Actress Kavya Shaiva: ಹಳ್ಳಿ ಹುಡುಗಿ ಅವತಾರದಲ್ಲಿ ಮೋಡಿ ಮಾಡುತ್ತಿರೋ ಕಿರುತೆರೆ ನಟಿ ಕಾವ್ಯಾ ಶೈವ ಹಿನ್ನೆಲೆ ಏನು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ನಾಯಕಿ ಸುಮನಾ ಪಾತ್ರದಲ್ಲಿ ನಟಿಸುತ್ತಿರುವ ಕಾವ್ಯಾ ಶೈವ ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಬೆಡಗಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭೂಮಿ ತಾಯಾಣೆ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಕಾವ್ಯಾ ಶೈವ ಅವರನ್ನು ಜನ ಗುರುತಿಸಿದ್ದು ಸುಮನಾ ಆಗಿ ಬದಲಾದ ಬಳಿಕವೇ.

'ಕೆಂಡಸಂಪಿಗೆ' ಧಾರಾವಾಹಿಯ ಸುಮನಾ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಕಾವ್ಯಾ ಶೈವ ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಕಾವ್ಯಾ ಅವರಿಗೆ ನಟಿಯಾಗಿ ಗುರುತಿಸಿಕೊಳ್ಳುವ ಬಯಕೆ. ಸದ್ಯ ಸುಮನಾ ಆಗಿ ನಟಿಸುವಲ್ಲಿ ಯಶಸ್ವಿಯಾಗಿರುವ ಈಕೆ ನಟನೆಗೆ ಕಾಲಿಡುವ ಮೊದಲು ಯಾವುದೇ ರೀತಿಯ ತರಬೇತಿ ಪಡೆದವರಲ್ಲ. ಬದಲಿಗೆ ನಟನೆಗೆ ಕಾಲಿಟ್ಟ ಬಳಿಕವೇ ನಟನೆಯ ರೀತಿ ನೀತಿ ಕಲಿತ ಬೆಡಗಿ.

Kannada actress Kavya Shaiva is charming as village girl in Kenda Sampige serial

ತೆಲುಗು ಕಿರುತೆರೆಯಲ್ಲಿ ಮೋಡಿ

'ಭೂಮಿ ತಾಯಾಣೆ' ಧಾರಾವಾಹಿಯ ನಂತರ ತೆಲುಗು ಕಿರುತೆರೆಗೆ ಹಾರಿದ ಕಾವ್ಯಾ ಶೈವ ಮುಸ್ಲಿಂ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದು ವಿಶೇಷ. ಹೌದು, ತೆಲುಗಿನ 'ಹಂಸಗೀತಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದರು. ಸಂತಸದ ವಿಚಾರವೆಂದರೆ 'ಹಂಸಗೀತಂ' ಧಾರಾವಾಹಿಯಲ್ಲಿ ಕನ್ನಡದ ನಟ ಜಯ್ ಡಿಸೋಜಾ, ಕಾವ್ಯಾ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಹಳ್ಳಿ ಹುಡುಗಿಯಾಗಿ ಮೋಡಿ

ಹಳ್ಳಿ ಹುಡುಗಿಯಾಗಿರುವ ಸುಮನಾಗೆ ತನ್ನ ಅಪ್ಪ, ತಂಗಿ, ತಮ್ಮನೇ ಪ್ರಪಂಚ. ಅನಿವಾರ್ಯ ಕಾರಣಗಳಿಂದಾಗಿ ನಾಯಕ ತೀರ್ಥಂಕರನನ್ನು ಮದುವೆಯಾಗಿರುವ ಸುಮನಾ ಇದೀಗ ಗರ್ಭಿಣಿಯಾಗಿದ್ದಾಳೆ. ಅನಿವಾರ್ಯ ಕಾರಣಗಳಿಂದ ಸುಮನಾಳಿಗೆ ತಾಳಿ ಕಟ್ಟಿದ ತೀರ್ಥಂಕರನಿಗೆ ಸುಮನಾ ಮೇಲೆ ಪ್ರೀತಿ ಉಂಟಾಗಿದೆ. ಇದರ ಜೊತೆಗೆ ತನ್ನ ನುಡಿ, ನಡವಳಿಕೆಯಿಂದ ಮನೆಯವರ ಮನಸ್ಸನ್ನು ಕೂಡಾ ಸುಮನಾ ಗೆದ್ದಿದ್ದಾಳೆ. ಮಾವ ಕೇಶವಮೂರ್ತಿ, ಅಕ್ಕ ಪದ್ಮಾ ಪ್ರೀತಿಯ ಸೊಸೆಯಾಗಿರುವ ಸುಮನಾ ಮೈದುನ ಸುಭಾಷ್ ನ ಪ್ರೀತಿಯ ಅತ್ತಿಗೆ. ಇದೀಗ ಅತ್ತಿಗೆ ಸಾಧನಾ ಹಾಗೂ ನಾದಿನಿ ಜಾಹ್ನವಿಯ ಕುತಂತ್ರದ ಅರಿವು ಇಲ್ಲದ ಸುಮನಾಗೆ ಇದರ ಅರಿವು ಅದ್ಯಾವಾಗ ತಿಳಿಯುತ್ತದೆ ಎಂದು ಕಾದುನೋಡಬೇಕಾಗಿದೆ.

Kannada actress Kavya Shaiva is charming as village girl in Kenda Sampige serial

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್

ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಆಕ್ಟೀವ್ ಆಗಿರುತ್ತಾರೆ. ಕಾವ್ಯಾ ಶೈವ ಕೂಡಾ ಇದಕ್ಕೆ ಹೊರತಾಗಿಲ್ಲ. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಕಾವ್ಯ ಆಗಾಗ ಫೋಟೋಶೂಟ್ ಗಳನ್ನು ಮಾಡಿಸುವುದಲ್ಲದೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
Kavya Shaiva, who appeared for the first time in a supporting role, acted not only in Kannada but also in Telugu television.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X