ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಾನಸ ಜೋಷಿ ಮಾಡಿದ ಒಳ್ಳೆ ಕೆಲಸ ಏನು?

By ಪ್ರಿಯಾ ದೊರೆ

ನಟಿ ಮಾನಸ ಜೋಷಿ ಅವರು ಸೂಕ್ಷ್ಮ ಪಾತ್ರಗಳಿಂದಲೇ ಹೆಸರುವಾಸಿಯಾದವರು. ಇವರನ್ನು ಹೆಸರಿನಿಂದ ಗುರುತಿಸುವುದಕ್ಕಿಂತಲೂ ದೇವಿ ಪಾತ್ರದ ಮೂಲಕ ಹೆಚ್ಚು ಚಿರಪರಿಚಿತರು. ಮಾನಸ ಜೋಷಿ ಅವರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಥಕ್ ಡ್ಯಾನ್ಸರ್ ಆಗಿರುವ ಮಾನಸ ಜೋಷಿ ಅವರು ಇತ್ತೀಚೆಗಷ್ಟೇ ಡ್ಯಾನ್ಸ್ ಶಾಲೆಯನ್ನು ತೆರೆದಿದ್ದಾರೆ. ವಿದೇಶದಲ್ಲಿ ನೆಲೆಸಿರುವವರಿಗೆ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸದ್ಯ ಗರ್ಭಿಣಿಯಾಗಿರುವ ಕಾರಣ ಕ್ಲಾಸ್ ನಡೆಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಕಿರುತೆರೆ ಲೋಕದಲ್ಲಿ ಹೆಚ್ಚಾಗಿ ದೇವಿ ಪಾತ್ರದಲ್ಲಿ ಮಾನಸ ಜೋಷಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿಯಲ್ಲಿ ಮೊದಲು ಗುರುತಿಸಿಕೊಂಡು ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು. 'ಬಹುಪರಾಕ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಾನಸ ಜೋಷಿ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ರಂಗಭೂಮಿಯ ಕೂಸು

ರಂಗಭೂಮಿಯ ಕೂಸು

ಕಥಕ್ ಡ್ಯಾನ್ಸರ್ ಆಗಿರುವ ಇವರು ಸ್ಕೂಲ್ ಹಾಗೂ ಕಾಲೇಜ್ ನಲ್ಲಿರುವಾಗಲೇ ತುಂಬಾ ಆಕ್ಟೀವ್ ಆಗಿದ್ದಂತವರು. ಸ್ಪೋರ್ಟ್ ಅನ್ನು ಇಷ್ಟಪಡುತ್ತಿದ್ದ ಮಾನಸ ಜೋಷಿ ಅವರು ವಾಲಿಬಾಲ್, ಬಾಸ್ಕೆಟ್ ಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸಕ್ರಿಯರಾಗಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಳಿಕ ಮುಂಬೈನಲ್ಲಿ ಆಕ್ಟಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮಾನಸ ಜೋಷಿ ಅವರು ಮುಂಬೈನಲ್ಲಿ ಅನುಪಮ್ ಖೇರ್ ಅವರ ಆಕ್ಟರ್ ಪ್ರಿಪೇರ್ಸ್‌ನಿಂದ ಡಿಪ್ಲೊಮಾ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಮೀಡಿಯಾದಲ್ಲಿ ಮಾಸ್ಟರ್ಸ್ ಮಾಡಿದ್ದು, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ರಂಗಭೂಮಿ, ಕಿರುತೆರೆ ಹಾಗೂ ಸಿನಿ ಕ್ಷೇತ್ರದಲ್ಲಿ ಮಾನಸ ಅವರು ಸಕ್ರಿಯರಾಗಿದ್ದಾರೆ.

ಸಿನಿಮಾಗಳಲ್ಲೂ ಕಾಣಿಸಿಕೊಂಡ ನಟಿ

ಸಿನಿಮಾಗಳಲ್ಲೂ ಕಾಣಿಸಿಕೊಂಡ ನಟಿ

ಮಾನಸ ಜೋಷಿ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದೇ 'ಬಹುಪರಾಕ್' ಚಿತ್ರದ ಮೂಲಕ. ಮಾನಸ ಜೋಷಿ ಅವರು ಹೆಚ್ಚು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದು, 'ಲಾಸ್ಟ್ ಬಸ್', 'ಕಿರಗೂರಿನ ಗಯ್ಯಾಳಿಗಳು', 'ಯಶೋಗಾಥೆ', 'ದೇವರ ನಾಡಲ್ಲಿ', 'ಹಜ್', 'ಅಮೃತ ಅಪಾರ್ಟ್ಮೆಂಟ್ಸ್', 'ಕೌದಿ', 'ಹರಿವು' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಹೆಚ್ಚಾಗಿ ದೇವಿ ಪಾತ್ರಗಳಲ್ಲೇ ನಟಿಸಿರುವ ಮಾನಸ ಜೋಷಿ ಅವರು, ಶ್ರೀ, ಮಹಾದೇವಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಹೆಚ್ಚು ದೇವಿ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದು, ಇತರೆ ಪಾತ್ರಗಳಲ್ಲಿ ನಟಿಸುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಮಾನಸ ಜೋಷಿ ಅವರು ಮಂಗಳ ಗೌರಿ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗರ್ಭಿಯಾಗಿರುವ ಮಾನಸ ಜೋಷಿ

ಗರ್ಭಿಯಾಗಿರುವ ಮಾನಸ ಜೋಷಿ

ಮಾನಸ ಜೋಷಿ ಅವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಕಥಕ್ ಡ್ಯಾನ್ಸರ್ ಆಗಿರುವ ಮಾನಸ ಅವರು ಸಿನಿಮಾಗಳಿಗೆ ಕೊರಿಯೋಗ್ರಫಿ ಕೂಡ ಮಾಡಿದ್ದಾರೆ. ಈಗಾಗಲೇ ಸುಮಾರ 500ಕ್ಕೂ ಹೆಚ್ಚು ಕಡೆ ಹಾಗೂ ಹೆಸರಾಂತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದಲ್ಲದೇ ಐದು ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸ ಮಾಡಿದ್ದಾರೆ. ಕಥಕ್ ಸ್ಟುಡಿಯೋ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸದ್ಯ ಮಾನಸ ಜೋಷಿ ಗರ್ಭಿಣಿಯಾಗಿದ್ದು, ಈ ಸಂತಸವನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ತಮ್ಮ ಬೇಬಿ ಬಂಪ್ ಫೋಟೋ ಜೊತೆಗೆ ಸಂಸತಸವನ್ನು ಹಂಚಿಕೊಂಡಿದ್ದರು. 2015 ಸಪ್ತಪದಿ ತುಳಿದ ಇವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕ್ಯಾನ್ಸರ್ ರೋಗಿಗಳಿಗೆ ಕೊಟ್ಟ ಗಿಫ್ಟ್

ಕ್ಯಾನ್ಸರ್ ರೋಗಿಗಳಿಗೆ ಕೊಟ್ಟ ಗಿಫ್ಟ್

ನಟಿ ಮಾನಸ ಜೋಷಿ ಈಗ ತುಂಬು ಗರ್ಭಿಣಿ. ನಿತ್ಯ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಈ ನಡುವೆ ಮಾನಸ ಅವರು ತಮ್ಮ ತಲೆಯ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿದ್ದಾರೆ. ಈ ವಿಚಾರವನ್ನು ಹಂಚಿಕೊಂಡಿರುವ ಮಾನಸ ಅವರು, ಕಳೆದ 15 ವರ್ಷಗಳ ಹಿಂದೆಯೇ ಆಸೆಪಟ್ಟಿದ್ದೆ. ಆದರೆ ಅದು ಈಗ ನನಸಾಗಿದೆ ಎಂದು ಬರೆದುಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳಿಎ ತಲೆ ಕೂದಲನ್ನು ದಾನ ಮಾಡುವ ಮೂಲಕ ಒಂದೊಳ್ಳೆಯ ಕೆಲಸವನ್ನು ಮಾಡಿರುವುದಕ್ಕೆ ಹಲವರು ಪ್ರಶಂಸಿಸಿದ್ದಾರೆ.

More from Filmibeat

English summary
Kannada Actress Manasa Joshi donates hair to cancer patients. now actress manasa joshi is pregnant. And she donated her hair for good cause. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X