಟ್ಟದ ಸಾಲಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಸದ್ಯ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಇತ್ತೀಚೆಗಷ್ಟೇ ಮದುವೆ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರು ಸಿನಿಮಾ ಧಾರಾವಾಹಿ ಅಂತ ಬ್ಯುಸಿ ಇರುವವರು. ಒಬ್ಬರು ಬಿಡುವಾದರೆ ಇನ್ನೊಬ್ಬರು ಫುಲ್ ಬ್ಯುಸಿ. ಹೀಗಿರುವಾಗ ಸಮಯ ಮಾಡಿಕೊಂಡು ಮದುವೆ ವಾರ್ಷಿಕೋತ್ಸವ ಮಾಡಿಕೊಳ್ಳುವುದು ಖುಷಿಯ ವಿಚಾರ. ಹೀಗಾಗಿ 'ಮರಳಿ ಮನಸಾಗಿದೆ' ಟೀಂ ಚಿಕ್ಕಮಗಳೂರಿನತ್ತ ಹೊರಟಿರುವಾಗ ಚಿನ್ನು ಮತ್ತು ಚಂದನ್ ಕೂಡ ಅಲ್ಲಿಯೇ ಜೊತೆಯಾಗಿದ್ದಾರೆ. ಚುಮು ಚುಮು ಚಳಿಯಲ್ಲಿ, ಬಿಸಿಬಿಸಿ ಕಾಫಿ ಹೀರುತ್ತಾ, ಬೆಟ್ಟಗುಡ್ಡದ ಸಾಲಿನಲ್ಲಿ ತಿರುಗಿ ಬಂದಿದ್ದಾರೆ. ಈ ಎಲ್ಲಾ ವಿಡಿಯೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಷ್ಟೊಂದು ಬುದ್ದಿ ಮಾತು ಹೇಳಿಸಿಕೊಂಡಿದ್ಯಾಕೆ?

ಇಷ್ಟೊಂದು ಬುದ್ದಿ ಮಾತು ಹೇಳಿಸಿಕೊಂಡಿದ್ಯಾಕೆ?

ಕವಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಅಲ್ಲದೆ ಹೋದರೂ ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ವೈರಲ್ ಆಗಿರುವ ವಿಡಿಯೋವೊಂದನ್ನು ಕವಿತಾ ಹಂಚಿಕೊಂಡಿರುವುದಲ್ಲ. ಪ್ಯಾನ್ಸ್‌ಗೆ ಹೇಗೆ ಸಿಕ್ಕಿದೆ ಗೊತ್ತಿಲ್ಲ. ಕವಿತಾಚಂದನ್ ಎಂಬ ಖಾತೆಯಲ್ಲಿ ಈ ಒಂದು ವಿಡಿಯೋ ಪೋಸ್ಟ್ ಆಗಿದೆ. ಅದು ಹರಿಯುವ ನೀರಿನ ಮಧ್ಯೆ ತೆಗೆದಿರುವ ವಿಡಿಯೋ. ಆ ಸ್ಥಳ ನೋಡಿದರೆ ಎಂಥವರಿಗೂ ಭಯವಾಗುತ್ತೆ. ಮೊದಲೇ ಮಳೆಗಾಲವದು. ಕಲ್ಲು ನೆನೆದಿದ್ದಾಗ ಗಮನವಿಟ್ಟು ಹೆಜ್ಜೆ ಇಟ್ಟರೆ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಕವಿತಾ ಮೊಬೈಲ್ ನೋಡಿಕೊಂಡು ಆ ಜಾಗದಲ್ಲಿ ವಿಡಿಯೋ ಮಾಡಿದರೆ ಯಾರಿಗೆ ಆಗಲಿ ಭಯವಾಗುವುದಿಲ್ಲವೆ. ಅದೇ ಕಾರಣಕ್ಕೆ ಎಚ್ಚರದಿಂದಿರಿ ಎಂದು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ.

ತಾರೆಯರನ್ನು ಅನುಸರಿಸುವುದೇ ಹೆಚ್ಚು

ಫ್ಯಾನ್ಸ್, ಫ್ಯಾಷನ್ ಪ್ರಿಯರು ಸೆಲೆಬ್ರೆಟಿಗಳ ಲೈಫ್ ಸ್ಟೈಲ್ ಅನುಸರಿಸುವುದು ಕಾಮನ್. ಅವರು ಏನು ಮಾಡುತ್ತಾರೆ? ಹೇಗೆ ಇರುತ್ತಾರೆ? ಯಾವ ರೀತಿಯ ಡ್ರೆಸ್ ಹಾಕಿತ್ತಾರೆ ಎಂಬುದೆಲ್ಲವನ್ನು ಗಮನಿಸಿ ಅದೇ ರೀತಿಯಲ್ಲಿ ಇರುವುದಕ್ಕೆ ಪ್ರಯತ್ನ ಮಾಡುತ್ತಾರೆ. ಸೆಲೆಬ್ರೆಟಿಗಳು ಎಂದರೆ ಒಂದಷ್ಟು ವರ್ಗಕ್ಕೆ ಮಾದರಿಯೇ ಸರಿ. ಮೊದಲೇ ಹೇಳಿದಂತೆ ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಮಾಡುವ ಕ್ರೇಜ್ ಏನು ಕಡಿಮೆ ಇಲ್ಲ. ಹೀಗಾಗಿ ಕವಿತಾ ಗೌಡ ಅಷ್ಟು ಕಷ್ಟದ ಸ್ಥಳದಲ್ಲಿ ವಿಡಿಯೋ ಮಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಆ ವಿಡಿಯೋ ನೋಡಿದ ಪ್ರತಿಯೊಬ್ಬರು ನೀವೂ ಏನು ಮಾಡೋದಕ್ಕೆ ಹೊರಟಿದ್ದೀರಿ? ಇದು ಡೇಂಜರಸ್ ಸ್ಥಳ. ಎಚ್ಚರದಿಂದಿರಿ ಎಂದೆಲ್ಲಾ ಕಮೆಂಟ್ ಮಾಡಿ ಕಾಳಜಿ ತೋರಿದ್ದಾರೆ.

More from Filmibeat

English summary
Kannada Actress Kavitha Gowda and Chandan Gowda Chikkamagaluru Trip, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X