ಬ್ಯಾಕ್‌ಲೆಸ್ ಬ್ಲೌಸ್ ಜೊತೆ ಸೀರೆ, ಹೊಸ ಫೋಟೋಶೂಟ್‌ನಲ್ಲಿ ಮಿರಮಿರ ಮಿಂಚಿದ ಹಿಟ್ಲರ್ ಕಲ್ಯಾಣ ಲೀಲಾ..!
ದಿಲೀಪ್ ರಾಜ್ ಅಭಿನಯದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದವರು ಮಲೈಕಾ ವಸುಪಾಲ್. ತಮ್ಮ ಮೊದಲ ಪ್ರಯತ್ನದಲ್ಲಿಯೇ ಕನ್ನಡಿಗರ ಮನ ಗೆದ್ದ ಮಲೈಕಾ ಅವರನ್ನು ಅನೇಕರು ಈಗಲೂ ಎಡವಟ್ಟು ಲೀಲಾ ಎಂದು ಗುರುತಿಸುತ್ತಾರೆ. ಕರೆಯುತ್ತಾರೆ. ಹಿಟ್ಲರ್ ಕಲ್ಯಾಣದ ನಂತರ ಕಿರುತೆರೆಯಿಂದ ಕಣ್ಮರೆಯಾದ ಮಲೈಕಾ ಆ ನಂತರ ಉಪಾಧ್ಯಕ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ನಾಯಕಿಯಾಗಿ ಬಡ್ತಿ ಪಡೆದರು. ಚಿಕ್ಕಣ್ಣನ ಎದುರು ನಾಯಕಿಯಾಗಿ ತಮ್ಮ ಅಭಿನಯದಿಂದ ಜನ ಮನ ಗೆದ್ದರು. ಚಿತ್ರರಂಗದವರ ಗಮನವನ್ನೂ ಸೆಳೆದರು.
ಇಂಥಾ ಮಲೈಕಾ ವಸುಪಾಲ್ ಈಗ ನೀತಾ ಶಂಕರ್ ಅವರ ಬಳಿ ಫೋಟೋಶೂಟ್ ಮಾಡಿಸಿದ್ಧಾರೆ. ಹೊಸ ಫೋಟೋಶೂಟ್ ಮೂಲಕ ಎಲ್ಲರ ಕಣ್ಮನ ಸೆಳೆಯುತ್ತಿದ್ಧಾರೆ.ಸದ್ಯಕ್ಕೆ ಮಲೈಕಾ ಅವರ ಈ ಫೋಟೋಗಳಿಗೆ ಇವರ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ದೇವರು ಬಹಳ ಪುರುಸೋತಲ್ಲಿ ಕೆತ್ತಿದಂತಹ ಅಂದ ಇದು, ಬೋಲ್ಡ್ ಆಂಡ್ ಬ್ಯೂಟಿಫುಲ್, ಸ್ಟನ್ನಿಂಗ್ ಲುಕ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

ಸೀರೆಯ ಲುಕ್ ನಲ್ಲಿ ಸಖತ್ ಕಾಣಿಸಿಕೊಂಡ ಬ್ಯೂಟಿ
ಇನ್ನೂ ಟಗರು ಪಲ್ಯ ಸಿನಿಮಾ ಖ್ಯಾತಿಯ ನಾಯಕ ನಾಗಭೂಷಣ್ ಜೊತೆ ವಿದ್ಯಾಪತಿ ಸಿನಿಮಾದಲ್ಲಿ ನಾಯಕಿ ಪಾತ್ರವನ್ನ ನಿರ್ವಹಿಸುತ್ತಿರುವ ಮಲೈಕಾ, ಟ್ರೆಡಿಶನಲ್ ಡ್ರೆಸ್ ಗೆ ಮಾಡರ್ನ್ ಲುಕ್ ನ ಟಚ್ ನೀಡಿದ್ದಾರೆ.ಮಲೈಕಾ ಅವರು ಐವರಿ ಬಣ್ಣದ ಗೋಲ್ಡನ್ ಡಿಸೈನ್ ಹಾಗೂ ಕೆಂಪು ಬಣ್ಣದ ಬಾರ್ಡರ್ ನ ಸೀರೆಯುಟ್ಟಿದ್ದು, ಅದಕ್ಕೆ ಕೆಂಪು ಬಣ್ಣದ ಬ್ಯಾಕ್ ಲೆಸ್ ಟ್ಯೂಬ್ ಬ್ಲೌಸ್ ಧರಿಸಿದ್ದಾರೆ. ಟ್ರೆಡಿಶನಲ್ ಜೊತೆಗೆ ಮಾರ್ಡನ್ ಲುಕ್ ನಲ್ಲಿ ತುಂಬಾನೆ ಸುಂದರವಾಗಿ ಮಲೈಕಾ ವಸುಪಾಲ್ ಕಾಣಿಸುತ್ತಿದ್ದಾರೆ.
ತಮ್ಮ ಲುಕ್‌ನ ಮೆರಗು ಹಚ್ಚಿಸಲು ಗ್ರೀನ್ ಪರ್ಲ್ ಮತ್ತು ಸ್ಟೋನ್ಸ್ ಹೊಂದಿರುವ ಹೆವಿ ಚಾಕರ್, ಜೊತೆಗೆ ಹಸಿರು ಬಣ್ಣದ ಜುಮುಕಿ ಮತ್ತು ಹಸಿರು ಮುಂದಾಲೆ ಧರಿಸಿದ್ದಾರೆ. ಜೀವಿತಾ ಮೇಕಪ್ ಮಾಡಿದ್ದು, ಮಲೈಕಾ ಈ ವಿಭಿನ್ನ ಡಿಸೈನರ್ ಔಟ್ ಫಿಟ್ ನಲ್ಲಿ ಯುವರಾಣಿಯ ಹಾಗೆ ಕಂಗೊಳಿಸುತ್ತಿದ್ದಾರೆ.

ಸದ್ಯಕ್ಕೆ ಮಲೈಕಾ ಧಾರಾವಾಹಿಗಳಿಗಿಂತ ಚಿತ್ರಗಳತ್ತ ತಮ್ಮ ಚಿತ್ತ ವಹಿಸಿದ್ದಾರೆ. ಹೊಸ ಫೋಟೋಶೂಟ್ ಮೂಲಕ ಮಿರ ಮಿರ ಮಿಂಚಿದ್ದಾರೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಉತ್ತಮವಾದ ಅವಕಾಶಗಳು ಸಿಗುವ ಭರವಸೆಯಲ್ಲಿ ಕೂಡ ಮಲೈಕಾ ಇದ್ದಾರೆ. ಅಂದ್ಹಾಗೇ ಮಲೈಕಾ ಅಭಿನಯದ ಎರಡನೇ ಚಿತ್ರ ವಿದ್ಯಾಪತಿಗೆ ಡಾಲಿ ಧನಂಜಯ್ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆಯಷ್ಟೇ ಪುಟ್ಟದಾದ ಟೀಸರ್ ಮೂಲಕ ಗಮನ ಸೆಳೆದ ಈ ಚಿತ್ರದಲ್ಲಿ ಮಲೈಕಾ ಅವರ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











