Megha shetty: ಬ್ಲಾಕ್ ಲೆಹಂಗಾದಲ್ಲಿ ಮೇಘಾ ಶೆಟ್ಟಿ ಮಿಂಚು, ಮುದ್ದು ಬಂಗಾರ ಎಂದ ಫ್ಯಾನ್ಸ್
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮಿಂಚಿದ ನಟಿ ಮೇಘಾ ಶೆಟ್ಟಿಗೆ ಇದೀಗ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿದೆ. ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಈ ಬಾರಿ ಮೇಘಾ ಶೆಟ್ಟಿ ಬಹಳ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಇದ್ದು ನೋಡುಗರ ಕಣ್ಣು ತಂಪಾಗಿಸಿದೆ. ಮೇಘಾ ಶೆಟ್ಟಿ ಫೋಟೋವನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದು ಸಾಕಷ್ಟು ಲೈಕ್ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ.
ಮೇಘಾ ಶೆಟ್ಟಿಯ ಹಾಟ್ ಫೋಟೋ ನೋಡಿದ ಅಭಿಮಾನಿಗಳು ತ್ರಿಲ್ ಆಗಿದ್ದಾರೆ. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುತ್ತಿರುವ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಎಲ್ಲರ ಮನ ಗೆದ್ದ ನಟಿ ಇದೀಗ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಹಾಗೆಯೇ ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೈವ' ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಕೈವ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಜಯತೀರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರಂತೆ. ಹಾಗೆಯೇ ಗ್ರಾಮಾಯಣ ಸಿನಿಮಾಗೆ ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್ ಅವರಿಗೆ ಮೇಘಾ ಶೆಟ್ಟಿ ಜೋಡಿ ಆಗುತ್ತಿದ್ದಾರೆ.
ಬ್ಲಾಕ್ ಲೆಹಂಗಾದಲ್ಲಿ ಸಕತ್ ಲುಕ್ ಕೊಟ್ಟ ಮೇಘಾ ಶೆಟ್ಟಿ
ಹೊದ ಫೋಟೋಗಳಲ್ಲಿ ಮೇಘಾ ಶೆಟ್ಟಿ ಬಹಳ ಗ್ಲಾಮರಸ್ ಆಗಿ ಕಾಣಿಸುತ್ತ ಇದ್ದು, ಕಪ್ಪು ಬಣ್ಣದ ಲೆಹಂಗಾ ತೊಟ್ಟು ಬಹಳ ಅಂದವಾಗಿ ಕಾಣಿಸುತ್ತ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾದ ಹೆಸರನ್ನು ಕೂಡ ಅನೌನ್ಸ್ ಮಾಡುತ್ತಾರೆ. ಹಾಗೆಯೇ ಅಭಿಮಾನಿಗಳ ಜೊತೆಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್
ಹಾಗೆಯೇ ಹಲವಾರು ಫೋಟೋಶೂಟ್‌ಗಳನ್ನ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇವರ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಲೈಟ್ಸ್ ಗಳು ಹಾಗೂ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಮೇಘಾ ಶೆಟ್ಟಿ ಬ್ಲ್ಯಾಕ್ ಡ್ರೆಸ್ ನಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ .
ಹಿರಿತೆರೆಯಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ
ಮೇಘಾ ಶೆಟ್ಟಿ ಕಿರುತೆರೆಯಿಂದ ಹಿರಿತೆರೆಗೆ ಹಾರಿದ ನಟಿ ಮೊದಲ ಧಾರಾವಾಹಿಯಿಂದಲೇ ಪ್ರಖ್ಯಾತಿ ಪಡೆದ ಮೇಘಾ ಶೆಟ್ಟಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ .


Click it and Unblock the Notifications











