Actress Kruttika Ravindra: ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಕೃತಿಕಾ.. ಯಾವುದದು?

By ಅನಿತಾ ಬನಾರಿ

ಇತ್ತೀಚೆಗಷ್ಟೇ ಆರಂಭವಾಗಿರುವ ಕನ್ನಡದ ಹೊಚ್ಚ ಹೊಸ ಧಾರಾವಾಹಿ 'ಭೂಮಿಗೆ ಬಂದ ಭಗವಂತ' ಇದೀಗ 100 ಎಪಿಸೋಡ್‌ಗಳನ್ನು ಮುಗಿಸಿದ್ದು ಇದು ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಹಾಗೆ ಧಾರಾವಾಹಿ ತಂಡದವರಿಗೆ ಬಹಳಷ್ಟು ಸಂಭ್ರಮವನ್ನು ನೀಡಿದೆ. ಈ ಬಗ್ಗೆ ಧಾರಾವಾಹಿಯ ಮುಖ್ಯ ಪಾತ್ರಧಾರಿ ನಟಿ ಕೃತಿಕಾ ರವೀಂದ್ರ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಗಿರಿಜಾ ಎಂಬ ಪಾತ್ರಕ್ಕೆ ಜೀವ ತುಂಬಿರುವ ನಟಿ ಕೃತಿಕಾ ರವೀಂದ್ರ ಅವರು ಧಾರಾವಾಹಿಯ ಕಥೆ ಹಾಗೂ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಹೇಗೆಲ್ಲಾ ಪ್ರತಿಕ್ರಿಸುತ್ತಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

Kannada actress Kruttika Ravindra has acted in a role beyond her age

ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕೃತಿಕಾ

ಧಾರಾವಾಹಿಯಲ್ಲಿ ಕೃತಿಕಾ ಅವರು ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅನೇಕ ಜನರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಹಳ ದೊಡ್ಡ ಪಾತ್ರವನ್ನು ಮಾಡುತ್ತಿದ್ದೀರಿ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದರಂತೆ. ಇದಕ್ಕೆ ಕೃತಿಕಾ ಅವರು ನಟಿಸುವುದಕ್ಕೆ ಯಾವುದೇ ರೀತಿಯ ಚಿಕ್ಕ ಪಾತ್ರ ಅಥವಾ ದೊಡ್ಡ ಪಾತ್ರ ಎಂಬ ವ್ಯತ್ಯಾಸ ಇಲ್ಲ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ನಾವು ಎಷ್ಟರ ಮಟ್ಟಿಗೆ ಅದಕ್ಕೆ ಜೀವ ತುಂಬಿ ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಅದನ್ನು ನೀಡಬಹುದು ಎಂಬುದು ನಮ್ಮ ಚಾಣಾಕ್ಷತೆ ಹಾಗೂ ನಟನ ಶಕ್ತಿಯಲ್ಲಿದೆ ಎಂದು ಹೇಳಿದ್ದಾರೆ.

ಗಿರಿಜಾ ಗಟ್ಟಿಗಿತ್ತಿ ಹೆಣ್ಣು ಮಗಳು

ಇನ್ನು ಗಿರಿಜಾ ಎಂಬ ಪಾತ್ರದ ಬಗ್ಗೆ ಮಾತನಾಡಿದ ನಟಿ ಕೃತಿಕಾ ಗಿರಿಜಾ ಎಂಬ ಪಾತ್ರ ಬಹಳ ಗಟ್ಟಿಯಾಗಿರುವಂತದ್ದು ಎಂದು ಹೇಳಿದ್ದಾರೆ. ನೋವು, ಸುಖ, ದುಃಖ, ಮೌನ ಮಾತು ಎಲ್ಲವನ್ನು ಒಳಗೊಂಡಿರುವಂತಹ ಒಂದು ಗಟ್ಟಿಯಾದ ಹೆಣ್ಣುಮಗಳ ಪಾತ್ರವದು. ಇಂತಹ ಪಾತ್ರದಲ್ಲಿ ನಟಿಸುವ ಅವಕಾಶ ಸಿಗುತ್ತದೆ ಎಂದು ಆಕೆ ಅಂದುಕೊಂಡಿರಲಿಲ್ಲವಂತೆ. ಆರು ತಿಂಗಳ ಹಿಂದೆ ಈ ಧಾರಾವಾಹಿ ಹಾಗೂ ಪಾತ್ರದ ಬಗ್ಗೆ ಒಂದಷ್ಟು ಚರ್ಚೆಗಳಾದ ನಂತರ ಖುಷಿಯಿಂದ ಪಾತ್ರವನ್ನು ಒಪ್ಪಿಕೊಂಡರಂತೆ.

Kannada actress Kruttika Ravindra has acted in a role beyond her age

ಬಯಸದೇ ಬಂದ ಅದೃಷ್ಟ

ಗಿರಿಜಾ ಪಾತ್ರ ಕೃತಿಕಾ ಪಾಲಿಗೆ ಇದು ಬಯಸದೆ ಬಂದ ಭಾಗ್ಯವಂತೆ. ಸಿಕ್ಕ ಸದವಕಾಶವನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳುವ ದಾರಿಯಲ್ಲಿ ಇದೀಗ ಅವರಿದ್ದಾರೆ. ಅವರ ಕೈಲಾಗದಷ್ಟು ಪಾತ್ರಕ್ಕೆ ಜೀವ ತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹಳಷ್ಟು ಜನರಿಗೆ ಇದು ಇಷ್ಟವಾಗಿದೆ. ಹಲವಾರು ಮೆಚ್ಚುಗೆಗಳನ್ನು ಕೊಟ್ಟಾಗ ಪಾತ್ರಕ್ಕೆ ಇನ್ನಷ್ಟು ಜೀವ ಕೊಡಲು ಪ್ರಯತ್ನಿಸುತ್ತಿರುತ್ತಾರೆಯಂತೆ ಕೃತಿಕಾ.

ಭೂಮಿಗೆ ಬಂದ ಭಗವಂತ ಸಂತಸ ನೀಡಿದೆ

'ಭೂಮಿಗೆ ಬಂದ ಭಗವಂತ' ಧಾರಾವಾಹಿ ಕೃತಿಕಾ ಅವರಿಗೆ ಬಹಳಷ್ಟು ಸಂತೋಷ ಸಮಾಧಾನವನ್ನು ನೀಡಿದೆ. ಮನೆಯಲ್ಲಿ ಅವರ ಕುಟುಂಬದವರ ಸಹಕಾರ, ಪ್ರೊಡಕ್ಷನ್ ಹೌಸ್‌ ಬೆಂಬಲ ಜೊತೆಗೆ ಪ್ರೇಕ್ಷಕರು ಅಭಿಮಾನಿಗಳ ಪ್ರೀತಿ ಮತ್ತು ಮೆಚ್ಚುಗೆ, ಸಹಕಲಾವಿದರ ಸಪೋರ್ಟ್ ಎಲ್ಲವೂ ಬಹಳಷ್ಟು ಚೆನ್ನಾಗಿದೆಯಂತೆ. ಹಾಗಾಗಿ ಇಡೀ ವಾತಾವರಣ ಆಕೆಗೆ ಬಹಳಷ್ಟು ಸಮಾಧಾನ ಕೊಟ್ಟಿದೆಯಂತೆ.

ವರ್ಷಗಳ ನಂತರ ಬಣ್ಣ ಹಚ್ಚಿದ ಕೃತಿಕಾ

ಇನ್ನು ನಟಿ ಕೃತಿಕಾ ರವೀಂದ್ರ ಅವರು ಈ ಮೊದಲು ಹಲವಾರು ವರ್ಷಗಳ ಹಿಂದೆ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ನಟಿಸಿದ್ದರು. ನಂತರ ಒಂದು ಬಿಗ್ ಬ್ರೇಕ್ ತೆಗೆದುಕೊಂಡ ಇವರು ಇದೀಗ ಧಾರಾವಾಹಿ ಪ್ರಪಂಚಕ್ಕೆ ಮತ್ತೆ ವಾಪಸ್ ಆಗಿರುವುದು ಇವರ ಅಭಿಮಾನಿಗಳಿಗೆ ಖುಷಿ ತಂದಿದೆ.

More from Filmibeat

English summary
Kannada actress Kruttika Ravindra has acted in a role beyond her age:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X